ಅರ್ಪಿಸಿ ಬಿಡುವೆ ನನ್ನನ್ನೆ ಅವಳಿಗೆ
ಅವಳೆ ನನಗೆ ಸಾಲಗಾರ್ತಿಯಾಗುವಂತೆ
ತೀರಿಸಲು ಪ್ರತಿನಿತ್ಯ ಪ್ರೀತಿಸುವಂತೆ,-
ಅಡವಿಯೋಳಡವಿ ಚಾರಣ ಮಾಡುವಾಸೆ
ನಕ್ಕಂತೆ ನಟಿಸಿ ಕುದಿಯುವವರ ಮುಂದೆ
ಅಳುವೊಂದು ಅರಣ್ಯರೋಧವಾದರೇನಂತೆ
ಕಂಬನಿ ತರಿಸಿ ಇಣುಕಿ ನೋಡಲ್ಯಾರಿಲ್ಲ..
ನಯವಾಗಿ ಇರಿಯುವರು ನಮ್ಮೊಳಗಿದ್ದು
ಹದವಾಗಿ ಮೇಯುವರು ಇಲ್ಲಿರಲಾರರು
ಏಕಾಂತ ಓಣಿಯಿದು ಸುಖಾಂತ್ಯವು ತುಂಬಿದೆ
ಹರಿಯುವ ತೊರೆ ಮುಗಿಲೆತ್ತದ ಕಾನನ..
ಇಂಚರದ ಗಾನ ಮನ ನಾಟುವ ಹೂ ಬಾನ
ಸುಖದ ನೆಲೆಯೊಳಗೆ ಕಾಣೆಯಾಗೋ ಮನ
ನಿಸ್ವಾರ್ಥವೇ ತುಂಬಿದಂತಿದೆ ಕಣ ಕಣವೂ
ಮರಳಿ ಬಂದಂತಿದೆ ಲಾಲಿ ಹಾಡುವ ತ್ರಾಣ..
ಬಣ್ಣದ ಮುಖವಾಡಗಳು ಕಾಣೆಯಾಗಿವೆ
ಸಾಲು ಮರಗಳೇ ಖುಷಿಯ ಕೋಣೆಯಾಗಿವೆ..
-
ಹೆಣ್ಣಿನ ಮೌನದ ಭಾಷೆಯ
ಲಿಪಿಯ ಶೋಧ ಹೇಗೆ ಅಂತ
ತಿಳಿಯಲು ನಾ ಯೋಚಿಸಿದೆ
ಮೌನಭಾಷೆಗೆ ಲಿಪಿ ಉಂಟಾ ?-
ಕಣ್ಣಂಚಲಿ ಕಾಣುವ ಪ್ರತಿಬಿಂಬ
ಎದೆಯಂಚಾಲಿ ಕಾಣುವ ಪ್ರತಿ ಹುಂಬತನ
ಹೃದಯಾಂತರದಲಿ ಹುದಗಿ ಇಟ್ಟ ಎಷ್ಟೋ
ಕನಸುಗಳಿಗೆ ರಾಯಭಾರಿ ನನ್ನ ಯಜಮಾನ
ಇಂದು ಉಂಡೆ ನಿಮ್ಮ ಮನೆಯಲ್ಲಿ ಸಕತ್
ಭೂರಿ ಭೋಜನ-
ಪ್ರತಿಯೊಬ್ಬರೂ ಸಂಸ್ಕೃತಿಯ ಪ್ರತಿನಿಧಿ
ಪ್ರತಿ ಅನ್ನದ ಅಗಳು ಹಸಿವಿನ ಪ್ರತಿನಿಧಿ
ಪ್ರತಿ ಅರ್ಚನೆಯು ಜ್ಞಾನದ ಪ್ರತಿನಿಧಿ
ಪ್ರತಿ ಹೊಸತೊಂದು ಬದಲಾವಣೆಯ ಪ್ರತಿನಿಧಿ
ಪ್ರತಿ ವಿವರಣೆಯೂ ಪ್ರಶ್ನೆಯ ಪ್ರತಿನಿಧಿ
ಪ್ರತಿ ಮನಸುಗಳು ಭಾವನೆಗಳ ಪ್ರತಿನಿಧಿ
ಪ್ರತಿ ದುಃಖವೂ ನೋವಿನ ಪ್ರತಿನಿಧಿ
ಪ್ರತಿ ನಗುವು ಖುಷಿಯ ಪ್ರತಿನಿಧಿ
ಪ್ರತಿ ನೆನಪು ಕಳೆದು ಹೋದುದರ ಪ್ರತಿನಿಧಿ
ಪ್ರತಿ ನಮ್ಮ ಮೌಲ್ಯಗಳೇ ನಮ್ಮ ಜೀವನದ ಪ್ರತಿನಿಧಿ
-
ಪ್ರತಿಯೊಂದು ಬರಹವನ್ನು ಮೆಚ್ಚಿ, ಬರೆದಿರುವ ಎಲ್ಲಾ ಬರಹಗಳಿಗೂ
ಸಹಯೋಗ ಮಾಡಿದ ಬರಹಗಾರ್ತಿ.
ಅಚ್ಚುಮೆಚ್ಚಿನ
"""ಪ್ರಕೃತಿ""".
-
ಆಲಿಸಿದ ಪ್ರತಿ ಧ್ವನಿ ಕಿವಿಯಿಂದ ಕಿವಿಗೆ ಹೊರಬಿದ್ದರೆ ಅದು ಬರಿ ಮಾತು!!!!
ಅದೆ ಪ್ರತಿ ಧ್ವನಿ ಕಿವಿಯಿಂದ ಮನಕ್ಕೆ ನಾಟಿದರೆ ಅದು
ಪ್ರತಿಬಾರಿಯೂ ಮರುಕಳಿಸುವ ಪ್ರತಿಧ್ವನಿ ಮುತ್ತು!!!
-