ಅವಳೇನು ಹೇಳುವುದಿಲ್ಲ ಹಾಗೆಂದು ಅವಳು ಮೌನಿ ಅಲ್ಲ,
ಅವಳ ಕೈಬಳೆ ಸದ್ದಿಗೆ ಮನ ಸೋಲದೆ ಇರುವುದಿಲ್ಲ.
ಅವಳೆಂದೂ ನನ್ನ ಕರೆದಿಲ್ಲ ಹಾಗೆಂದು ಅವಳು ಸುಮ್ಮನಿಲ್ಲ,
ತನ್ನ ಮುಂಗುರುಳ ನಿತ್ಯ ರಾಯಭಾರಿಯಾಗಿ ಕಲಿಸುವುದು ಮರೆತಿಲ್ಲ.
ಅವಳೆಂದೂ ನನ್ನ ಬಳಿ ಬಂದಿಲ್ಲ,
ಹಾಗೆ ತನ್ನ ಗೆಜ್ಜೆ ನಾದವ ನನಗೆತಲುಪಿಸಲುಮರೆತಿಲ್ಲ.
ಅವಳೆಂದೂ ನನ್ನೆದುರು ಕಣ್ಣಲ್ಲಿ ಕಣ್ಣಿಟ್ಟಿಲ್ಲ,
ಹಾಗೆಂದುಕನಸಲಿ ಕೀಟಲೆ ಮಾಡುವುದು ಬಿಟ್ಟಿಲ್ಲ...-
ತಂಗಾಳಿಯೊಂದಿಗೆ ಸರಸವಾಡುತಿದೆ
ಮುಂಗುರುಳು
ಕೈ ಬೆರಳುಗಳ ಸರಸದಾಟದಲಿ
ನುಲಿ ನುಲಿಯುತಾ ಸುಳಿ ಸುಳಿಯುತಾ
ಹಾರಾಡುತಾ
ಅವಳೊಲವ
ಮೊಗದ ಮಂದಹಾಸವು ಮುಂಗುರುಳಿಗೆ
ಪ್ರೇರಣೆಯಾಗುತಿದೆ
ಕೆನ್ನೆಯ ಮೇಲೆ ತೂಗುಯ್ಯಾಲೆಯಾಡುತಾ
ಕದಪಿನ ಲಜ್ಜೆಗೆ ಸ್ಫೂರ್ತಿಯಾಗುತಿದೆ!-
ಮುಂಗುರುಳಿಗೂ ಸಹ
ನಿನ್ನ ಮೇಲೆ ಮನಸಾಗಿದೆ😊
ಕಣ್ಣ ಮುಂದೆಯೆ ನೀ ಸರಿಸುವೆ
ಎಂದು ಕಾದು ಕುಳಿತಿದೆ..😍
-ಮನ
-
ಅವಳ ಮುಂಗುರುಳು ಸದ್ದಿರದೇ ಬಿಕ್ಕಿವೆ;
ಅವನ ಎರಡಕ್ಷರದ ಹೆಸರ ಅಳಿಸಿಹಾಕಿದ
ಕಿಡಿಗೇಡಿ ಅಲೆಯ ಕಂಡು..!!
-
ಅಸಹನೀಯ
ನಿರಾಕರಣೆಯ
ನಡುವೆಯೂ
ಸಹನೀಯ
ಬಯಕೆಯೊಂದು
ಕುಡಿಯೊಡೆದಿತ್ತು,
ಸುಮ್ಮನೆ ಇಳಿಬಿಟ್ಟ
ಮುಂಗುರುಳಿನೊಳಗೆ
ಲಾಸ್ಯವಾಡಲು
ಕಾದು ಕೂತ
ತುಂಟತನವೊಂದರಂತೆ;-
ಅವಳ ಮುಂಗುರುಳಿಗೂ
ನನ್ನ ಹಾಗೆ
ಅವಳ ಕೆನ್ನೆಯ ಮೇಲೆ
ಮುತ್ತಿಡುವ ಆಸೆಯಿರಬೇಕೆನೋ..,
ಅದೇಷ್ಟೋಸಾರಿ ಅವಳು ಹಿಂದೆ
ತಳ್ಳಿದರೂ ಸಹ ಮತ್ತೇ ಮತ್ತೇ
ಮುತ್ತನಿಕ್ಕುತ್ತಿದೆ ಕೆನ್ನೆಗೆ..!!
-
ಗಾಳಿಯ ಕಚಗುಳಿಯ
ತಾಳಲಾರದೆ ಹಾರಾಡುವ
ನಿನ್ನ ಮುಂಗುರುಳ ಮರುಳು
ಸಾಂಕ್ರಾಮಿಕವಾಗಿದ್ದಿರಬೇಕು,
ಬಳಿ ಕುಳಿತ ನನ್ನನ್ನೂ ಬಿಟ್ಟಿಲ್ಲ!!-
ಮುಂಗುರುಳ ಮೇಲುದುರಿದ
ಪ್ರತಿ ಮಳೆ ಹನಿಯು ನಿನ್ನೆಸರ
ಜಪಿಸಿದಂತೆ,
ಬಿರಿದ ಹೂವೊಂದು ಅವನ
ಪಾದವ ಸೇರಿದಂತೆ,
ಎಣೆದ ಸ್ವಪ್ನವೊಂದು ಮೆಲ್ಲಗೆ
ನನಸಾದಂತೆ,
ಕಿರುಬೆರಳೊಂದು ಸಹಚರನ
ಹುಡುಕಿದಂತೆ,
ದಿನಚರಿಯೊಂದು ವಿಚಾರವಿಲ್ಲದೆ
ಬದಲಾದಂತೆ,
ಹಿತವಾದ ಕನಲುವಿಕೆಯೊಂದು
ಮಿತವಾಗಿ ಮನ ತಟ್ಟಿದಂತೆ,
ಈ ಎಲ್ಲದರ ಅಖೈರು ಮೊತ್ತ ನೀನು,
ನಿನ್ನೊಲವನೇ ಬಯಸುವ ಲೆಕ್ಕಾಚಾರಿ ನಾನು ;-
ನಿನ್ನ ಮುಂಗುರುಳು
ನಿನ್ನ ಅಧರಗಳೊಂದಿಗೆ
ಪೈಪೋಟಿಗೆ ಇಳಿದಿವೆ ಸಾಕಿ
ನನ್ನ ಅಧರಗಳಿಗೆ ಮುತ್ತಿಕ್ಕಲು
ತೇಲಿಕೊಂಡು ಬರುತ್ತಿವೆ..-