ಮನದೊಳಗೆ ಧಗಧಗಿಸುತಿದೆ
ನೋವೆಂಬ ಅಗ್ನಿಜ್ವಾಲೆ
ಮರೆಯಬೇಕೆನಿಸಿದರು
ಹಿಂಬಾಲಿಸುವ
ನೆನಪುಗಳ ಸರಮಾಲೆ.!
ಬದಲಾವಣೆಯ
ಬಯಸಿತು ಅದೊಂದು ದಿನ
ಆತುರಪಟ್ಟಿತೇ ಆ ಮನ
ಸುಮ್ಮನಿರದೆ.!
ಇಂದು ನೋವುಗಳ
ತಡೆಯಲಾರದೆ
ಸುಟ್ಟುಕರಕಲಾಗುತಿದೆ
ಆಂತರ್ಯದ ವೇದನೆಯ
ಹೊರತರಲಾಗದೆ.!-
ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ
ಮನಸ್ಸಿನಲ್ಲಿ ಮರೆಯಲಾಗದ ಸವಿನೆನಪಿರುವುದು
ಅದು ನೆನಪಾದಾಗೆಲ್ಲ ನಮಗೆ ಅರಿಯದೆ ಕಣ್ಣಂಚಲ್ಲಿ ಕಂಬನಿ ಮೂಡುವುದು
-
ಮರೆಯಲಾಗದ ಕ್ಷಣವಿದು
••••••••••••••••••••••••••
ಮರೆತರು ಮರೆಯಲಾಗದ
ನೆನಪು ನೀನು ಆಗಿರುವೆ !
ಪ್ರೀತಿಯ ನೀಲಾಕಾಶದ
ಮಿನುಗುವ ನಕ್ಷತ್ರವಾಗಿರುವೆ !!
ಪ್ರೀತಿ ಕುರುಡೆಂದು ಹೇಳುವರು
ಕುರುಡು ಪ್ರೀತಿಯಲ್ಲಿ ಖುಷಿಯ ಕಂಡಿರುವೆ !
ಮಾತು ಬಾರದ ಮೂಕನಾಗಿರುವೆ
ಮೌನ ಸಾಮ್ರಾಜ್ಯದ ಒಡೆಯನಾಗಿರುವೆ !!
ಮರೆಯಲಾಗದ ಸವಿ ನೆನಪಾಗಿ
ಸದಾ ನೀನು ಕಾಡುತಿರುವೆ !
ನಿನ್ನ ನಿಷ್ಕಲ್ಮಷ ಪ್ರೀತಿಗೆ
ನಾನು ಮನ ಸೋತಿರುವೆ !!
ಎಂದಿಗೂ ಬಿಟ್ಟಿರಲಾಗದ
ವಸ್ತುವಾಗಿ ಕಾಡುತಿರುವೆ !
ಕಣ್ಣಂಚಿನಲ್ಲಿ ನೀರಾಗದೆ
ತುಟಿಯಂಚಿನಲ್ಲಿ ನಗುವಾಗುವೆ !!
ಅಂದು ನಿನ್ನ ಭೇಟಿಯಾದ
ಘಳಿಗೆಯ ಸದಾ ನೆನೆದು !
ಇಂದು ಸಂತಸ ಮನೆಮಾಡಿದೆ
ನಿನ್ನ ಮರೆಯಲಾಗದೆ ಸುಮ್ಮನಿರುವೆ !!
✍️ಕಾವ್ಯ ಸಾಮಾನಿ (ಮಲಾರ ಬೀಡು)
-
ತೂಗು ಉಯ್ಯಾಲೆಯಲಿ ಆಡಿ ಪೆಟ್ಟು
ಮಾಡಿಕೊಂಡು ಅಮ್ಮನ ಬಳಿ
ಮರೆಮಾಚಿದ ಅದೆಷ್ಟೋ
ಸಿಹಿ ನೆನಪುಗಳು ಮರುಕಳಿಸಿತೊಮ್ಮೆ...-
ಮರೆಯಲಾಗದ ಜೀವಂತ ನೆನಪು ಅವಳು.
ಮರೆತಷ್ಟು ಆವರಿಸುತ್ತಾಳೆ
ಅರಿತಷ್ಟು ನಿಗೂಢವಾಗುತ್ತಾಳೆ
ಹುಡುಕತ್ತಾ ಹೋದರೆ ಕಣ್ಮರೆಯಾಗುತ್ತಾಳೆ
ಚಿವುಟಿ ಹಾಕಿದರೂ ಬೆಳೆಯುತ್ತಾಳೆ..-
ಪ್ರತಿಯೊಬ್ಬರ ಜೀವನಮಾರ್ಗದಲ್ಲಿ
ವ್ಯಕ್ತಪಡಿಸಲಾಗದ ಒಂದು ರಹಸ್ಯ
ಸರಿಪಡಿಸಲಾಗದ ವಿಷಾದ
ಮುಟ್ಟಲಾರದ ಕನಸಿನಂತೆ
ಮರೆಯಲಾಗದ ಒಂದು ನೈಜ ಪ್ರೀತಿ
ಸದಾ ಅಡಕವಾಗಿರುತ್ತದೆ..!!-
ಜೀವನದಲ್ಲಿ ಎದುರಾಗುವ
ಹಲವಾರು ವ್ಯಕ್ತಿಗಳು
ಜೀವನದಲ್ಲಿ ಕಲ್ಪಿಸಿಕೊಳ್ಳಲಾಗದ
ಕೆಲವು ಪಾಠಗಳನ್ನು
ಕಲಿಸಿ ಹೋಗುವರು
ಅದು ಮರೆಯದ ಹಾಗೇ..!!
-