ಕವಿತ್ತ ಕರ್ಮಮಣಿ ಪೌಂಡೇಶನ್®   (✍️ ಕವಿತ್ತ ಕರ್ಮಮಣಿ)
1.0k Followers · 975 Following

read more
Joined 22 October 2017


read more
Joined 22 October 2017

ಕನ್ನಡವೇ ನಮ್ಮ ಸಿರಿಬೆಳಕು..!

-



ಮುಸ್ಸಂಜೆ ವೇಳೆಯಲಿ...
ಚಿಟಪಟ ಮಳೆಯಲಿ...
ಬಣ್ಣ ಬಣ್ಣದ ಹಕ್ಕಿಗಳ ಕಲರವ
ತಂಗಾಳಿ ಚಳಿಯಲಿ ಕೇಳುತ
ಬೆಟ್ಟೊಂದರ ಮೇಲೆ ಕುಳಿತು
ಸೃಷ್ಟಿಯನು ಸವಿಯುವ
ದೃಷ್ಟಿಗೆ ಬೆಲೆ ಕಟ್ಟಲು ಸಾಧ್ಯವೇ..?

-



ಭೂಮಿಯಲ್ಲಾಗಲೀ, ಸ್ವತಃ ನಿಮ್ಮ
ಜೀವನದಲ್ಲಾಗಲೀ ಬಯಸದೆ ಬರುವ
ಪ್ರತಿಯೊಂದು ಏರಿಳಿತಗಳ ಕುರಿತು
ಪವಿತ್ರ ಗ್ರಂಥಗಳಲ್ಲಿ ಬರೆದಿಡಲಾಗಿದೆ.
ಮುನ್ನೆಚ್ಚರಿಕೆಗಾಗಿ ಓದಿ ಅರ್ಥೈಸಿಕೊಳ್ಳಿರಿ.

-



ಎಲ್ಲಾರು ಮಾಡುವುದು
'ಪಂಚೇಂದ್ರಿ'ಗಳ ಸುಖಕ್ಕಾಗಿ
ಮತ್ತು ಅವುಗಳ ರಕ್ಷಣೆಗಾಗಿ..!

-



ಬಹುದೇವತಾರಾಧನೆ ಮಾಡಿ
ಅನುಮಾನದ ಸುಳಿಯಲ್ಲಿ
ಸಿಲುಕಿಕೊಳ್ಳುವ ಬದಲು,
ಏಕದೇವತಾರಾಧನೆ ಮಾಡಿ
ನಂಬಿಕೆ ಉಳಿಸಿಕೊಳ್ಳಬೇಕು.

-



ತಾನು ಪ್ರೀತಿಸುತ್ತಿದ್ದ ಪ್ರೇಯಸಿಗೆ
'ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ'
ಎಂದು ತನ್ನ ಮನಸ್ಸಿನ ಭಾವನೆಯನ್ನು
ತಾನು ಅಂದುಕೊಂಡ ಸಮಯದಲ್ಲಿ
ಅಂದುಕೊಂಡ ಹಾಗೆಯೇ ಧೈರ್ಯದಿಂದ
ಅಭಿವ್ಯಕ್ತಪಡಿಸಿ ಯಶಸ್ವಿಯಾದ ವ್ಯಕ್ತಿ
ಇತಿಹಾಸದಲ್ಲಿ ಸಿಗುವುದು ಕಷ್ಟಸಾಧ್ಯ.

-



ಪ್ರೇಮ ಎಂಬುವುದು ಜಾತಿ-ಧರ್ಮ,
ಸಿರಿ-ಸಂಪತ್ತು ಎಲ್ಲದಕ್ಕೂ ಮಿಗಿಲಾದುದು.
ಅದನ್ನು ಅರ್ಥೈಸಿಕೊಂಡು ಅಭಿವ್ಯಕ್ತ
ಪಡಿಸುವುದು ಅಷ್ಟೊಂದು ಸರಳವಲ್ಲ.

-



🎂 ಜನ್ಮದಿನದ ನಿಮಿತ್ಯ ವಿಶ್ವದ
ಜನತೆಗೆ ವಿಶೇಷ ಸಂದೇಶ 🎂
26 ಅಕ್ಟೋಬರ್

-



#ಬದುಕಿನ_ಚಕ್ರ
₹ ಆಗರ್ಭ ಬಡವನ ಮೊಮ್ಮಗ ಕಷ್ಟಪಟ್ಟು ಮಧ್ಯಮ ವರ್ಗಕ್ಕೆ ಪರಿವರ್ತಿತಗೊಳ್ಳುತ್ತಾನೆ.
₹ ಮಧ್ಯಮ ವರ್ಗದವನ ಮೊಮ್ಮಗ ಮತ್ತಷ್ಟು ಕಷ್ಟಪಟ್ಟು ಶ್ರೀಮಂತನಾಗುತ್ತಾನೆ.
₹ ಶ್ರೀಮಂತನ ಮೊಮ್ಮಗ ಯಥಾಸ್ಥಿತಿಯಲ್ಲಿಯೇ ಆಗರ್ಭ ಶ್ರೀಮಂತನಾಗಿ ಮುಂದುವರೆಯುತ್ತಾನೆ.
₹ ಯಥಾಸ್ಥಿತಿಯಲ್ಲಿಯೇ ಮುಂದುವರೆದ ಆಗರ್ಭ ಶ್ರೀಮಂತನ ಮೊಮ್ಮಗ ಮರಳಿ ಮಧ್ಯಮ ವರ್ಗಕ್ಕೆ ಪರಿವರ್ತಿತಗೊಳ್ಳುತ್ತಾನೆ.
#ಪ್ರತಿ 360 ವರ್ಷಗಳಿಗೊಮ್ಮೆ ಬುಡಮೇಲು ಕಟ್ಟಿಟ್ಟ ಬುತ್ತಿ.

-



'ಸಂಪಾದನೆ'ಗೆ ಬಳಸದ ಸಮಯ ವ್ಯರ್ಥ.

ನಂಬಿಕೆಯನ್ನು ಉಳಿಸುವ
ಜ್ಞಾನವನ್ನು ಬಳಸುವ
ಚಾರಿತ್ರ್ಯವನ್ನು ಗಳಿಸುವ
ಸಮಯವೇ ಅತ್ಯಮೂಲ್ಯ.

-


Fetching ಕವಿತ್ತ ಕರ್ಮಮಣಿ ಪೌಂಡೇಶನ್® Quotes