ನಗುವ ಹೃದಯ.✍🏻   (ನಗುವ ಹೃದಯ .✍🏻)
122 Followers · 82 Following

read more
Joined 7 September 2020


read more
Joined 7 September 2020

🫅🏼 👣"ಮನೆಮಗಳು"👣🫅🏼
ಅಕ್ಕನ ಪ್ರತಿರೂಪ ಅಮ್ಮಂನಂತೆ ಅಪರೂಪ
ನಮ್ಮಮನೆ ಮನಗಳಲಿನ ಪುಟ್ಟಗೌರಿ
ನಗುವಿಗೂ ನಲುಮೆ, ಒಲವಿಗೂ ಹಿರಿಮೆ
ಪ್ರೀತಿಯಲಿವಳು "ಪಿನಿಕಿ" ವಿವರಿಸಲಾಗುವುದೇ ನಿನ್ನ "ವಿಧಾತ್ರಿ"... ☺️🫅🏼💖

ಹುಟ್ಟಿದೆ ನೀ ಆ ಶುಭದಿನದಂದು
ಅಳುತಲೇ ಹಾಡಿದೆ ನಗುವ ಭಾವಗಳನೆಂದು
ಅಮ್ಮ ಎಂದು ಅಂಬೆಗಾಲನಿಡುತ್ತ
ನಗುನಗುತ ಪುಟಾಣಿ ಹೆಜ್ಜೆಗಳನಿಡುತ್ತ
ಧರಿತ್ರಿಗೂ ಗೆಳೆತನವನಿತ್ತ ವಿಧಾತ್ರಿಯು ನೀ
ಒಮ್ಮೊಮ್ಮೆ ನೋಡುತ್ತ ಬೆಳದಿಂಗಳ ಚಂದ್ರಮನತ್ತ ಸುತ್ತಿದೆ ಸೂರ್ಯನ ಒಂದು ಸುತ್ತ....
ಕಣ್ಣೆದುರೇ ಅರಿತರಿಯದೆ ಕಳೆದಿದೆ ವರುಷ
ಪಸರಿಸಿದೆ ಮನದೆಲ್ಲೆಡೆ ಹೇಳಲಾಗದಷ್ಟು ಹರುಷ
ಅಮ್ಮನಿಗೆ ನೀ ಪ್ರೀತಿಯ ಕಂದ ಮಾಮನಿಗೆ ನೀ ಅದಕ್ಕಿಂತಲೂ ಚಂದ ಚಿನ್ನಮ್ಮ ...
ಜನುಮದಿನದ ಶುಭಾಶಯಗಳು ಮುದ್ದಿನ ಸೊಸೆಗೆ ಪ್ರೀತಿಯ ಪಿನಿಕಿಗೆ,
ಹರಸಿ ಹಾರೈಸುವೆ ಮನದಿ ಓಲೈಸುವೆ ನೀ ಸದಾ ನಗುತಿರು ಮನದಂಗಳದಿ ಅರಳುತಲಿರು ಬೆಳಗುತಲಿರು... 💖☺️🎊🎉🫅🏼


-



"ಮನೆಮಗಳು"
ಅಕ್ಕನ ಪ್ರತಿರೂಪ ಅಮ್ಮಂನಂತೆ ಅಪರೂಪ
ನಮ್ಮಮನೆ ಮನಗಳಲಿನ ಪುಟ್ಟಗೌರಿ
ನಗುವಿಗೂ ನಲುಮೆ, ಒಲವಿಗೂ ಹಿರಿಮೆ
ಪ್ರೀತಿಯಲಿವಳು "ಪಿನಿಕಿ" ವಿವರಿಸಲಾಗುವುದೇ ನಿನ್ನ "ವಿಧಾತ್ರಿ"... ☺️🫅🏼💖

-



ಅನಾಮಿಕಳು, ಅಪರಿಚಿತಳು ನೀನು ಕಾಣದ ಕಂಗಳಿಗೆ
ಬಂಧುವು,ಭಾವೈಕ್ಯಳು ನೀನು ಅರಿತುಬೆರೆತ ಮನಗಳಿಗೆ
ಬರಹಗಳ ಭಾವಗೀತೆಯು ನೀ ಹಾವ-ಭಾಗಳಲಿ ಬೆರೆತೆ
ಕೋಟಿಪದಗಳ ಕಾವ್ಯಕುಂಚವು ನೀ ಛಂದಸ್ಸುಗಳಲಿನ ಚಂದದಂತೆ
ಸಾವಿರ ಸ್ವರಗಳ ಪದಪುಂಜವು ನೀ ಸಾಟಿಯೇ ಇರದಂತೆ
ಅದ್ವೈತ ಪ್ರೀತಿಯ ಭಾವನೆಗಳ ಭವಣೆಯು ನೀನಂತೆ

-



ಅಂದವುಳ್ಳವಳ ಕಂಡು ಆಸೆ ಪಡಬೇಡ
ಚೆಂದವುಳ್ಳವಳ ಕಂಡು ಚಿಂತಿಸಲೂ ಬೇಡ
ಬೆಡಗಿಯ ಬಿನ್ನಾಣವ ಕಂಡು ಬೆರಗಾಗಬೇಡ
ಅಂದಗಾತಿಯವಳು ಅಂದಕ್ಕೆ ಮೊರೆಹೋಗುವಳು
ಚೆಂದಗಾತಿಯವಳು ಚೆಲುವನತ್ತ ನಡೆಯುವಳು
ಬೆಡಗಿಯವಳು ಬಣ್ಣದ ಲೋಕವ ಬೇಡುವಳು
ಅಂದ ಚೆಂದ ಬೆಡಗು ಬಿನ್ನಾಣಗಳಿಲ್ಲದಿದ್ದರೇನು
ನಿಜ ಪ್ರೀತಿಯುಳ್ಳ ನಿನ್ನ ನಿರ್ಮಲೆಯವಳು ಮಾತ್ರ
ನಿನ್ನ ಜೀವನವ ಬೆಳಗುವಳು... 💝
✍🏻.ನಗುವಹೃದಯ



-



ಜೀವನವೊಂದು ಕಷ್ಟ ಕಾರ್ಪಣ್ಯಗಳ ಸಂತೆ
ಅವುಗಳೆಲ್ಲವ ದಾಟಿ ನಾ ನಗುನಗುತ ನಿಂತೆ

-



"ಕಾವ್ಯ"

ಕಣ್ಣಲ್ಲಿ ಪ್ರೀತಿ ಮನದಲ್ಲಿ ತುಸು ಭೀತಿ
ಮನಗಳ ಸೇರುವವಳು ಮನೆಮಗಳ ರೀತಿ
ಮಗುವಿನ ಮನದವಳು ನಗುವಿಗೆ ಹೆಸರಿವಳು
ಮೌನಕೆ ಮನೆಯಿವಳು ಪ್ರೀತಿಗೆ ಉಸಿರಿವಳು
ಬಾಳಗೀತೆಯಲಿ ಶೃಂಗಾರ"ಕಾವ್ಯ"ವಿವಳು.

-









-



ಕನ್ನಡ ಭಾಷೆಯೇ ಬಲುಚಂದ
ಹೇಳಲಾಗದು ಬರೆಯ ಮಾತಿನಿಂದ
ವರ್ಣಿಸಲು ಸಾಲದು ಪದಪುಂಜ
ನಾ ಬಂದೆ ಗಂಧದ ಗುಡಿಯಿಂದ
ನನಗದು ಬಲು ಹೆಮ್ಮೆಯು
ನಾನೊಬ್ಬ ಕನ್ನಡದ ಕಂದ

-



🥳*ಚುಟುಕು*🥳

ಅವ್ವ ಅಂದ್ರೆ ಪ್ರೀತಿ,
ನಿಜವಾದ ಆಸ್ತಿ ಅಂದ್ರೆ ದೋಸ್ತಿ,
ಈಗಿನ ಹುಡ್ಗಿರ್ಗೆ ಸ್ವಲ್ಪ ಕೊಬ್ ಜಾಸ್ತಿ.😂

-



ಗೆಳತಿಯೇ ನಿನ್ನ ನಿಜ ಪ್ರೀತಿಗೆ ನೆಚ್ಚಿ..
ಕಾದಿರುವೆ ಕಾಲದಿ ನಾ ಎನ್ನ ಪುಟ್ಟಹೃದಯದಿ ನಂಬಿಕೆಯ ಹಣತೆಯನು ಹಚ್ಚಿ..
ನೀರೆ ನೀನೆಂದು ನೀರ್ಗರೆವೆ ಅದ್ವೈತ ಪ್ರೇಮವ
ಎನ್ನೀ ಭಾವನೆಗಳನು ಮೆಚ್ಚಿ... 🫰

-


Fetching ನಗುವ ಹೃದಯ.✍🏻 Quotes