ಪ್ರೀತಿ-ನಂಬಿಕೆಗಳು;
ಅನರ್ಘ್ಯ ಮತ್ತು ಅಮೂಲ್ಯವಾದಂತವಾದ್ದರಿಂದ,
ಕೆಲವರಿಗೆ ಅರ್ಥೈಸುವ ಸಲುವಾದರೂ
ಸುಮ್ಮನೆ ತಿರಸ್ಕರಿಸುವುದು ಒಳಿತು;
ನೈಜತೆ ಇದ್ದರೆ ಮತ್ತಷ್ಟು ಗಟ್ಟಿಯಾಗಲಿ,ಜಳ್ಳಾಗಿ ನಟಿಸುವಂತದ್ದಾಗಿದ್ದರೆ ಗಾಳಿಗೆ ತೂರಿಹೋಗಲಿ.
ಸಾರವೇ ಸಾಮರಸ್ಯ.!-
ದೈವ.!
ಕೆಲ ವ್ಯಕ್ತಿ ಚಿಂತನೆಗಳು,
ಯಾವುದು ಸತ್ಯ ಯಾವುದು
ಮಿಥ್ಯ ಎಂಬ ಗೊಂದಲಕ್ಕೆ ಬಿದ್ದಿವೆ.!
ಕೆಲ ಅಪೇಕ್ಷೆ ತುಂಬಿದ ಮನಗಳು
ಬೇಡಿಕೆಯ ಮುಂದಿಟ್ಟು ಲಾಭ
ನಷ್ಟದಲ್ಲಿ ಭಕ್ತಿಯನ್ನ ಅಳೆಯುತ್ತಲಿವೆ.!-
ಸವಿನುಡಿ.
ಶ್ರಮಕ್ಕೆ ಉತ್ತೇಜನ ಮನಸ್ಸು,
ಮನಸ್ಸಿಗೆ ಉತ್ತೇಜನ ದೃಷ್ಠಿ,
ದೃಷ್ಠಿಗೆ ಉತ್ತೇಜನ ಹೃದಯ,
ಆ ಹೃದಯವೊಂದು ಪರಿಶುದ್ಧವಾಗಿರಲಿ
ಯಶಸ್ಸಿನ ಮಾರ್ಗ ಸುಲಭವಾಗ್ತದೆ.-
ಮಾತು ಬಂದರೂ ಭಾವನೆಗಳೇ ನಶಿಸಿಹೋಗಿರುವವರನ್ನ ಮೂಗರೆನ್ನದೆ;
ಭಾವನೆಗಳ ಜೀವಂತವಾಗಿರಿಸಿ ಮಾತುಬಾರದವರನ್ನ ಮೂಗರೆನ್ನಲಾದೀತೆ.!?-
ವಿದಾಯವನ್ನ
ವಿಸ್ತೃತವಾಗಿ
ವಿವರಿಸುವುದಕ್ಕಾದರೂ
ವಿಷದವಾಗಿದ್ದರೆ;
ವಿಷಾದವೆಲ್ಲ
ವಿಷವಿಲ್ಲದಂತೆ
ವಿಸರ್ಜಿತವಾಗಿ
ವಿರಮಿಸಬಹುದು.-
ಯಾವುದೋ ಕ್ಷುಲ್ಲಕ ಕಾರಣದಿಂದ ವೈಮನಸ್ಯಬೆಳೆಸಿಕೊಂಡು ತನ್ನವರನ್ನೇ ತೊರೆದುಕೊಂಡು,
ಅನ್ಯ ವ್ಯಕ್ತಿಗೆ ಸಹಾಯ ಹಸ್ತ ಚಾಚಿ ಬರಸೆಳೆದರೆ,
ಬಂದವರು ಬಿಡುವರೆ ತಮ್ಮ ಸ್ವಾರ್ಥದ ಲಾಲಸೆಯ.!?-
ಮನ ಮತ್ತು ಮನೆಯ ವಾತಾವರಣವನ್ನ
ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟು ಶುಭ್ರವಾಗಿಡಲು ಯತ್ನಿಸುತ್ತಲೇ ಇರಬೇಕು;
ನೈರ್ಮಲ್ಯ ಯಾವತ್ತಿಗೂ ಆಹ್ಲಾದವೇ.!-
ಅರಿಕೆ.
ನನ್ನ ಬೇಡಿಕೆಗಳೇನಿಲ್ಲ ದೇವ,
ಅಪ್ಪನ ಕನವರಿಕೆಯ ಮನಕೆ,
ಕನಸಿನಲ್ಲಿ ಸಂಭಾಷಿಸುವಂತಹ
ವರವೊಂದನ್ನಿತ್ತುಬಿಡು ಸಾಕು.-
ಅಪ್ಪ.
ಹುಟ್ಟಿಗೆ ಕಾರಣನಾಗಿ
ಒಲವಿನ ಕಡಲಾದವನು.
ಜ್ಞಾನದ ಬುತ್ತಿಯಾಗಿ
ಅಜ್ಞಾನವ ತೊಳೆದಾಕಿದ
ಜ್ಞಾನಿಯವನು.
ಬೆರಳ ತುದಿಯನಿಡಿದು
ಜಗವ ಪರಿಚಯಿಸಿದವನು.
ಅಂಜಿಕೆಗೆ ತಿಲಾಂಜಲಿ
ಹಾಡಿ ಹೆಜ್ಜೆಹೆಜ್ಜೆಗೂ
ಧೈರ್ಯತುಂಬುತ
ಜೊತೆನಡೆದ ಕೆಚ್ಚೆದೆ
ಧೈರ್ಯಶಾಲಿಯವನು.
ಬದುಕಿನ ಬವಣೆಗೆ
ಬೆನ್ನಮೇಲಿನರಿವೆಹರಿದರು
ಎಲ್ಲರೆದುರು ತಿಳಿನಗುವನ್ನ
ಹರವುವ ಸಮಚಿತ್ತನವನು.-