ಆತ್ಮೀಯ ಗೆಳೆತಿಯರೇ/ಗೆಳೆಯರೇ
ನಿಮ್ಮನ್ನೆಲ್ಲಾ ಭೇಟಿಯಾಗದೇ ಅದೆಷ್ಟು ದಿನಗಳುರುಳಿದವು
ಬಾಲ್ಯದ ಸ್ನೇಹದ ಸವಿನೆನಪುಗಳಲ್ಲಿ ಮಿಂದೇಳಬೇಕಿದೆ ನಾವು-ನೀವು
ಇನ್ನೇನೋ ಮಾತಾಡಬೇಕಿದೆ ಮತ್ತೇನೋ ಹಂಚಿಕೊಳ್ಳಬೇಕಿದೆ
ಮನಃಸ್ಪೂರ್ತಿ ಪುಟ್ಟ ಮಗುವಂತೆ ನಗಬೇಕಿದೆ
ನಮ್ಮೆಲ್ಲರ ಜೀವನದ ಗಮ್ಯ ಸೇರುವಲ್ಲಿ ದಣಿವಾಗಿದೆ
ಆ ದಣಿವಾರಿಸಿಕೊಳ್ಳಲು ಸ್ನೇಹಾಲಿಂಗನದಲ್ಲಿ ಮೀಯಬೇಕಿದೆ
ಕಾಲ ಯಾರಿಗೂ ಕಾಯದು ಹೋದವರೆಲ್ಲರೂ ನಮ್ಮವರೇ
ಇರುವವರೆಲ್ಲರೂ ಒಂದೆಡೆ ಸೇರಬಾರದೇ ನಕ್ಕು ಹಗುರಾಗಬಾರದೇ
ಅಂದು ಇಂದು ಮುಂದು ಎನ್ನುವುದೇ ಬೇಡ
ಸೆಪ್ಟೆಂಬರ್ ಇಪ್ಪತ್ತೊಂದು ಸಮೀಪಿಸುತ್ತಿದೆ ಇನ್ನೇಕೆ ತಡ
ಎಲ್ಲರೂ ಬನ್ನಿ ನಮ್ಮ ನಮ್ಮ ಸಂಸಾರದ ಜಂಜಡಗಳ ಮರೆಯೋಣ
ಸ್ನೇಹದ ಬುತ್ತಿಯ ಒಂದೊಂದು ಸವಿ ನೆನಪಿನ ತುತ್ತನ್ನು ಸವಿಯೋಣ-
ತುಂಬಾ ಶ್ರಮ,
ಅಭ್ಯಾಸಗಳಲ್ಲಿ ಶ್ರದ್ಧೆ
ಸತತ ಪ್ರಯತ್ನ
ನೋವಿನಿಂದ ಕಲಿತ ಪಾಠವೂ ಇರುತ್ತದೆ
-
ಕೆಲವರಿಗೋಸ್ಕರ ನಾವು ಜೀವವನ್ನೇ
ಕೊಟ್ಟರೂ ಹೇಳುತ್ತಾರೆ
ನೀನು ಸರಿಯಾಗಿ ಸಾಯಲಿಲ್ಲ....😒
-
ಬದುಕೊಂದು ಉಯ್ಯಾಲೆ
ಒಮ್ಮೆ ಸುಖದ ಹೂಮಾಲೆ
ಇನ್ನೊಮ್ಮೆ ದುಃಖದ ಅಲೆ
ಒಮ್ಮೆ ಕೀರ್ತಿಯ ಒರತೆ
ಮಗದೊಮ್ಮೆ ಸಮಸ್ಯೆಗಳ ವ್ಯಥೆ
ಒಮ್ಮೆ ಜಯಘೋಷದ ಚಪ್ಪಾಳೆ
ಮತ್ತೊಮ್ಮೆ ಸೋಲಿನ ನೋವಿನ ಮಳೆ
ಜೀಕುತಲೇ ಇದ್ದರೆ ಮಾತ್ರ ಜೀವಂತಿಕೆ
ನಿಂತರೆ ಕಾಲ ಸ್ಥಂಭ, ಬಿದ್ದಂತೆ ಕಾಲನ ಕುಣಿಕೆ-
ವಿಚಿತ್ರವಾದ ಸಂಬಂಧ ನಮ್ಮಿಬ್ಬರದು
ಇಬ್ಬರೂ ನೆನಪು ಮಾಡಿಕೊಳ್ಳುತ್ತೇವೆ.....!
ಆದರೆ ಇಬ್ಬರೂ ಮಾತನಾಡುವುದಿಲ್ಲ....!
-
ಸಾಯಿಸುವುದರಲ್ಲೂ ದಯೆಯಿಲ್ಲದೇ
ಬರ್ಬರವಾಗಿ ಚುಚ್ಚಿ ಅಥವಾ ಇರಿದು
ಅಪಾರ ನೋವು ಕೊಟ್ಟು ಅವರ ನೋವನ್ನು ಕಂಡು
ವಿಕೃತವಾದ ಆನಂದ ಪಡುವುದೇ ಕ್ರೌರ್ಯಾ-
ಸಂಮೃದ್ಧಿಗೊಂದು ಹಸಿರು
ಸಂಭ್ರಮದ ಸೊಬಗಿಗೆ ಹಳದಿ
ಪ್ರೇಮದ ನವಿರಿಗೆ ಗುಲಾಬಿ
ಸ್ನೇಹದ ಭರವಸೆಗೆ ನೇರಳೆ
ಮಮತೆಗೊಂದು ಒರತೆ ಕಿತ್ತಳೆ
ಅಕ್ಕರೆಗೊಂದು ನರುಗೆಂಪು
ಗಾಂಭೀರ್ಯಕೆ ಗರಿ ಕೆನ್ನೀಲಿ
ಬಾಂಧವ್ಯಗಳ ಬೆಸೆಯೋ ಹಬ್ಬ ಹೋಳಿ
ಬದುಕಿಗೆ ಸಂತಸದ ಬಣ್ಣ ಬೆರೆಸೋ ಹಬ್ಬ ಹೋಳಿ
ತುಂಬಿ ಸುರಿಯಲೀ ನಿಮ್ಮೆಲ್ಲರಿಗೂ ಹರುಷ
-
ನಿನಗಿಷ್ಟವಾದವರ ಜೊತೆ
ಮಾತನಾಡುವುದಕ್ಕಿಂತ
ನಿನ್ನ ಜೊತೆ ಮಾತನಾಡಲು
ಹಾತೊರೆಯುವವರೊಂದಿಗೆ
ಮಾತನಾಡು ಎಂದು ಅರಿತವರು ಹೇಳುತ್ತಾರೆ
ಆದರೆ ನಾವು ಮಾತ್ರ
ಅವರಿಗೆ ಇಷ್ಟವೋ ಇಲ್ಲವೋ ಅರಿಯದೆ
ನಮಗಿಷ್ಟವಾದವರ ಜೊತೆಯೇ
ಮಾತನಾಡುತ್ತೇವೆ...😅
ನಮ್ಮ ಜೊತೆಯಲ್ಲಿ ಮಾತನಾಡಲು
ಇಷ್ಟಪಡುವವರೊಂದಿಗೆ ಮಾತನಾಡುವುದಿಲ್ಲ..😅
-
ಸಾಮಾನ್ಯವಾಗಿ ಎಲ್ಲರೂ
ಸಲಹೆ ಕೊಡುತ್ತಾರೆ,
ಆದರೆ
ಅವರೇ ಅವುಗಳನ್ನು ಅನುಸರಿಸುವುದಿಲ್ದ...😅-