ನಿನ್ನಾಗಮನಕ್ಕಾಗಿ
ಕಾದ ನನ್ನೆದೆಯ ಅಂಗಳವು
ಬರಡಾಗಿ ಬೆಂಡಾಗಿದೆ.!
ಆಂತರ್ಯದಿ ಮನೆ ಮಾಡಿದ
ನನ್ನೊಲವ ಕನಸುಗಳೆಲ್ಲವು
ಛಿದ್ರವಾಗಿ ದಿಕ್ಕಾಪಾಲಾಗಿವೆ.!
ಯಾರಿಗಾಗಿ ಈ ಕಾತರ
ಇಲ್ಲದವರಿಗೆ ತರಾತುರ
ಬಾಡಿ ಸೊರಗಿದ
ಹೃದಯದಂಗಳು ಬಿಕೋ ಎನ್ನುತಿದೆ
ಹಸಿರು ಸಿಂಚನವಿಲ್ಲದೆ
ಬಾನಾಡಿಗಳ ಕಲರವಿಲ್ಲದೆ
ಅವನೊಲವಿನ ಬರುವಿಕೆಯ
ಸದ್ದಿಲ್ಲದೆ ನೀರಸವಾಗಿದೆ
ನಿಶ್ಯಬ್ಧತೆಯ ನಿಗೂಢತೆಯೊಳಗೆ.!-
ಜಾರಿತ್ತು ಸೆರಗು
ಅಂದು ನಿನ್ನೊಲವಿನಲ್ಲಿ
ಇಂದು ಬಯಸುತ್ತಿದೆ
ನಿನ್ನೊಲವಿನ ಸಿಹಿ
ಅಪ್ಪುಗೆಯನ್ನು
ಕಾದಿರುವ ದೇಹವಿದು
ನಿನ್ನ ಅಪ್ಪುಗೆಯಲ್ಲಿ
ತಂಪಾಗಿಸು ಒಮ್ಮೆ
ನಿನ್ನೊಲವಿನ
ಬಂಧನದಲ್ಲಿ ಬಂಧಿ
ಯಾಗಿಸು ನನ್ನ
ನಾ ಮರೆಯುವೆ
ಒಂದು ಕ್ಷಣ ಈ
ಜಗವನ್ನ..
-
ಹೇಗಿದೆ ಮಾಯಾಜಿಂಕೆಯ ಮಾಯಜಾಲ.!
ಎಲ್ಲಾ ಹೆಣೈಕ್ಳು ಹಿಂದೆನೆ ವೆಂಕಟರಮಣನ ದೈವಬಲ.!-
ಅವನ ಬರುವಿಕೆಗಾಗಿ
ಕಾದ ನನ್ನೀ ಮನವು
ಕೊನೆಗೂ ಸೋತಿತು
ಅವನ ಆಸರೆಯ
ಒಲವು ತಪ್ಪಿತು
ಸಂಜೆಯ ಮಬ್ಬುಗ್ಗತ್ತಲು
ಕವಿದಾಗ ಅವನು
ನೆನಪಾಗದ ದಿನವಿಲ್ಲ
ಅವನ ಒಲವಿನ
ಆಸರೆಯಲ್ಲಿ ಕರಗುವ
ಆಸೆಯು ಫಲಿಸಲಿಲ್ಲ
ಕೊನೆಗೆ ಒಂಟಿತನವೆ
ಹಿತವೆನಿಸಿತು ಈ ಮನಕ್ಕೆ-
ನಾನು ಇರೋ ಜೀವನ
ನಿನಗಿಂತ ತುಂಬಾ ವಿಭಿನ್ನ
ಎಲ್ಲಾ ಗೊತ್ತಿದ್ದು ಪ್ರೀತಿಸುವೇ
ನಾ ನಿನ್ನ....!!
ತಪ್ಪು ತಿಳಿಯಬೇಡ
ನೀ ನನ್ನ ...!!-
ಬರುವೆಂದು ಹೇಳಿ
ಹೋದವನು ನೀನು
ವಾರಗಳು ಕಳೆದು
ತಿಂಗಳುಗಳಾದವು
ತಿಂಗಳುಗಳು
ವರುಷಗಳಾದವು..
ಆದರೂ ನಿನ್ನಾಗಮನದ
ಸುಳಿವಿಲ್ಲ..
ಇಲ್ಲೇ ಇರು ಎಂದ
ಆ ನಿನ್ನ ಕೊನೆಯ ಮಾತಿಗೆ ಕಾದು
ಕುಳಿತುಕೊಂಡೆ ಇರುವೆನು
ಯುಗಗಳಾದರು ಸರಿಯೇ
ನನ್ನ ನಲ್ಲಾ..!!-