ಅನುಭವದ ಲೆಕ್ಕಾಚಾರವಿದು ಗಣಿತದ ಸಂಕಲನದಂತೆ;
ಎಡವಿದರಂತು ಮಣ್ಣುಮುಕ್ಕುಸುವರು ಬಿಡದ ಸಂಚಲನದಂತೆ!-
ಕಳೆದು ಹೋದ ಸಮಯ ಮತ್ತು ಕಳೆದು ಹೋದ ನಂಬಿಕೆ ಗಳಿಸುವದು ಕಷ್ಟ ಮಾತ್ರ ಅಲ್ಲ ಗಳಿಸಲು ಆಗುವುದೇ ಇಲ್ಲ.👍
-
ಮುಖಕ್ಕೆ ಬಣ್ಣ ಬಳಿದುಕೊಂಡು ನರ್ತಿಸುವ ಹಾಗೇ ಆಗಿದೆ ಈ ಪ್ರಪಂಚದ ಕಥೆನೂ.....
-
ದುಡ್ಡು ಎಣಿಸುವ ವ್ಯಕ್ತಿ ದೇಶ
ಸುತ್ತಿದರೇ ಪುಸ್ತಕ ಓದುವ
ಬಾಲಕ ಪ್ರಪಂಚ ಸುತ್ತುವನು.-
ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದರೂ
ಏನು ಪ್ರಯೋಜನವಿಲ್ಲ...
ಕೊನೆಗಾಲದಲ್ಲಿ ನಾವು ಈ ಪ್ರಪಂಚ ಬಿಟ್ಟು ಹೋಗುವಾಗ ಕೊಂಡೋಗುವುದು
ನಾವು ಮಾಡಿದ ಪಾಪ- ಪುಣ್ಯದ ಕರ್ಮಗಳು ಮಾತ್ರ.-
ಜಾರುತಲೆ ಹೋಯಿತು
ಒಂದು ಕ್ಷಣವೂ ನಿಲ್ಲಲೇ ಇಲ್ಲ..
ಇವಾಗ ಅನುಭವವಾಯಿತು
ಬದುಕು ಉಸುಕಿನ ತರಹವೆಂದು. .-
ನನ್ನದೇ ಒಂದು ರಾಜ್ಯ ಸ್ಥಾಪಿಸುತ್ತಿರುವೆ,
ಇಲ್ಲದ ನೆಮ್ಮದಿ ಹುಡುಕುತಿರುವೆ,
ಕಾಣದ ಬೆಳಕನು ಕನಸು ಕಟ್ಟಿ ಕಾಯುತ್ತಿರುವೆ,
ನೆಮ್ಮದಿ ಕೊಡುವ ನಗುವನ್ನು ಬಯಸುತಿರುವೆ,
ಅವಳ ಮೌನದ ಮಾತನ್ನು ಆಲಿಸುತ್ತಿರುವೆ,
ಈ ಕತ್ತಲೊಳಗೆ ಬಣ್ಣವೇ ಇಲ್ಲದೆ ಅವಳ ಚಿತ್ರ ಬಿಡಿಸಿರುವೆ,
ಸಿಗದ ಗೆಳತಿಯ ನೆನಪಲ್ಲಿ ಅತ್ತು-ಕರೆದು ನೆನೆಯುತ್ತಿರುವೆ,
ಗೊತ್ತೇ ಆಗದೆ ಎಚ್ಚರಗೊಳ್ಳುವೆ
ಈ ಕತ್ತಲು ಪ್ರಪಂಚಕ್ಕೆ ಅಧಿಪತಿಯಾಗಿರುವೆ,
ಅನುಕ್ಷಣವು ಅವಳ ನೆನೆಯುವೆ,
ಪ್ರತಿಕ್ಷಣವೂ ಅವಳನ್ನು ಪ್ರೀತಿಸುವೆ,
ಕ್ಷಣಕ್ಷಣಕ್ಕೂ ಅವಳನ್ನು ಪೂಜಿಸುವೆ,
ಅವಳಿಂದ ಈ ರಾಜ್ಯಕ್ಕೆ ಅವಳನ್ನೇ ಮಂತ್ರಿಯಾಗಿ ನೇಮಿಸಿರುವೆ......-
ಮನೆ ಕಟ್ಟುವಾಗ ಯಾರು ಬಂದು ಸಹಾಯ ಮಾಡಿವುದಿಲ್ಲ , ಆದರೆ ಗೃಹಪ್ರವೇಶಕ್ಕೆ ಬಂದು ಎಲ್ಲರು ಹಾರೈಸುತ್ತಾರೆ... ಹಾಗೆಯೇ ಜೀವನದಲ್ಲಿ ಸಾಧನೆ ಮಾಡಲು ಹೊರಟಾಗ ಯಾರು ಬಂದು ಸಹಾಯ ಮಾಡಿವುದಿಲ್ಲ , ಗುರಿ ತಲುಪಿದ ಮೇಲೆ ಎಲ್ಲರು ಬಂದು ಹಾರೈಸುತ್ತಾರೆ... ಇದೇ ನಮ್ಮ ಜಗತ್ತು...
-
ನಿನ ಮಡಿಲೆ ಬದುಕಾಗಿರಲು
ನಿನ ಸಿಂಧೂರವೇ ನೇಸರ
ಕಂಗಳ ಕಾಂತಿಯೇ ಬೆಳಕು
ಬಿಸಿಯುಸಿರೇ ತಂಗಾಳಿ
ಕಿವಿಯೋಲೆಗಳೇ ಕಲರವ
ಕೆನ್ನೆ ಕಚ್ಚುವ ಮುಂಗುರುಳನ
ತಡೆಯುವುದೇ ನನ ಕಾಯಕ
ನಿನಧರಗಳ ಬಿಸಿ ಹಸ್ತಾಕ್ಷರವೇ
ನನ ದಿನಗೂಲಿ ಗೆಳತಿ..
-