QUOTES ON #ನನ್ನ

#ನನ್ನ quotes

Trending | Latest
23 MAR 2020 AT 10:19

ನನ್ನ ಕವಿತೆ

ನನ್ನೊಡಲೊಳಗಿನ ಪ್ರೇಮದುಸಿರು
ನನ್ನೊಳಗೆ ತುಂಬಿದ ಚೈತನ್ಯದ ಹಸಿರು
ಸದಾ ಹಸಿರುಸಿರೊಳು ಮೆರೆವ ಬಸಿರು
ಬರೆಯದಿದ್ದರೆ ನನಗಿಂದು ಬೇಜಾರು.!!
(Read Caption)
👇🏾👇🏾👇🏾👇🏾

-



ಕನ್ನಡಿಯಲ್ಲಿ ಗುಳಿಬಿದ್ದ ಪ್ರತಿಬಿಂಬ ಕಂಡೆ ಸೋತೆ
ಬಿಸಿ ಉಸಿರು ಏರಿಳಿತದಿ ಮಾತು ಬಾರದೆ
ನಿನ್ನ ಬೆನ್ನ ಹಿಂದೆ ಉಸಿರು ಹೋದಂತೆ ನಿಂತೆ
ಕನ್ನಡಿಯಲ್ಲಿ ನಿನ್ನ ಕಳ್ಳನೋಟದಿ ಮಳ್ಳಾಟಕೆ ಮೈಮರೆತೆ
ನಿನ್ನ ಆಗಮನ ನನ್ನ ಬದುಕಿಗೆ ಮೇಘ ಮಿಲನದಂತೆ

ಕಿಟಕಿಗಳ ಸರಳುಗಳ ಮಧ್ಯೆ ತಿಳಿಬಿಸಿಲು ಅವಳ ಕೆನ್ನೆ ಸೋಕುತಿತ್ತು
ನನ್ನ ಈ ಸನಿಹ ಅವಳ ಕೆನ್ನೆ ರಂಗೇರಿತ್ತು
ಹೃದಯ ಅರೆಗಳಿಗೆ ಸ್ತಬ್ಧವಾಯಿತು
ಪ್ರೇಮದ ಹುಚ್ಚಾಟಕ್ಕೆ ಅರೆಕ್ಷಣ ಗೋಡೆಗಳಿಗೂ ಜೀವ ಬಂದಂತಾಯಿತು

ಅವಳು ನನ್ನ ಹತ್ತಿರ ಬರುತ್ತಿದ್ದಂತೆ ಎದೆ ಝಲ್ಲೆಂದಿತು
ಅವಳ ಮಧು ತುಂಬಿದ ಮೋಹಕ ಕಂಗಳ ಕನ್ನಡಿ ಸನಿಹಕೆ ಹೃದಯ ನಡುಗಿತು
ಮನಸ್ಸು ಮೇಣದಂತೆ ಕರಗಿ ನಾಚಿ ನೀರಾಗೊಯ್ತು
ನಾಚಿಕೆದಿ ಕಾಲ ಹೆಬ್ಬೆರಳ ತುದಿಯಲ್ಲಿ ಒಲವ ಲಜ್ಜೆಯಲ್ಲಿ
ಬಿಡಿಸಿದ ರಂಗೋಲಿ ಹುಚ್ಚೆದ್ದು ಕುಣಿಯಿತು

ಮುತ್ತಿನ ಮುದ್ರೆಯಲ್ಲಿ ಬರೆದಳು ಪ್ರೇಮದ ಮೊದಲ ಶೀರ್ಷಿಕೆ
ಹೃದಯ ಒಪ್ಪಿಸಿದೆ ನಿನ್ನ ಒಲವಿನ ಪ್ರೇಮದ ಓಲೆ ಆಮಂತ್ರಣಕ್ಕೆ
.............???
ನಿಮ್ಮದೇ ಆದ 2 ಕೊನೆ ಸಾಲು ಕಾಮೆಂಟ್ ಮಾಡಿ...😊😊

-



ನನ್ನ ರಾಣಿ
ಕಾಲ್ಗೆಜ್ಜೆಯ
ನಾದದಲ್ಲಿ
ಗೋರಂಟಿಯ
ಶೃಂಗಾರದಲ್ಲಿ
ಮಿಂಚುತಿಹಳಿಲ್ಲಿ.

-



ಭಾರತದ ನಿರ್ದೇಶಕರು.😍

-


24 SEP 2021 AT 10:45

ನನ್ನ ಮುದ್ದು ಸಹೋದರಿ ಈಕೆ
ನನ್ನೆಲ್ಲಾ ನೋವು ನಲಿವಿಗೂ ಜೊತೆಯಾಗುವಾಕೆ
ತನ್ನವರಿಗಾಗಿ ಬಾಳ ಸವೆಸುತಿರುವಾಕೆ
ನಗುನಗುತ್ತಲೇ ನೋವ ಮರೆಯುವಾಕೆ

ಹೆತ್ತಮ್ಮ ಬೇರೆಯಾದರೂ ಪ್ರೀತಿಗಿಲ್ಲಿ ಬರವಿಲ್ಲ
ನಮ್ಮ ಪ್ರೀತಿಯ ಕಂಡು ಕರುಬುತ್ತಿರುವರೆಲ್ಲ
ಯಾರ ಕಣ್ಣೂ ಬೀಳದಿರಲಿ ನಮ್ಮಿಬ್ಬರ ಪ್ರೀತಿಗೆ
ಏನೇ ಆದರೂ ಬೇರೆಯಾಗದು ನಮ್ಮಿಬ್ಬರ ಬಂಧವು

ಇವಳು ಹೋದಲೆಲ್ಲಾ ನಗುವಿನದೇ ಹಬ್ಬವು
ಇವಳ ಜೊತೆಯಲ್ಲಿದ್ದರೆ ನಾನಾಗುವೆ ಪುಟ್ಟ ಮಗುವು
ಬಾಲ್ಯದಲಿ ನೀಡಿದ ಪ್ರೀತಿಯ ಮರೆಯಲುಂಟೆ
ಬಯಸುವೆನು ಇನ್ನೊಮ್ಮೆ ಆ ಬಾಲ್ಯ ಮರಳಿ ಬರಲೆಂದು

ಜನುಮದಿನವಿಂದು ಈಕೆಗೆ ಹಾರೈಸಿ ಎಲ್ಲರೂ
ನೂರ್ಕಾಲ ನಗುನಗುತಾ ಬಾಳು ನೀ ಎಂದಿಗೂ
ನಿನಗಿರುವ ಕಷ್ಟವೆಲ್ಲಾ ಕರಗಿ ನೀರಾಗಲಿ
ಕೊರಗಜ್ಜನ ಆಶೀರ್ವಾದವು ಸದಾ ನಿನ್ನ ಜೊತೆಗಿರಲಿ

-



ಶ್ರೀರಾಮಸೀತೆಯರಿಗೆ
ಬಾಯಾರಿಕೆ ನೀಗಿಸಲು
ಜಲಾಶಯದ ದಾರಿ ತೋರಲು
ನಿನ್ನ ಚೆಂದದ ಗರಿಗಳನ್ನು
ಉದುರಿಸುತ್ತಾ ಜೀವವನ್ನೇ
ಕಳೆದುಕೊಂಡ ಮುದ್ದು ನವಿಲೇ..!
ನಿನ್ನ ಋಣ ತೀರಿಸಲು
ಭಗವಂತನ ಸ್ವರೂಪನಾದ
ಶ್ರೀರಾಮನೇ ಇನ್ನೊಂದು
ಜನ್ಮವೆತ್ತಬೇಕಾಯಿತು...!
ಶ್ರೀಕೃಷ್ಣನಾಗಿ ನಿನ್ನ
ಮನೋಹರವಾದ ಗರಿಗಳನ್ನು
ತಲೆಯ ಮೇಲೆ
ಧರಿಸಬೇಕಾಯಿತು..!
ಇನ್ನು ನಮ್ಮಂತಹ
ಹುಲು ಮಾನವರು
ನಮಗೆ ಉಪಕಾರ
ಮಾಡಿದವರೆಲ್ಲರ ಋಣ
ತೀರಿಸಲು ಎಷ್ಟು ಜನ್ಮ
ಎತ್ತ ಬೇಕಾಗುವುದೋ...!
ಆದ್ದರಿಂದ ಬದುಕಿರುವವರೆಗೂ
ಹೃದಯವಂತರಾಗಿರೋಣ
ಒಳಿತು ಮಾಡುತ್ತಾ ಬಾಳೋಣ..!!

-


15 JAN 2020 AT 12:01

ಅರಿಯುವ ಮುನ್ನ ನನ್ನ
ನೀ ತೊರೆದೆಯಲ್ಲ ನಲ್ಲ
ತೊರೆಯುವ ಮುನ್ನ ನನ್ನ
ನೀ ಕೊರೆ ತಿಳಿಸಲಿಲ್ಲ ನಲ್ಲ
ಕೊರೆ ತಿಳಿಸುವ ಮುನ್ನ ನನ್ನ
ನೀ ಒಂದ್ಬಾರಿ ಪ್ರೀತಿಸಲಿಲ್ಲ ನಲ್ಲ
ಒಂದ್ಬಾರಿ ಪ್ರೀತಿಸೋ ಮುನ್ನ ನನ್ನ
ನೀ ಕರೆದು ತಿಳಿಸಬೇಕಿತ್ತು ನಲ್ಲ...

-


7 JUL 2021 AT 21:24

#ಅವಳೆಂದರೆ
ತನ್ನೆಲ್ಲಾ ನೋವ ಬದಿಗೊತ್ತಿ
ನನ್ಮುಖದಲಿ ನಗುವ ಬಯಸುವವಳು
❤ಅಮ್ಮ❤

#ಅವನೆಂದರೆ
ತನ್ನೆಲ್ಲಾ ಕನಸುಗಳ ಬದಿಗೊತ್ತಿ
ನನ್ನ ಕನಸುಗಳಿಗೆ ನೀರೆರೆದವನು
❤ಅಪ್ಪ❤

-



ಪ್ರೀತಿಸ ಬೇಕೆಂದಿರುವೆ.
ನಿನ್ ಹೃದಯ ಖಾಲಿ ಇದೆಯಾ....?

-


7 OCT 2020 AT 10:18

Good morning...

ಮೌನದೊಳಗಿನ ಮಾತು ಮಂಕಾಗಿದೆ
ತುಟಿಗಳಾಡದೆ ನೋವಿನ ಒಲವ ಸೂಚಿಸುತ್ತಿವೆ..

-