ನಾಡು ನುಡಿಯ ನಡುವಲ್ಲಿ
ನಾಡ ಗೀತೆಯ ಹಾಡೋಣ
ಶಾಂತಿ ಪಾಠವ ಮಾಡೋಣ
ರಾಷ್ಟ್ರ ಧರ್ಮವ ಮೆರೆಯೋಣ !!
ಕನ್ನಡ ನಾಡಿನ ಸಿರಿ ನೋಡು
ಕಲೆ, ಸಾಹಿತ್ಯ ಸಂಸ್ಕೃತಿ ಭಂಡಾರ
ಉತ್ತರ, ದಕ್ಷಿಣ ಕರುನಾಡು
ಗಿರಿ, ಶಿಖರ, ಬಯಲು ಸೀಮೆ, ಸಾಗರ!!
ಮುತ್ತು, ರತ್ನ, ಹವಳವನಳೆದ ಈ ನಾಡು
ವಿಜಯನಗರದ ನೆಲೆ ಬೀಡು
ತುಂಗಭದ್ರೆಯ ಜಲದ ಸವಿ ನೋಡು
ಜೇನ ಹನಿಯಂತಹ ಸವಿ ರುಚಿ ನೋಡು!!
ಹಾಳು ಹಂಪೆಯ ನಡುವಲ್ಲಿ ಕಲ್ಲು ಗುಡ್ಡವ ಸುತ್ತಾಡು
ಮನೆ ಮಂಟಪ ನೀ ನೋಡು
ಸಪ್ತ ಸ್ವರಗಳ ಸಂಗೀತ
ಶ್ರೀ ಕೃಷ್ಣ ದೇವರಾಯರ ಗತ ಇತಿಹಾಸ!!
ಬಾದಾಮಿ ಶಂಕರಿ, ಬೇಲೂರು
ಶಿಲ್ಪ ಕಲೆಗಳ ತೊಟ್ಟೀಲು
ಕಲ್ಯಾಣ ಕ್ರಾಂತಿಯ ಬೀದರು
ಭಕ್ತಿ ಭಂಡಾರಿ ಬಸವಾದಿ ಶರಣರು!!
ಪಂಪ, ರನ್ನ, ದಾಸವರೇಣ್ಯರ ಸಾಹಿತ್ಯ
ಪಠಿಸುವೆವು ನಾವು ಪ್ರತಿ ನಿತ್ಯ
ಪ್ರತಿ ಧ್ವನಿಸುವ ವಿಜಯಪುರದ ಗೋಳ ಗುಮ್ಮಟ
ಪಂಚ ನದಿಗಳ ಜಲರಾಶಿಯ ಕಮ್ಮಟ!!
ಜ್ಞಾನ ಯೋಗಿಯ ನೆಲೆ ಬೀಡು
ನಡೆದಾಡುವ ದೇವರ ನೀ ನೋಡು
ನಡೆ ನುಡಿ ಒಂದಾಗಿ ನಡೆದವರು; ಬಯಲಲಿ ಬಯಲು ಆದವರು
ಕರುನಾಡಿಗೆ ಕೀರ್ತಿ ತಂದವರು!!!!
-
ವೃತ್ತಿಯಲ್ಲಿ ..ಚಿತ್ರಕಲಾವಿದನಾ... read more
*ಜ್ಞಾನಯೋಗಿ*
ಸದ್ದು ಗದ್ದಲಕೆ ಸುದ್ದಿಯಾಗದವರು
ಜಾತಿ-ಧರ್ಮದ ಮೇರೆಯ ಮರೆತು ನಿಂತವರು
ಸರಳತೆಗೆ ಸಾಕಾರ ಮೂರ್ತವೆತ್ತವರು
ನೊಂದ ಭಕ್ತ ಗಣಕ್ಕೆ ನೀತಿ ತಿಳಿಸಿದವರು
ಶ್ವೇತ ವಸ್ತ್ರಕ್ಕೆ ಸೂತ್ರ ಕೊಟ್ಟವರು
ಗುರುವರ್ಯರ ಗುರು ಭೋಧೆಗೆ ಭಾಷೆ ಬರೆದವರು
"ಸಿದ್ಧಾಂತ ಶಿಖಾಮಣಿ ಶೀರ್ಷಿಕೆಯಿಂದ ಸಿದ್ಧರಾದವರು
ನಾನು ನನ್ನದೆಂಬ ಮಮಕಾರ ತೊರೆದವರು
ಸಮಯದ ಶಿಸ್ತಿಗೆ 'ಸಿದ್ಧಹಸ್ತರಿವರು
ಬದುಕುವ ಬಗೆಯನ್ನು ಕಲಿಸಿಕೊಟ್ಟವರು
ಭಕ್ತ ಸಾಗರದಿ ಬಂಧಿಯಾದವರು
ಜೇಬಿಲ್ಲದ ಅಂಗಿಗೆ ಸಂತರಾದವರು
ನುಡಿದಂತೆ ನಡೆದು
ನಡೆದಂತೆ ನುಡಿದು
ನಡೆ-ನುಡಿಯನೊಂದಾಗಿಸಿಕೊಂಡವರು
ಭಕ್ತ ಹೃದಯಕೆ ಅಪ್ಪಾಜಿ ಆದವರು
ಜ್ಞಾನ ಜ್ಯೋತಿಯೇ ಆದವರು ಜಗಕೆಲ್ಲ!!
ವಿಶ್ವನಾಥ ಟಿ. ಹಂಡಿ-
ಸ್ವಾರ್ಥ ಇಲ್ಲವೋ ಎನಗೆ
ಕೀರ್ತಿ ಬೇಡವೋ ನಮಗೆ
ನೀತಿ ನಿಯತಿಯು ನಾಮಾವಶೇಷವಾದೊಡೆ
ಯಾವ ಕೀರ್ತಿ ಸಾಧಿಸಿದಡೇನು.?
ಕಪ್ಪು ಬಿಳುಪಾಗದು ಬಿಳುಪು ಕಪ್ಪಾಗದು
ನಿನ್ನ ನಿಯತಿಗೆ ನಿಜ ನಿರ್ಮಿತಿಯ ನೆಲೆ ಸಿಗದು
ಉದಯೇಶ್ವರ!!-
ಅಗೆದು ಅಳೆದು ತೂಗಿದರೂ
ಆಳ ಅರಿಯದಿದ್ದರೆ
ಅತ್ತು ಆರ್ಥನಾದ ಮಾಡಿದಡೇನು ಫಲ.!
ನಿನ್ನ ಅರ್ಥ ನಾದಕ್ಕೆ
ಅಳುಕುವವರಿಲ್ಲ ಕಣೋ ಉದಯೇಶ್ವರ..!!-
ಚಿತೆಗೇರಿದ ಶವದಂತೆ
ನೊಂದ ಈ ಮನದ ಚಿಂತೆ
ಬದುಕಿರುವಾಗಲೇ ಅಂತೆ ಕಂತೆ
ಬಾಳ ಬದುಕಿದು ಮೂರು ದಿನದ ಸಂತೆ !!
ಅನು ದಿನವೂ ಪಾತ್ರಧಾರಿಯಂತೆ
ಬಗೆ ಬಗೆಯ ಬಣ್ಣ ಬಳಿದಂತೆ
ಮುಖವಾಡ ಹೊತ್ತು ನಟಿಸಿದಂತೆ
ನಟಿಸಬೇಕು ನಾವು ಜಗವ ಕಂಡಂತೆ !!
ನೆಲೆ ನಿಲ್ಲದ ದೋಣಿಯಂತೆ
ಅಲೆ ಅಲೆಗೂ ಹೊಯ್ದಾಡಿದಂತೆ
ಬದುಕಿದು ಡೋಲಾಯಮಾನದಂತೆ
ಮುಳುಗುತ ತೇಲುತ ಸಾಗುವುದಂತೆ !!
ದೂರದ ಗುರಿ ಎಡೆಗೆ ತಲಪುವ ಚಿಂತೆ
ಬಂದ ಅಡೆ ತಡೆಯ ಮೆಟ್ಟಿ ನಿಂತಂತೆ
ದಡ ಸೇರಿ ಸಾರ್ಥಕತೆಯ ಸಾರುವಂತೆ
ಬದುಕೋಣ ನಾವು ನೀವು ಪ್ರೇಮ ಸ್ಪುರಿಸುವಂತೆ !!
-ವಿಶ್ವನಾಥ ಟಿ. ಹಂಡಿ-
ಕೂಗಿ ಕರೆಯುವ ಯಾವ ಕರ ಕಷ್ಟವೂ ನನಗಿಲ್ಲ.
ಆದರೆ
ಬೆಟ್ಟದ ತುದಿಯಲ್ಲಿರುವ ನನ್ನವರಿಗೆ ನನ್ನ ಧ್ವನಿ ಕೇಳಬೇಕಲ್ಲ.-
ಹೊಸ ವರುಷ ಹೊತ್ತು ತರಲಿ ಹರ್ಷ
ಹಿಂದಿನ ಕೊಳೆ ತೊಳೆದು
ಬದುಕಿಗೆ ನೀಡಲಿ ನವ ಚೈತನ್ಯದ ಸ್ಪರ್ಶ
ಎಲ್ಲರ ಬಾಳು ಬೆಳಗಲಿ
ಬದುಕು ಹಸನಾಗಲಿ
ಕಂಡ ಕನಸುಗಳೆಲ್ಲ ನನಸಾಗಲಿ
...ಎಲ್ಲರಿಗೂ...
...2023...
...ಹೊಸ ವರ್ಷದ ಶುಭಾಶಯಗಳು...-