QUOTES ON #ನೀನು

#ನೀನು quotes

Trending | Latest

ಕಲ್ಪನಾ ಲೋಕದ ಕಡಲು ನೀನು !

ಅದರೊಳಗೆ ಕೊಚ್ಚಿ ಹೋದ ಬಡ ನಾವಿಕ ನಾನು !

-


17 OCT 2019 AT 22:36

ನೀನು
ತುಂತುರು ಸುರಿವ ಮೇಘರಾಜ
ಸುರಿದಷ್ಟು ತಣಿಯುತಿರುವ ಧರೆ (ಹೆಣ್ಣು)
ಇಬ್ಬರ ಭಾವೋದ್ವೇಗದ ಸಮ್ಮಿಲನದಿ
ಅಂಕುರಿಸುವುದು ಹಸಿರಸಿರಿ
ಮಗುವಿನ ಜನನ..
ತನುಮನಗಳೆರಡರ ಸಂಪರ್ಕ ಸಾಧಿಸುವ
ಪ್ರಕೃತಿಯ ಸುಂದರ ಸಂಸ್ಕೃತಿ....

-


29 OCT 2018 AT 21:17

ಕಣ್ಣಿಂದ ಜಿನುಗುವ
ಹನಿಗಳಿಗೆ ಹುಸಿ
ಭರವಸೆಯಿತ್ತು
ನನಗೋ ಸಾಕಾಗಿದೆ..

ಒದ್ದೆ ಕಂಗಳ
ಮುದ್ದಿಸಿ ಒರೆಸಲು
ನೀನೇ ತುರ್ತಾಗಿ
ಬರಬೇಕಾಗಿದೆ..

-


19 OCT 2020 AT 20:53

ಗೆಲ್ಲಲು ಗುರಿ,ಗುರು ಇರಬೇಕೆಂದೆನಿಲ್ಲ
ನೀನು,ನಿನ್ನತನ ಇದ್ದರೆ ಸಾಕು
ಗೆಲುವು ನಿನ್ನದೆ,ಬರೀ ನಿನ್ನದೇ

-



#700🥰
#ನೀನು ಹೋಗುವಾಗ
ಸುಮ್ಮನೆ ಹೋಗಿಬಿಡು...!!





ಕ್ಯಾಪ್ಷನ್ ಓದಿ...👇
🥰🥰🥰🙏👍

-


1 OCT 2020 AT 9:16

ನನ್ನಲ್ಲಿ
ನನ್ನ ಕನಸಲ್ಲಿ
ನನ್ನ ನೆನಪಲ್ಲಿ
ನನ್ನ ಆಲೋಚನೆಯಲ್ಲಿ
ನನ್ನ ಉಸಿರಲ್ಲಿಯೂ ನೀನಿರುವೆ
ಆದರೆ
ನನ್ನ ಹಣೆಬರಹದಲ್ಲಿ ನೀನಿಲ್ಲ ಸಖಿ.°•°

-



ವಾಗ್ದೇವಿಯ ಕಡಲಾಳಕೆ ಇಳಿದು
ನಿನ್ನ ಬಾಹ್ಯ ಸೌಂದರ್ಯ ವರ್ಣಿಸಲು
ಶಬ್ದಗಳ ಮುತ್ತುಗಳನು ಆಯ್ದು ತಂದಿರುವೆ ಸಾಕಿ...
ಆದರೆ ನಿನ್ನ ಆಂತರಿಕ ಸೌಂದರ್ಯ ಅಭಿವ್ಯಕ್ತಿಸುವಲ್ಲಿ
ಆ ಸರಸ್ವತಿಯೂ ಬಂಜೆಯಾದಳು ಸಾಕಿ...

-


19 APR 2020 AT 10:06

ನಿನಗಾಗಿ ನೀ ಬದುಕು,
ಇನ್ನೊಬ್ಬರಿಗಾಗಿ ಅಲ್ಲ,

ನಿನ್ನ ಭರವಸೆ ಮೊದಲು ನಿನ್ನ ಮೇಲಿರಲಿ
ಇನ್ನೊಬ್ಬರ ಮೇಲಲ್ಲ,

ನಿನಗೋಸ್ಕರ ಕನಸ್ಸು ಕಾಣು,
ಇನ್ನೊಬ್ಬರಿಗೋಸ್ಕರ ಅಲ್ಲ,

ನಿನಗೆ ಇಷ್ಟ ಬಂದಂತೆ ಇರು,
ಇನ್ನೊಬ್ಬರ ಇಷ್ಟಕ್ಕಲ್ಲ,

ನಿನ್ನನ್ನು ನೀ ಮೊದಲು ಅರ್ಥಮಾಡಿಕೊ,
ಇನ್ನೊಬ್ಬರನ್ನ ಅಲ್ಲ,

"ನಿನ್ನನ್ನು ನೀ ಮೊದಲ ಪ್ರೀತಿಸು, ಜಗದ ಚಿಂತೆ ನಿನಗೆ ಬೇಡ, ನಿನ್ನನ್ನು ನೀ ಎಷ್ಟು ವಿಶ್ಲೇಷಣೆ ಮಾಡಿಕೊಳ್ಳುತ್ತಿಯೋ ಅಷ್ಟು ನಿನ್ನ ಶಕ್ತಿ, ಯುಕ್ತಿಯ ಬಗ್ಗೆ ನಿನಗೆ ಅರಿವಾಗುವದು".

-



ತುಂಬಾ ದಿನಗಳಾಯಿತು ಸಾಕಿ
ನಾವು ಮೂವರು ಭೇಟಿಯಾಗಿ..
ನಾನು, ನೀನು ಮತ್ತು ಸಮಯ..!!

-



ಸೀರೆ ತಂದಿರುವೆ
ನೀರೆ ನಿನಗೆ
ಸೌಂದರ್ಯದ ಸವತಿಯ
ತಂದಿರುವೆ ನಿನಗೆ...
ಸೌಂದರ್ಯದ ಕಾದಾಟಕ್ಕೆ
ನನ್ನ ಕಂಗಳು ಸಾಕ್ಷಿಯಾಗಲು
ಹವಣಿಸುತಿವೆ ಬಾರೆ

-