S. M.   (ಜಗ ಹೃದಯ)
281 Followers · 127 Following

read more
Joined 26 January 2019


read more
Joined 26 January 2019
28 SEP AT 19:08

ನಿನ್ನ ಹತ್ರ ಎಷ್ಟೇ ದುಡ್ಡಿರಲಿ :
ಎಷ್ಟೇ ಪ್ರಭಾವವಾದ ಅಧಿಕಾರ ಇರಲಿ :
ಟೈಮ್ ಕೆಟ್ರೆ ಜನ ಕಣ್ಣೆತ್ತಿನೂ ನೋಡಲ್ಲ:
ನಿನ್ನವರು ಕೂಡ ಹತ್ರ ಸುಳಿಯಲ್ಲಿ.

"ಕೋವಿಡ್ ಕಾಲದ ಪಾಠಗಳು"

-


28 SEP AT 18:57

ಕೋವಿಡ್ ಕಾಲಕ್ಕೆ ಜೀವಂತ ಸಾಕ್ಷಿಗಳು ನಾವು..
ಮುಂದಿನ ಪೀಳಿಗೆಗೆ ಹೇಳಬೇಕಾದ್ದು ಇಷ್ಟೇ..
ಎಂತಹ ಅಹಂಕಾರಿಯನ್ನು ಕಾಲ ಪಕ್ಕಕ್ಕೆ ಸರಿಸಿಬಿಡುತ್ತೆ.

"ಕೋವಿಡ್ ಕಾಲದ ಪಾಠಗಳು."

-


28 SEP AT 8:42

ಹೇಳಿದ್ ಮಾಡು..
ಹೇಳಿದಷ್ಟು ಮಾಡು..
ಹೇಳಿದಷ್ಟೇ ಮಾಡು..
ಮನೆ, ಶಾಲೆ, ಕೆಲಸದ ಸ್ಥಳ
ಎಲ್ಲವೂ ಹೀಗೆ ಆಗಿ..
ಸೃಜನ ಶೀಲತೆ ಇಲ್ಲವಾಗಿ
AI ಅಷ್ಟೇ ಉಳಿದಿದೆ.
ಮನುಷ್ಯನಿಗೆ ಅಸ್ತಿತ್ವ ಇಲ್ಲದಾಗಿದೆ.

-


27 SEP AT 21:06

ಕೃತಕ ಹಲ್ಲುಗಳ ಬಗ್ಗೆ ಕೇಳಿದ್ದೆವು..
ಈಗ ನಗು ಕೂಡ ಕೃತಕ.

-


26 SEP AT 21:19

ಸಹಾಯಗಳು ಎಂದಿಗೂ ವ್ಯರ್ಥವಾಗುವುದಿಲ್ಲ.

-


24 SEP AT 18:41

ಬದುಕಿದ್ರೆ
ಸಾಯಿ ಅಂತಾರೆ..
ಸತ್ರೆ
ಮತ್ತೆ ಹುಟ್ಟಿ ಬಾ ಅಂತಾರೆ..
ಏನ್ರೀ ಜನ.

-


22 SEP AT 19:59

ಇಷ್ಟು ಸುಳ್ಳು ಹೇಳುವುದನ್ನು ಎಲ್ಲಿ ಕಲಿತೆ..
ನಿನ್ನ ಕಣ್ಣುಗಳನ್ನು ಕೇಳು..

-


21 SEP AT 11:19

ಅವರಿಬ್ಬರೂ ಮಾತನಾಡಿಕೊಳ್ಳುತ್ತಿದ್ದರು...
ನನ್ನ ಜಾತಿ ಕಲಂ ನಲ್ಲಿ ನಿನ್ನ ಹೆಸರು...
ನಿನ್ನ ಜಾತಿ ಕಲಂ ನಲ್ಲಿ ನನ್ನ ಹೆಸರು ಬರೆಸೋಣ ಎಂದು.

-


20 SEP AT 20:48

ನಮ್ಮ ಆಯ್ಕೆಗಳೇ ನಮ್ಮನ್ನು ಬಂಧಿಸುತ್ತವೆ..
ಬಿಡಿಸಿ ಹೇಳು..
ಪ್ರೀತಿ ಮತ್ತು ಕೆಲಸ.

-


18 SEP AT 20:40

ಮಳೆಗೂ ನೆನಪುಗಳಿಗೂ ಹತ್ತಿರದ ಸಂಬಂಧ..
ಬೀಳುವ ಪ್ರತಿ ಹನಿ:ನಿನ್ನ ಹೆಸರೇ ಹೇಳುತ್ತಿವೆ..

-


Fetching S. M. Quotes