ಜಗತ್ತು ನೋಡದ ಶಿಶುವಿಗೆ ಗರ್ಭದ ಗುಡಿ ಆಗಿಹಳು ತಾಯಿ .....
ಸ್ವಾರ್ಥ ಜಗತ್ತಿಗೆ ಬಂದ ಶಿಶುವಿಗೆ ನಿಸ್ವಾರ್ಥ ಪ್ರೀತಿ, ರಕ್ಷಣೆಯ ಕವಚ ಕರುಣಿಸಿಹಳು ತಾಯಿ....
ತನ್ನ ಶಿಶುವೆ ತನ್ನ ಜೀವ ಎಂದು ರಕ್ಷಿಸುವಳು ತಾಯಿ....
ಶಿಶು ಬೆಳೆದು ದೊಡ್ಡದಾದರು ಚಿಕ್ಕ ಮಗುವಿನಂತೆ ಭಾವಿಸುವ ಏಕೈಕ ಜೀವ ತಾಯಿ .....
ಜೀವನದ ಪಾಠದಲ್ಲಿ ಮೊದಲ ಗುರುವೇ ತಾಯಿ....
ಸೋಲು-ಗೆಲುವು, ನೋವು- ನಲಿವುಗಳಲ್ಲಿ ಸದಾ ಜೊತೆಗಿರುವ ಜೀವ ತಾಯಿ.....
ಸಾಲದು ಈ ಒಂದೇ ಜನುಮ ತೀರಿಸಲು ತಾಯಿ ಋಣವ.............-
ಕಾಣುವ ಕನಸೆಲ್ಲ ನನಸಾಗುತ್ತದೆ ಎಂದುಕೊಂಡರೆ ಮನಸು ಒಪ್ಪುತಿಲ್ಲ
ಕನಸು ಕಾಣದೆ ಇರುವವರಿಲ್ಲ
ಕಾಣುವ ಕನಸುಗಳನ್ನೆಲ್ಲ ನನಸು ಮಾಡಿಕೊಂಡಿರುವವರು ಎಲ್ಲಿರುವರೆ ಗೊತ್ತಿಲ್ಲ
ನಿದ್ರೆ ಇಂದ ಎಬ್ಬಿಸುವ ಕನಸು ಒಂದಾರೆ
ನಿದ್ರೆಯಲ್ಲಿ ಬೀಳುವ ಕನಸು ಹತ್ತು ಹಲವಾರು
ಕನಸಿನ ಲೋಕದಲ್ಲಿ ಕನಸುಗಳದೆ ದರಬಾರು
-
ಸಾಧನೆಯ ಶಿಕರವನ್ನು ಹತ್ತುವಾಗ..
ಸಾಗುವ ದಾರಿಯಲ್ಲಿ ಸಾವಿರಾರು ಮುಳ್ಳುಗಳು
ಅವುಗಳಿಗೆ ಹೆದರಿ ಹಿಂಜರಿಯವ ಬದಲು
ಅವುಗಳನ್ನು ಬದಿಗೆ ಹಾಕಿ ಮುಂದಕ್ಕೆ ಕದಲು
ಖಂಡಿತ ವಿಜಯ ನಿನ್ನದೆ 👉🏻👩🏻
-
ಗಡಿಯಲ್ಲಿ ನಮ್ಮ ರಕ್ಷಣೆಗಾಗಿ ತಮ್ಮ ಜೀವ ಮತ್ತು ಜೀವನವನ್ನು ಪಣಕ್ಕಿಟ್ಟ ಯೋಧರಿಗೆ💂🏻♀️💂🏻♂️
ತಾಯಿ ಭಾರತಾಂಬೆಯ ಮಡಿಲ ಆರಾಧಿಸಿ ನಮಗೆಲ್ಲ ಆಹಾರ ದೊರಕಿಸುವ ನಮ್ಮ ದೇಶದ ಬೆನ್ನೆಲುಬು ಆಗಿರುವ ರೈತರಿಗೆ👨🏻🌾👩🏻🌾 , 75 ನೇ ಸ್ವಾತಂತ್ರ್ಯೋತ್ಸವದ ಶುಭಾಷಯಗಳು 🤝🇮🇳🇮🇳-
ನಮ್ಮ ದೇಶದ ಹೆಮ್ಮೆಯ ಯೋದರಿಗೆ ಗಡಿಯಲ್ಲಿ ಸದಾ ವಿಜಯವಾಗಲಿ,
ಅನ್ಯ ದೇಶದ ಕುತಂತ್ರಕ್ಕೆ ನಮ್ಮ ಯೋಧರು ಬಲಿಯಾಗದಿರಲಿ,
ನಮ್ಮ ತ್ರಿರಂಗ ಧ್ವಜವು ಗಗನದಲಿ ಸದಾ ವಿಜೃಂಬಿಸಲಿ .-
ನನ್ನ ಹೆಸರಿಗೆ ಅರ್ಥ ಸಿಗಲು ನನ್ನ ಗುರಿ ತಲುಪಬೇಕು ಆಗ "ಗೆಲವು" ನನ್ನದಾಗ ಬೇಕು.
ಹುಟ್ಟಿದ್ದು ವಿಜಯದಶಮಿಗೆ ,
ಹಾಗಾಗಿ ಅಮ್ಮ ಇಟ್ಟ ಹೆಸರು "ವಿಜಯಶ್ರೀ"(ಗೆಲವು ,ಯಶಸ್ಸು, ಜಯ, etc..)-