ನಂಬುಗೆಯನ್ನು
ಕಳೆದುಕೊಂಡಾಕ್ಷಣ ದುಃಖವು
ಉಲ್ಭಣಗೊಂಡು ಕೊನೆಗೆ
ಮೌನದ ಜೊತೆಗೆ ಮಸಣವನ್ನೇ
ಸೇರುವುದೇ ಹೊರತು
ಮತ್ತೇ ಈ
ಹೃದಯದಲ್ಲಲ್ಲ..
ಜಾಗ ಭದ್ರವಾಯ್ತು
ಒಲವು..!!???-
ದುರಂತ ಅಂದ್ರೆ,,
ಜೀವನದಲ್ಲಿ ತುಂಬಾ ಕಷ್ಟ ಪಟ್ಟು
ಸಂಪಾದಿಸಿದ ನಂಬುಗೆಯ ಕೊಂಡಿ
ಮುಲಾಜಿಲ್ಲದೆ ಕಳಚಿ ಬಿದ್ದಾಗ, ಆಗುವ ಆಘಾತ,,
ನಮ್ಮವರ ಅಕಾಲಿಕ ಮರಣಕ್ಕಿಂತಲೂ ಭಯಂಕರವಾಗಿರುತ್ತದೆ!!...
✍️ಶಿಲ್ಪಾ ಪಾಲ್ಕಿ💞-
ನಂಬಿ ಬಾ ನನ್ನ ಹೆಣ್ಣೇ
ಮುಟ್ಟೋದಿಲ್ಲ ಇನ್ಮೇಲೆ ಎಣ್ಣೆ
ನೀನಿರು ಯಾವಾಗಲು ನಿಯರು
ಬಿಟ್ಟುಬಿಡುವೆ ಕುಡಿಯೋದು ಬಿಯರು
ಹೊಡೆದದ್ದು ಕಂಡರೆ ನಾನು ವಿಸ್ಕಿ
ಹೊಡಿಸಿಬಿಡು ಎಷ್ಟಾದರೂ ಬಸ್ಕಿ
ನೈಸ್ ಮಾಡಿ ಕೊಡಿಸುವೆ ಐಸ್ಕ್ಯಾoಡಿ
ಬಾರಿಸಿಬಿಡು ಹೊಡೆದರೆ ಬ್ರಾಂಡಿ
ಆಗಾಗ ಬರುವುದು ನನಗೆ ಕೆಮ್ಮು
ಅಡ್ಜಸ್ಟ್ ಮಾಡ್ಕೋ ಸ್ವಲ್ಪ ತಗೋತೀನಿ ರಮ್ಮು..!!-
ಹಗಲಿನಲ್ಲಿ ಕಾಣದ
ಅರುಂಧತಿ ನಕ್ಷತ್ರ ಕಂಡೇ,
ಎನ್ನುವುದರಿಂದಲೇ
ದಾಂಪತ್ಯದ ನಂಬಿಗೆ ಶುರು!...
ಭಾರತೀಯ ಸಂಸ್ಕತಿ ಎಲ್ಲರ ಗುರು!.-
ನಂಬುಗೆ... ✍️
ನಂಬುಗೆಯ ಮೇಲೆ ನಿಂತ ಧರ್ಮಗಳು
ನಂಬುಗೆಯ ಮೇಲೆ ನಿಂತ ದೇವರುಗಳು
ನಂಬುಗೆಯ ಮೇಲೆ ನಿಂತ ಜಾತಿಗಳು
ಇವೆಲ್ಲದರ ಮೂಲ ಹುಡುಕುತ್ತ ಹೋದರೆ ನಂಬುಗೆಯೆ ಅಲ್ಲಾಡುವುದು... !!
ಆದರೂ ನಂಬುಗೆಯ ಮೇಲೆ ' ನಿಲ್ಲದ ' ಈ ಮಾನವರು 'ಅಹಂ: ನಲ್ಲಿ ಜೀವಿಸುತ್ತಿದ್ದಾರೆ.
©Dr.Raghavendra.f.n.-
ಜಗಕೆಲ್ಲ ಸೂರ್ಯನ ಬೆಳಕು
ನಂಬುಗೆಯ ಸಂಕೇತ,
ಅಂತೆಯೇ;
ಮನದ ತಮಕೆ ಪ್ರಜ್ಞೆಯ ಬೆಳಕು
ಬದಲಾವಣೆಯ ಸಂಕೇತ.-
ಒಬ್ಬರನ್ನು ಅಣುಕಿಸುವ
ಭಾವನೆಯನ್ನು ಬಿಟ್ಟುಬಿಡಿ
ಆ ಸ್ವಭಾವ ಬದಲಾದರೆ
ನಮ್ಮನ್ನು ನಂಬುವವರನ್ನೂ
ನಾವು ಬದಲಿಸಬಹುದು!
-
"ಅಂದೊಂದು
ಹೊತ್ತು ಮುಳುಗುವ ಹೊತ್ತು,
ಧರೆಗೆರಗಿ ಹೊಂಬೆಳಕು
ಬಂತು ನಂಬುಗೆ ಹೊತ್ತು,
ಮುಸುಕಿದ್ದ ಜೀವಕ್ಕೆ ಸ್ಥೈರ್ಯ ತಂತು,
ಮುಂದೆಲ್ಲಾ ಚೆಂದವಿದೆ
ನಿನ್ನಿಂದ ಶಕ್ಯವಿದೆ
ಸುಳುವಾಗಿ ಬಾಳೆಂದು ಸೋಕಿ ಪೇಳ್ತು!"-
ಮುಖವಾಡದ ಸುಳ್ಳನು ನಂಬುತ ನಂಬುತ ಬಳಲುವುದಿಲ್ಲ!!!....
ನಿಜವನು ಅರಿಯುವ ಸರಳ ಕಾಯಕದ ಗೋಜಿಗೆ ಹೋಗುವುದೇ ಇಲ್ಲ!..
... ಜನ... ಜೀವನ... ಹೀಗೆನೆ!?!?-