Thejas Murthy   (© ತೇಜಸ್ ಮೂರ್ತಿ)
83 Followers · 23 Following

read more
Joined 18 December 2018


read more
Joined 18 December 2018
10 JUN AT 20:05

"ನನ್ನಿಂದ ನಿನ್ನಲ್ಲಿಗೆ, ಮತ್ತೆ ನಿನ್ನಿಂದ ನನ್ನಲಿಗೆ,
ಅಂಬಂತೆ ಹಬ್ಬೀತು, ಸಂಪೂರ್ಣ ಹೊತ್ತೀತು;
ಅರ್ಕಾಸ್ತದ ಬೆನ್ನಲ್ಲೇ ನಮ್ಮೊಳಗೆ ಬೆಳಗೀತು,
ಇರುಳದೀಪಗಳಂತೆ, ಓ ನಲ್ಲೆ!
ಹಾಗೆ ನಿಧಾನವಾಗಿ ಮಂದಜ್ವಾಲೆ."

-


4 DEC 2023 AT 12:27

"ಮನವೇ,
ಅತ್ತು ಹಗುರಾಗಿಬಿಡು,
ಅದಾವ ಹಂಗಿದೆಯೆ ನಿನಗೆ?
ವಿಧಿಗೆ ಶರಣಾಗಿಬಿಡು,
ಬಾಳು ಬದುಕು ತಂದಂಗೆ."

-


20 NOV 2023 AT 13:01

"ನನ್ನ ಸೋಕಿದ್ದು ಸಾಕೋ ಸೂರ್ಯ,
ನಾನೀಗ ಎದ್ದಿರುವೆ ಹಾಸಿಗೆ ಬಿಟ್ಟು.
ಮಹಡಿ ಮೇಲೆ ಅರಿವೆ ಹಾಕಿರುವೆ,
ಇಂದಾದರೂ ಒಣಗಿಸಿಬಿಡು
ಮಳೆಗೆ ರಜೆಯ ಕೊಟ್ಟು!"

-


21 JUL 2023 AT 8:00

"ಅಷ್ಟೋ‌ ಇಷ್ಟೋ ತುಂಬಿದೆ ಭಾವಬುತ್ತಿ,
ಕದ್ದವೆಷ್ಟೋ ಅಲ್ಲೇ ಕೊಂದವೆಷ್ಟೋ.
ಹೆಪ್ಪಾಗಿ ಕಡುಗೆಂಪಾಗಿ ಕಂಡಿದೆ ಭಾವಬುತ್ತಿ,
ಕುರುಹಾಗೇ-
ಉಳಿದವೆಷ್ಷೊ ಅಳಿಸಿಹೋದವೆಷ್ಟೋ."

-


24 JUN 2023 AT 8:24

ಇತ್ತೀಚೆಗೆ,
ನಿದಿರೆ ಹತ್ತುವ ಹೊತ್ತಿಗೆ
ಹೊತ್ತು ಮೂಡಿಬಿಡುತ್ತದೆ,
ಜಗ ಬೆಳಗಿಬಿಡುತ್ತದೆ
ನನ್ನ ಮಾತ್ರ ಹಿಂದೆ ಬಿಟ್ಟು,
ಇರುಳ ಕರಾಳ ಮಂಪರಲಿ.

-


18 JUN 2023 AT 17:31

"ಸುಮ್ನಾರೋ ತಲಿ ಕೆಡ್ಸ್ಕೋತೀವಿ ರೀ,
ಇರೋದು ಒಂದಾ ತಲಿ ಅನ್ನೊಂದ್ನೂ ಕಲ್ತು.
ಸುಮ್ನಾ ಬಾಳ್ನೂ ಬೇಕಾರ್ ಮಾಡ್ಕೋತೀವಿ ರೀ,
ಕ್ಷಣದಾಗ್ ಬದ್ಕೋದ್ನೂ ಮರ್ತು."

-


16 JUN 2023 AT 23:16

"ಸಿಕ್ಕಾಪಟ್ಟೆ ಸಾಮಾನ್ಯ ಬಾಳು ನನದು,
ಕೆಲ ಪದಗಳೊಡನೆ ಬದುಕುತ್ತೇನೆ,
ಪದಪದಗಳ ಪೋಣಿಸಿಟ್ಟು ಸಾಲುಗಳ ಕಟ್ಟುತ್ತೇನೆ,
ಸಾಲುಸಾಲಿಗೆ ಸೇತುವಿಟ್ಟು ಮನದ ಕವನ ಕೆತ್ತುತ್ತೇನೆ.
ಮನದುಂಬಿ ಬಂದ ಪದ್ಯಕ್ಕೆ ಮುಗುಳ್ನಗೆಯ ತೇಲಿಬಿಟ್ಟು,
ಭಾವಗಳನ್ನು ಸುಭದ್ರವಾಗಿ ಕಂತೆಕಟ್ಟಿಡುತ್ತೇನೆ,
ಹೀಗೇ ಉಸಿರ ಉಸುರುತ್ತೇನೆ."

-


15 JUN 2023 AT 8:42

"ಇದ್ದಂತೆಯೆ ಇರಲಿಬಿಡಿ,
ಆಗೋದು ಆಗ್ಲಿಬಿಡಿ,
ನಮಗೇಕೆ ಹೇಳಿ ನಾಳೆಯಾ ಚಿಂತೆ ?!
ಮರುದಿನ ನಾವಿದ್ದರೂ,
ಎದ್ದೇಳದೇ ಹೋದರೂ,
ನಡೆದೇ ತೀರುವುದು,
ನಾಳೆಯಾ ಸಂತೆ".

-


14 MAY 2023 AT 22:41

"ಇದನ್ನು ಕೊನೆಯೆಂದು ಕರೆದುಬಿಡಲೆ?
ಅಥವಾ
ಪ್ರಾರಂಭದ ಆಡಂಬರವೆಂದುಬಿಡಲೇ?
ಆದಿಯ ಅಂತ್ಯವೋ
ಅಂತ್ಯದ ಆದಿಯೋ,
ಒಮ್ಮೆಲೇ,
ದ್ವಿತ್ವವೇ ಇದು ಎಂದುಬಿಡಲೇ!?"

-


8 MAY 2023 AT 22:09

"ನನಗೂ ಇದೆ ನಿನ್ನಂತೆಯೇ
ಕಟ್ಟುಪಾಡುಗಳ ದಾಟಿ ಹರಿವ,
ಒಂದು ಪುಟ್ಟ ಹಂಬಲ."

-


Fetching Thejas Murthy Quotes