ನಿಯತ್ತು ಅಂದ್ರೆ ಯೋಧರದ್ದೇ
ಕೊರೆವ ಚಳಿಯಲ್ಲಿ
ಸುಡುವ ಬಿಸಿಲಲ್ಲಿ
ಸುರಿವ ಮಳೆಯಲ್ಲಿ
ಹಸಿವಿನಲಿ ನಿದ್ರಾಹೀನತೆಯಲ್ಲೂ
ಅನ್ನವಿಟ್ಟ ದೇಶದವನ್ನು
ದೇಶದ ಜನತೆಯನ್ನು
ಪ್ರಾಣ ತೇತ್ತಾದರು ರಕ್ಷಿಸುವ
ಇವರ ನಿಯತ್ತಿಗೆ ಬೆಲೆಕಟ್ಟಲಾದೀತೆ?
ನಿಯತ್ತೆನ್ನುವ ಪದವೇ
ಸೈನಿಕರ ಮುಂದೆ ಮೌನವಾದರು
ಅಚ್ಚರಿಯೆನಿಲ್ಲ!-
ನೀನು ನೀಯತ್ತಾಗಿರುವುದನ್ನು ಕಲಿತುಬಿಡು.
ಮತ್ತೊಬ್ಬರಿಗೆ ಬೆರಳು ತೋರಿಸುವ ಕೆಲಸ
ಮಾಡುವುದು ಬಿಡು.
ಎಲ್ಲರೂ ನೀಯತ್ತಿನಿಂದ ಬದುಕುವಾಗ ಅದನ್ನು ಅಳೆಯುವ ಸಮಸ್ಯೆಯೇ ಬರದು ನೋಡು.-
ಮನಸ್ಸಿನ ಭಾವನೆಗಳ ಅರಿತಿರಬೇಕು
ಗುಣ ಸ್ವಭಾವವನ್ನು ತಿಳಿದಿರಬೇಕು.-
ನಿಯತ್ತು ನಿಯಮವನ್ನು ಪಾಲಿಸಿದಷ್ಟು ಸುಲಭವಾಗಿ
ನಿಯಮ ನಿಯತ್ತನ್ನು ಪಾಲಿಸಲು ಬಿಡುವುದಿಲ್ಲ...-
ಆ ನಿಯತ್ತೇ ಸ್ವಾತಂತ್ರ್ಯ ಬದುಕಿಗೆ ಗತ್ತು
ಯಾವುದನ್ನು ಅತಿ ಆಸೆ ಪಡದೆ ಸ್ವಾಭಿಮಾನದಿಂದಲೇ ಬದುಕ ಬೇಕು ನಾವು ಯಾವತ್ತೂ....
-
ನಿಯತ್ತಿಗೆ ಹೆಸರಾದ ಪ್ರಾಣಿಗಳಲ್ಲಿ ನಾಯಿಯು ಬಹಳ ಹೆಸರುವಾಸಿ ತನ್ನ ಮನೆಯವರು ಹಾಕಿದ ಅನ್ನದ ಋಣಕ್ಕಾಗಿ ಜೀವ ಇರುವ ತನಕ ಮನೆ ಕಾಯುತ್ತಾ ಎಲ್ಲರೊಂದಿಗೂ ಪ್ರೀತಿಯಿಂದ ಸಲುಗೆಯಿಂದ ಇರುತ್ತದೆ ಒಂದು ಹಿಡಿ ಅನ್ನ ಹಾಕಿದರೆ ಸಾಕು ಎಷ್ಟೊಂದು ಪ್ರೀತಿ ತೋರಿಸುವ ಮೂಕಪ್ರಾಣಿ ನಮಗಿಂತ ಎಷ್ಟೋ ಮೇಲು... ನಮಗೆ ಎಷ್ಟೇ ಆಸ್ತಿ, ಒಡವೆ, ಹಣ ನಮ್ಮ ಮೇಲೆ ಎಷ್ಟೂ ಸುರಿದರೂ ನಮಗೆ ತೃಪ್ತಿ ಅನ್ನುವುದೇ ಇಲ್ಲ ಆದರೆ ಬಾಯಿಬಾರದ ಪ್ರಾಣಿ ಎಷ್ಟೊಂದು ಶ್ರೇಷ್ಠ ಅಲ್ವಾ....
-
ಮೌನವು ಭೂಮಿಯ ಮೇಲಿನ
ಸುಂದರವಾದ ಮಾತು!
ನಿಯತ್ತು ಎಲ್ಲದಕ್ಕಿಂತ ಅತೀ ಹೆಚ್ಚು
ಬೆಲೆ ಪಡೆಯುವ ಮುತ್ತು-