ಭಾವನೆಗಳ💟ಮಿಂಚು ☛✍   (☛✍ಸಿದ್ದರಾಜಗುರು ಎಸ್ V,)
2.3k Followers · 78 Following

read more
Joined 22 May 2019


read more
Joined 22 May 2019

......

-



ಹುಚ್ಚು ಕನಸುಗಳ ಬೆನ್ನೇರಿ
ಬಣ್ಣದ ಭಾವನೆಗಳ ಸವಾರಿ
ಬದುಕೊಂದು ಕಗ್ಗತ್ತಲೆ ಹೆದ್ದಾರಿ
ಗಟ್ಟಿಯಾಗಿ ನಿಲ್ಲಬೇಕು ನೀ ಕಾಲೂರಿ..!!!

ನಿನ್ನ ಬದುಕಿಗೆ ನೀನೆ ರೂವಾರಿ
ಅರಿತುಕೊಳ್ಳು ನಿನ್ನ ಜವಾಬ್ದಾರಿ
ಸಮಯದ ವ್ಯರ್ಥ ಆದ್ರೆ ದುಬಾರಿ
ಬೆಲೆಬಾಳ್ವು ಬದ್ಕು ಹೋಗುವ್ದು ಕೈಜಾರಿ..!!!

ಬದಲಾಗಲಿ ಯೋಚನೆಯ ಲಹರಿ
ನಿಶ್ಚಿತ ಗುರಿಕಡ್ಗೆ ಇರಲಿ ತಯಾರಿ
ಚುರುಕುಗೊಳ್ಳುವ್ದು ಕಾರ್ಯವೈಕರಿ
ಆಗಲೇ ಬದುಕು ಹಸಿರು ವನಸಿರಿ..!!!

ಕಟ್ಟೋಣ ಕನಸುಗ್ಳನ್ನು ಅದ್ಧೂರಿ
ಶ್ರಮವ್ಹಸಿ ದುಡಿಯೋಣ ಭರ್ಜರಿ
ಗೆದ್ದರೆ ಬಾರಿಸೋಣ ಗೆಲುವಿನ ನಗಾರಿ
ಬಿದ್ದರೆ ಮತ್ತೆ ಪ್ರಯತ್ನದ ಹೆಜ್ಜೆಯಿಡೋಣ ನಗೆ ಬೀರಿ..!!!
☛✍ಸಿದ್ದರಾಜಗುರು ಎಸ್ ವಿ☛✍

-



ಯಾವ ಋಣಾನುಬಂಧವೋ
ಜನುಮ ಜನುಮದ ಅನುಬಂಧವೋ
ರಕ್ತ ಸಂಬಂಧಕ್ಕಿಂತ ಮೀರಿದ ಬಂಧನವೋ
ನಿನ್ನ ಸಹೋದರತೆಯ ಬಾಂಧವ್ಯ ಬಲು ಚಂದವೋ

ಸಹೋದರಿ ನಿನ್ನ ಕಷ್ಟಗಳು ಕರಗಲಿ
ಮನದ ವೇದನೆಗಳು ದೂರಾಗಲಿ
ನಯನಗಳು ನಗುವಿನಲ್ಲಿ ಅರಳಲಿ
ನೀ ಕಂಡ ಕನಸುಗಳು ನನಸಾಗಲಿ

ಮಡಿಲಲ್ಲಿ ಅರಳಿತು ಕರುಳಕುಡಿ
ನಿನ್ನ ಬದುಕಿಗೆ ಬರೆಯುವನು ಒಳ್ಳೆಯ ಮುನ್ನುಡಿ
ಹಿಂದೆ ಆಗಿ ಹೋದ ಘಟನೆಗಳನ್ನು ಮರೆತು ಬಿಡಿ
ಗರಿಬಿಚ್ಚಿ ಹಾರಲಿ ನಿಮ್ಮ ಕನಸಿನ ಬಾನಾಡಿ

ಪ್ರೀತಿಯ ಸಹೋದರಿಗೆ ರಕ್ಷಾಬಂಧನದ ಶುಭಾಶಯ
ಚಿರಕಾಲ ನಗುತ್ತಿರಲಿ ನಿನ್ನ ಹೃದಯ
ಇದು ನಿನ್ನ ಸಹೋದರನ ಶುಭ ಹಾರೈಕೆ
ಯಶಸ್ಸು ಆಯಸ್ಸು, ಐಶ್ವರ್ಯ ಸಕಲ ಸಮೃದ್ಧಿ ನೀಡಲಿ
ಪ್ರಾರ್ಥಿಸುವೆ ಭಗವಂತನಲ್ಲಿ ಇದೇ ನನ್ನ ಕೋರಿಕೆ.☛✍ಸಿದ್ದರಾಜಗುರು ಎಸ್ ವಿ,ಹೆಸ್ಕಾಂ ಗದಗ☛✍

-



YQ ಎಷ್ಟು ಹೃದಯಗಳಿಗೆ
ಬಾಂಧವ್ಯದ ಸೇತುವೆ
ಈ ಮಧುರ ಸಹೋದರತೆಯಲ್ಲಿ
ಮನಸ್ಸುಗಳು ನಗುತ್ತಿವೆ!!

ಮಾಧುರ್ಯತೆ ಪರಿಮಳದಲ್ಲಿ
ಕನಸುಗಳು ಅರಳಿವೆ
ಗಟ್ಟಿ ಬಾಂಧವ್ಯದ ಬೆಸುಗೆಯಲ್ಲಿ
ಭಾವನೆಗಳು ಬೆರೆತಿವೆ!!

ಸಹೋದರಿ ನಿನ್ನ ಮೊಗದಲ್ಲಿ
ನಗುವು ಉಲ್ಲಾಸಭರಿತವಾಗಿ ತುಂಬಿರಲಿ
ನಿನ್ನ ಕಲ್ಪನೆಯ ಕನಸುಗಳು ಮೊಗ್ಗಾಗಿ
ಅರಳಿ ಯಶಸ್ವಿನ ಸುಗಂಧ ಬೀರಲಿ!!

ರಕ್ಷಾಬಂಧನದ ಶುಭಾಶಯ
ಆದಷ್ಟು ಬೇಗ ಈಡೇರಲಿ ನಿನ್ನ ಆಶಯ
ಹೃದಯದಲ್ಲಿಟ್ಟು ಆರಾಧಿಸುವೆ ಸಹೋದರಿ
ನಿನಗೆ ಮೀಸಲು ಈ ಹೃದಯದ ದೇವಾಲಯ!!
☛✍ಸಿದ್ದರಾಜಗುರು ಎಸ್ ವಿ,ಹೆಸ್ಕಾಂ ಗದಗ☛✍

-


Fetching ಭಾವನೆಗಳ💟ಮಿಂಚು ☛✍ Quotes