Sweekrathi R Rao   (Sweekrathi R Rao)
120 Followers · 13 Following

read more
Joined 28 September 2019


read more
Joined 28 September 2019
23 MAY 2024 AT 15:04

ಎಲುಬಿಲ್ಲದ ನಾಲಿಗೆಗೇನು ಗೊತ್ತು
ಕಣ್ಣಿಂದ ಜಾರುವ ಕಂಬನಿಯ ಸಂಕಟ...

-


23 OCT 2023 AT 16:02

ಗೆಳೆಯ....

ನನ್ನಣೆಯ ಮೇಲೆ
ಹೊಳೆಯುವ ಬಿಂದಿ ಅಂಟಿಸಿ ಹೋಗಿರುವೆ,

ಹೊಳಪು ಮಾಸುತಲಿಹುದು

ತೆಗೆಯುವ ಮನಸಂತು ನನಗಿಲ್ಲ
ಮರು ಅಂಟಿಸಲು ನೀನಂತೂ ಬರುವುದಿಲ್ಲ.

-


22 DEC 2021 AT 19:38

ತುಂಟ ತುಂಟ ತುಟಿಯ
ನಗೆಯ ....
ಕಣ್ಣ ನೋಟ ಹೊಳೆವ
ಬಗೆಯ ....
ನೀ ಎದುರು ನಿಂತುಸೆಳೆವ
ಸಮಯ ....
ವರ್ಣನೆಗೆ ಪದ
ಸಾಲದು ...
ಒಲವ ಭಾವ ತುಂಬಿಕೊಳ್ಳಲು
ಮನದ....
ನೆಲದ ನೆಲೆ ಸಾಲದು

-


22 AUG 2021 AT 6:00

ಅದೆಷ್ಟು ಸಂತೋಷ ನಿನ್ನ ನೋಡಲು...
ಅದೇನು ಉಲ್ಲಾಸವೇ ನಿನ್ನ ಹೊಗಳಲು...
ತಪಸ್ಸು ಮಾಡಿಲ್ಲ ನಾನು ನಿನ್ನ
ನಗು ಕಾಣಲು...
ಆದರೆ ನನಗೆ ಅದೃಷ್ಟವಿಲ್ಲ
ನಿನ್ನ ಜೊತೆ ಮಾತಾಡಲು...
ಹಾಲ್ಗೆನ್ನೆಯ ಬಣ್ಣದವಳು....
ಮುದ್ದು ಮುಖದ ಮುಗುಳ್ನಗೆಯ
ಗೊಂಬೆ ನನ್ನವಳು....

-


17 MAY 2021 AT 16:22

ಸಮುದ್ರವೆಷ್ಟೇ ದೊಡ್ಡದಿದ್ದರೂ
ದಣಿದಾಗ ಕುಡಿಯಲೊಂದನಿ
ನೀರು ಸಿಗುವುದಿಲ್ಲ ...
ಹಾಗೆಯೇ
ಬಂಧುಗಳೆಷ್ಟೇ ಜನರಿದ್ದರೂ
ನೊಂದಾಗ ಸಮಾಧಾನಿಸಲು
ತಾಯಿ ಇಲ್ಲವಾದರೆ
ಅದು ಅರಮನೆಯಾದರೂ
ಭೂತ ಬಂಗಲೆಯಂತೆ.

-


5 APR 2021 AT 21:04

ಎದೆ ನೋವಿಗೆ
ಔಷಧಿ ಸಾಕಷ್ಟಿದೆ
'ಆದ್ರೆ'
ಎದೆಯಲ್ಲಿರೋ
ನೋವಿಗೆ ಔಷಧಿ
ಇಲ್ಲ....

-


11 MAR 2021 AT 18:02

ಬಾನಂಗಳದಿ ಮಿಂಚುತಿಹ ತಾರೆ ನೀ.....
ದೂರ ನಿಂತು ನೋಡಿ ಧನ್ಯ ನಾ.....
ಬರಲಾಗದೆನಗೆ ಹತ್ತಿರ ಎಂಬ ಖಾತ್ರಿ.....
ಆದರೂ ನನಗೂ ಈ ಕತ್ತಲಿಗೂ ಮೈತ್ರಿ.....

-


4 DEC 2020 AT 19:47

Life is like an
empty vessel
You have to fill it
*What u want*

-


1 NOV 2020 AT 19:09

ಒಳಗೆ ಕುದಿಯುವ ಭೂಮಿ
ಹೊರ ಮೈಯಲ್ಲಿ ನಗುವಳು....
ಬದುಕೇ ಹಾಗೆ ಒಳಗೆ ಕುದಿ ಎಸರು
ಹೊರಗೆ ಬೆಂಗಾಳು....

-


11 AUG 2020 AT 19:30

ಮೂಡಣದಿ ಬಂದ
ರವಿಯಂತೆ...
ನೀ ಬಂದೆ ನನ್ನ ಬಾಳಿಗೆ
ಬೆಳಕಂತೆ...
ಅದೆಷ್ಟು ಬೇಡಲಿ...
ನಿನ್ನ ಒಪ್ಪಿಗೆಗೆ
ಅದೆಷ್ಟು ಕಾಯಲಿ...
ನಿನ್ನ ಅಪ್ಪುಗೆಗೆ
ಸಾಕು ಮಾಡಿನ್ನು
ನಿನ್ನ ಅಂತೆಕಂತೆ....
ಒಪ್ಪಿ ಅಪ್ಪಿ ದೂರಾಗಿಸು
ನನ್ನ ಚಿಂತೆ ....
ಇನ್ನು ಕಾಯಿಸದಿರು
ನನ್ನ ಬಕಪಕ್ಷಿಯಂತೆ...

-


Fetching Sweekrathi R Rao Quotes