QUOTES ON #ಬನ್ನಿ

#ಬನ್ನಿ quotes

Trending | Latest

: ಸೋನೆ

-



ಸೋನೆ ಮಳೆ ಬಂದಾಗ : ೨೮
_______________________________________
ಮಹಾಬಲಿ ಕಂಸನ ಕುತಂತ್ರಕ್ಕೆ ಇಂದ್ರದೇವ ಸಿಲುಕಿಹನು, ಇಲ್ಲ ಸಲ್ಲದ ಮಾತುಗಳನಿಟ್ಟು ಕೋಪಗೊಳಿಸಿದನು. ರಾಧಾಕೃಷ್ಣರ ಪ್ರೇಮದ ಮೇಲೆ ಕಂಸನ ಕೆಂಗಣ್ಣು ಬಿದ್ದು, ಆ ಪ್ರೇಮವನ್ನು ಸಡಿಲಾಸುವ ಕಾರ್ಯದಲ್ಲಿ ತೊಡಗಿದನು. ನೂರಾರು ಬಾರಿ ಕುತಂತ್ರವನ್ನು ಸೃಷ್ಟಿಸಿ, ರಾಧಾಕೃಷ್ಣರ ಪ್ರೇಮಕ್ಕೆ ಚ್ಯುತಿ ಬರುವಂತೆ, ಇಂದ್ರದೇವನನ್ನು ಎತ್ತಿ ಕಟ್ಟಿದನು. ಇಂದ್ರದೇವನ ಭಕ್ತ ಅವಮಾನಿಸಿದನೆಂದು ಕೋಪಗೊಂಡು, ಭಯಂಕರ ವಿಕೋಪವನ್ನೇ ಸೃಷ್ಟಿಸಿದನು. ಮಳೆ ಮತ್ತು ಬಿರುಗಾಳಿಯೊಂದಿಗೆ ಬರ್ಸಾನ ಮತ್ತು ಬೃಂದಾವನ ಇಂದ್ರದೇವನ ಆರ್ಭಟಕ್ಕೆ ಭಯಗೊಂಡ ಜನರು, ರಾಧಾಕೃಷ್ಣರ ಸಾಂಗತ್ಯದೊಳಗೆ ಮಳೆ ಬಿರುಗಾಳಿ ನಿಂತೋಗಿ, ರಾಧಾಕೃಷ್ಣರ ಅಸಲಿ ಸತ್ಯವನ್ನು ಅರಿತ ಇಂದ್ರದೇವ, ಎಲ್ಲರ ಮನಸ್ಸಿಗೆ ಮುದ ನೀಡುವಂತ ಸೋನೆ ಮಳೆಯನ್ನು ಸುರಿಸಿದನು. ಎಲ್ಲೆಡೆ ನವಿಲಿನ ನರ್ತನದ ಛಾಯೆ ಆವರಿಸಿತು.

-



ಅಂದೆಲ್ಲ ನಡೆಯುತಿತ್ತು ಬನ್ನಿಯ ವಿನಿಮಯ ಬಲು ಜೋರು ಜೋರು
ಇಂದೆಲ್ಲ ನಡೆಯುತಿದೆ ಮನಿಯ ವಿನಿಮಯ ಬಲು ಜೋರು ಜೋರು

ರಸ್ತೆಯಲೆಲ್ಲ ಕಾಣುತಿತ್ತು ಜನಜಂಗುಳಿ ಬಂಗಾರದ ವಿನಿಮಯದಲ್ಲಿ
ಇಂದೂ ಕಾಣುತ್ತಿವೆ ವಾಹನಗಳ ಅಬ್ಬರ ಬಲು ಜೋರು ಜೋರು

ಅಂದೆಲ್ಲ ಬನ್ನಿ ಬಂಗಾರವಾಗಿ ಮೈ ಮನಗಳಲೆಲ್ಲ ತುಂಬಿರುತಿತ್ತು
ಇಂದೆಲ್ಲ ಬನ್ನಿ ತಪ್ಪಲಾಗಿದೆ ಮನೆಯಲೆಲ್ಲ ಬಲು ಜೋರು ಜೋರು

ಮನೆಯಂಗಳಕೆ ಬಂದವರಿಗೆ ಪ್ರೀತಿಯ ಸತ್ಕಾರ ಸಿಗುತಿತ್ತು ಅಂದು
ಇಂದು ಧಾರವಾಹಿಗಳಲಿ ಮುಳುಗಿರುವರು ಬಲು ಜೋರು ಜೋರು

ಸಂಸ್ಕಾರವು ಮರೆಯಾಗಿ ಸ್ವಾರ್ಥವು ಹೆಮ್ಮೆಯವಾಗಿರುವುದ ಕಂಡು
ಮಲ್ಲಿಯ ಮನವು ಅಳುತಿದೆ ಮೂಕವಾಗಿ ಬಲು ಜೋರು ಜೋರು

-


20 JUN 2020 AT 3:46

ಸುಡುಗಾಡಿ ನಲ್ಲು
ಅರಳಿತ್ತು ಒಂದು ಹೂವು

-



ಟಂಕಾ : ಉಸಿರು

ವಿರಹಗೀತೆ
ನನ್ನೀ ಮೌನದೊಳಗೆ
ಬೇಸರಗೊಂಡು
ಉಸಿರಲ್ಲಿ ಬೆರೆತು
ಮೌನವಾಗಿ ನೊಂದಿದೆ

-



ಹಚ್ಚಹಸಿರಿನ ಮುಕುಟದಿ ಕಂಗೊಳಿಸುತ್ತಿದ್ದ ಗೋವರ್ಧನ ಗಿರಿಯನ್ನು ಆರಾಧಿಸುವ ಶುಭಕಾರ್ಯ ಗೋಕುಲದಲ್ಲಿ ಸಜ್ಜುಗೊಂಡಿತ್ತು..ಈ ಬಗೆಯ ತಯಾರಿ ಗೋಕುಲದ ಮುಗ್ಧ ಮನದ ಪ್ರಜೆಗಳಿಗೆ ಹೊಸತೆಂದೇ ಹೇಳಬಹುದು..ಏಕೆ ಅಂತಿರಾ?? ಹೌದು ಪ್ರತಿ ಬಾರಿ ಇಂದ್ರದೇವನ ಆರಾಧನೆ ನಡೆಯುತ್ತಿದ್ದ ಸಂಪ್ರದಾಯದ ನಡುವೆ ಈ ವರುಷ ನವಸಂಪ್ರದಾಯವೊಂದು ನಡೆಯುವುದರಲ್ಲಿತ್ತು..ಸಕಲ ಜೀವರಾಶಿಗಳಿಗೆ ಆವಾಸವಾಗಿರುವ ಹಸಿರಿನ ಮೇರು ಪರ್ವತವಾದ ಗೋವರ್ಧನ ಗಿರಿಗೆ ಆ ಆರಾಧನೆ ಸಲ್ಲಬೇಕೆಂಬುದು ಶ್ರೀಕೃಷ್ಣನ ನಿಲುವಾಗಿತ್ತು..ಅಂತೆಯೇ ನಡೆಯುವ ಪರ್ವವನು ಕಂಡು ಕ್ರೋಧಗೊಂಡ ಪುರಂದರನು ಭಾರಿ ಮಳೆಯನ್ನೇ ಸುರಿಸಿರಲು ಮಳೆಯಿಂದ ನೆರೆಯ ವಿಕೋಪ ಬಂದಿರಲು ಶ್ರೀಕೃಷ್ಣನು ತನ್ನ ಪುಟ್ಟ ಕರಗಳ ಕಿರುಬೆರಳಿನಿಂದ ಬೃಹದಾಕಾರದ ಗಿರಿಯನ್ನು ಎತ್ತಿಹಿಡಿದನು..ಅಚ್ಚರಿಯ ಘಟನೆಗೆ ಸಾಕ್ಷಿಗೊಂಡ ಜನತೆ ಅದರ ನೆರಳನ್ನೇ ಆಶ್ರಯಿಸಿರಲು ತಪ್ಪಿನ ಮನವರಿಕೆಯಾದ ಇಂದ್ರನು ಸುರಿಸುತ್ತಿದ್ದ ಮಳೆಯನ್ನು ನಿಲ್ಲಿಸಿದನು..ಮುಕುಂದನ ಬಳಿ ಕ್ಷಮಾಪನೆಯ ಬೇಡುತ ಭಕುತಿಯಿಂದ ವಂದಿಸುತಿರಲು ವರುಣ ದೇವನು ಸುರಿಸಿದ ಸೋನೆ ಮಳೆಯು ತಂಪಿನ ವಾತಾವರಣದಿ ಸಂತಸದ ಹೊನಲನೇ ಹರಿಸಿತು..

-


30 MAY 2021 AT 15:14

ಟಂಕಾ : ಬರಹ

ಪ್ರೇಮ ಬರಹ
ನನ್ನೀ ಹೃದಯದಲ್ಲಿ
ಅವಿತುಕೊಂಡು
ಒಲವಲಿ ಬೆರೆತು
ಪ್ರೀತಿಯಲಿ ನೊಂದಿದೆ

-



ರಮಿಸುವಿಕೆ
ಎದೆಯೊಳಗೆ ನಿಂತು
ಉಲ್ಲಾಸ ತಂದು
ಹೊಸ ಬದುಕು ತುಂಬಿ
ಬಾಳು ಹಸನಾಗಿದೆ

-



ಬಂಗಾರದಂಥ ಮನಸ್ಸುಗಳು ಮಾತನಾಡುತ್ತಿದ್ದವಂದು ಕುಶಲೋಪರಿಯೊಂದಿಗೆ
ಬಂಗಾರ ಖರೀದಿಸುವಲ್ಲೆ ಸಮಯ ಕಳೆಯುವುದಿಂದು ಬಲು ಜೋರು ಜೋರು.

-


19 SEP 2020 AT 16:31

ಸಣ್ಣ ಪುಟ್ಟ ಕಾರಣಗಳಿಗೆ
ಸಂಬಂಧಗಳು ಅಸುನೀಗಿದೆ
ಮಾನವೀಯ ಮೌಲ್ಯಗಳು
ದಿನೇ ದಿನೇ ಕ್ಷೀಣಿಸುತ್ತಿದೆ
ಅಹಂ ಭಾವದಿಂದ ಜನರ
ಕಂಗಳು ಕುರುಡಾಗಿದೆ
ನಂಬಿಕೆಗಳು ಕೊಚ್ಚಿಹೋಗಿ
ಅಪನಂಬಿಕೆ ಮನೆಮಾಡಿದೆ
ಅನುಮಾನಗಳಿಗೆ ಪ್ರೀತಿ,
ಸ್ನೇಹ ಮರೆಯಾಗಿದೆ
ಜಗದಲಿ ಎಲ್ಲವೂ
ಅಯೋಮಯವಾಗಿದೆ....

-