ಗುರು ತೋರುವನು ಗುರಿ
ಗುರುವಿನಿಂದ ಯಶಸ್ಸಿನ ಗರಿ,
ಗುರುವಿಲ್ಲದೆ ಜ್ಞಾನ ದೊರಕದು
ಜ್ಞಾನವಿಲ್ಲದೆ ಬದುಕು ಕಟ್ಟಲಾಗದು.-
ಬೆಂಗಳೂರಿನಲ್ಲಿ ಜೀವನ... ಮನಸ್ಸಿಗೆ ತೋಚಿದ್ದನ್ನು
ಬರೆಯುವ ಹವ್ಯಾಸವಿದೆ... ತರ್ಲೆಗೆ ಹೆಸರುವಾಸಿ... read more
ತಾಳ್ಮೆಯ ಸಂಕೇತ ಗುರು ರಾಘವೇಂದ್ರ
ಕರುಣಾಳು ಪ್ರಭು ಗುರು ರಾಘವೇಂದ್ರ
ಭಗವದ್ಭಕ್ತರ ಪ್ರಿಯ ಗುರು ರಾಘವೇಂದ್ರ,
ಆಪತ್ಭಾಂದವ ಗುರು ರಾಘವೇಂದ್ರ
ದೀನರ ಬಂಧು ಗುರು ರಾಘವೇಂದ್ರ.-
ನರನಲ್ಲಿ ಯುಕ್ತಿಯ ಜೊತೆ ಭಕ್ತಿಯಿರಬೇಕು
ಶ್ರಮದ ಜೊತೆ ಕ್ರಿಯಾತ್ಮಕ ಕಲೆಯಿರಬೇಕು,
ಆಗ ಯಶಸ್ಸಿನೊಂದಿಗೆ ಸಿಗಲಿದೆ ಹೊಸ ಬೆಳಕು.-
ಮನೆ ಮನಗಳನ್ನು ಕಾಯುವ
ನಂಬಿದವರ ಕೈ ಹಿಡಿಯುವ
ವಿವಿಧ ರೀತಿಲಿ ಸೂಚನೆ ತೋರುವ,
ಮನಕೆ ನೆಮ್ಮದಿ ನೀಡುವ
ಜಗದ ಏಕೈಕ ಗುರುವೆ ರಾಘವೇಂದ್ರರು.-
ಪರಮೇಶ್ವರನ ಹೃದಯೇಶ್ವರಿ ಪಾರ್ವತಿ
ಬೇಡಿದವರಿಗೆ ವರ ನೀಡುವಳು ಶಿವನ ಸತಿ,
ದೇವಿಗೆ ಉಂಟು ನವದುರ್ಗೆಯರ ಶಕ್ತಿ
ಗೌರಿ ಪೂಜೆಯಿಂದ ಲಭಿಸುವುದು ಸದ್ಗತಿ.
ಗಣಗಳಿಗೆ ಅಧಿಪತಿಯಾದ ಗಣಪತಿ
ಈ ದೇವ ಒಲಿದರೆ ಬದಲಾಗುವುದು ಪರಿಸ್ಥಿತಿ,
ವಿಘ್ನಗಳನ್ನು ನಿವಾರಿಸುವ ವಿಘ್ನೇಶ
ಮೊದಲ ಪೂಜೆಗೆ ಭಾಜನನಾದ ಗಣೇಶ,
ಡೊಳ್ಳು ಹೊಟ್ಟೆ ಹೊಂದಿದ ಲಂಬೋದರ
ಪುಟ್ಟ ಮಕ್ಕಳ ಹೃದಯ ನಿವಾಸಿ ಈ ಬಾಲಚಂದಿರ,
ಮಂಗಳಕರ ವದನ ಹೊತ್ತು ಕೂತ ಸುಮುಖ
ಗರಿಕೆ ನೀಡಿದರೆ ಫಲ ಕೊಡುವನು ವಿನಾಯಕ.-
ಜಾತಿ ಮತಗಳ ದಾಟಿ ಸರ್ವರಿಗೂ ಗುರುವಾದ ರಾಘವೇಂದ್ರ
ಶಾಂತಿ ಮತ್ತು ಸಂಜೀವಿನಿಯ ಸ್ವರೂಪ ರಾಘವೇಂದ್ರ,
ಭಕ್ತರ ಸಂಕಷ್ಟಗಳ ಸಂಕೋಲೆ ಬಿಡಿಸುವಾತ ರಾಘವೇಂದ್ರ
ದಿಕ್ಕು ಕಾಣದೆ 'ಗುರುವೆ' ಎಂದಾಗ ದಾರಿ ತೋರಿಸುವರು ರಾಘವೇಂದ್ರ.-
ಸಮಯಕ್ಕಿಂತ ದಿವ್ಯೌಷಧ ಮತ್ತೊಂದಿಲ್ಲ
ಪ್ರಾರ್ಥನೆಗಿಂತ ಬೇರೆ ಸಂಜೀವಿನಿಯಿಲ್ಲ,
ನಗುವಿಗಿಂತ ಬೆಲೆ ಬಾಳುವ ಒಡವೆಯಿಲ್ಲ
ನೆನಪುಗಳಿಗಿಂತ ಬೇರೆ ಸಂಪತ್ತು ಇಲ್ಲ.-
ಮಳೆಯಿಂದ ತುಂಬಿತು ಇಳೆ
ಮಳೆಯಿಂದ ಇಳೆಗೆ ವಿಭಿನ್ನ ಕಳೆ,
ಕಾರ್ಮೋಡಗಳಿಂದ ಗುಡುಗಿನ ಕಹಳೆ
ಮಳೆಯಿಂದ ತಂಪಾಯ್ತು ಸಂಜೆಯ ವೇಳೆ,
ಮಳೆಯ ಆರ್ಭಟವು ಸೃಷ್ಟಿಸಿದೆ ಹೊಸ ರಗಳೆ.-
ಜಗದೊಡೆಯನ ಜನುಮದಿನ
ಭಕ್ತರ ಪಾಲಿಗೆ ಹಬ್ಬದ ದಿನ,
ಭಗವದ್ಗೀತೆ ಸಾರಿದೆ ಮುಕುಂದ
ಅದರಲ್ಲಿದೆ ಬದುಕಿನ ಆನಂದವೆಂದ,
ಜಗವು ನಡೆಯುತಿದೆ ಮುರಾರಿಯ ಕೃಪೆಯಿಂದ
ದೇವಕಿ ನಂದನನಿಗೆ ಶರಣು ಶರಣಾರ್ಥಿ ಮನದಿಂದ.-
ನಮ್ಮ ಭಾರತ ಚಿನ್ನದ ಭಾರತ
ನಮ್ಮ ಭಾರತ ಸನಾತನ ಭಾರತ,
ನಮ್ಮ ಭಾರತ ಶಕ್ತಿಶಾಲಿ ಭಾರತ
ನಮ್ಮ ಭಾರತ ಮಹಾನ್ ಸಾಧಕರ ಭಾರತ,
ನಮ್ಮ ಭಾರತ ಕೃಷಿಕರ ಭಾರತ
ನಮ್ಮ ಭಾರತ ತಾಂತ್ರಿಕತೆಯಲ್ಲಿ ಮಾದರಿಯಾದ ಭಾರತ,
ನಮ್ಮ ಭಾರತ ಎಲ್ಲರ ಮನಗಳ ಮೆಚ್ಚಿನ ಭಾರತ.
ಎಲ್ಲರಿಗೂ ೭೯ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🙏.-