QUOTES ON #ದ್ರೋಹ

#ದ್ರೋಹ quotes

Trending | Latest

ಕ್ಷಮೆ
ತಪ್ಪು ಮಾಡಿದಾಗ ಕೆಲಸ ಮಾಡುತ್ತದೆಯೇ ಹೊರತು ನಂಬಿಕೆ ಮುರಿದಾಗ ಅಲ್ಲ. ಜೀವನದಲ್ಲಿ ತಪ್ಪುಗಳಿರಲಿ ಆದರೆ ನಂಬಿಕೆಯನ್ನು ಮುರಿಯುವುದಕಲ್ಲ. ಕ್ಷಮಿಸುವುದು ಸುಲಭ ಆದರೆ ಅದನ್ನು ಮರೆತು ಮತ್ತೆ ನಂಬುವುದು ಕೆಲವೊಮ್ಮೆ ಅಸಾಧ್ಯವೇ ಸರಿ.

-



ಈ ಜೀವ್ನಾ ಅನ್ನೋ
ರದ್ದಿ ಪೇಪರ್ನಾ
ನೀನೆಷ್ಟೇ ಜಾಗ್ರತೆಯಿಂದ
ಕಾಪಾಡ್ಕೊಂಡ್ರೂ,,
ನಿಂಜೊತೆಯಿರೋ ನಿನ್ನವ್ರೆ
ಅದ್ಹೇಗೊ ನಿನ್ಗೊತ್ತಾಗ್ದಾಗೆ
ಮತ್ತೆ ಜೊಡ್ಸಿ
ಸರಿಮಾಡಕ್ಕಾಗ್ದೆಯಿರೋ
ಲೇವಲ್ಗೆ ಏರ್ರಾ ಬಿರ್ರಿ
ಹರ್ದಾಕ್ ಹೋಗಿರ್ತಾರೆ!!
✍️ ಶಿಲ್ಪಾ ಪಾಲ್ಕಿ💞

-


9 MAY 2021 AT 11:29

ಮನದ ಕಾವಲಿಯಲ್ಲಿ
ಬೆಂದ ಭಾವಗಳಿಗೆ
ಏನ ಉಡುಗೊರೆ ನೀಡಲಿ?
ಈ ಜಗದ ನಾಟಕರಂಗದಲ್ಲಿ
ವಾತ್ಸಲ್ಯ!, ಮಮತೆಯ!,
ಕೊಂಡಿ ಬೆಸೆದು,
ತೂರಿಬಂದ ಮತ್ಸರದ
ಬಿರುಗಾಳಿಗೆ ಕೊಂಡಿ
ಕಳಚಿದೆ,
ಆಸೆ,ಪ್ರೀತಿಯ ಕಲಿಸಿ
ಒಳಗೊಳಗೇ ವೈಮನಸ್ಸಿನ
ಚಿಗುರಿಗೆ ಕೊಳೆಯುತ್ತಿದೆ
ಬಂಧ..
ದಿಕ್ಕು ತೋಚದೆ ನಡುಗಿದೆ
ಮನದೊಳಗೆ ಹುಟ್ಟಿದ
ಬಂಧದ ಕಂದ..

-



ಪ್ರೀತಿಯಿಂದ
ನಾಲ್ಕು
ಮಾತಾಡಿ
ಒಳ್ಳೆ
ಮನಸ್ಸಿನಿಂದ
ಸಹಾಯ
ಮಾಡಿ
ಆದರೆ
ಯಾರಿಗೂ
ಯಾವತ್ತೂ
ದ್ರೋಹವನ್ನಂತೂ
ಬಗೆಯಬೇಡಿ.....

-


17 OCT 2019 AT 12:12

ತುಂಬ ನಂಬಿದ ಮೇಲೆಯೇ ನಂಬಿಕೆದ್ರೋಹವಾಗಿ
ನಂಬಿಕೆಯ ಮೇಲಿನ ನಂಬಿಕೆ ಹುಸಿಯಾದರೂ
ನಮ್ಮ ಮೇಲಿನ ನಂಬಿಕೆ ಹೆಚ್ಚಿ ನಮ್ಮನ್ನು ನಾವು ನಂಬುವುದು

-



ಸ್ನೇಹ ಪ್ರೀತಿ ಸಂಬಂಧಗಳು
ನಂಬಿಕೆಯ ಹಗ್ಗದ ಮೇಲಿನ
ನಡಿಗೆ ಇದ್ದಂತೆ,

ಸ್ವಲ್ಪ ಆಯಾ ತಪ್ಪಿದ್ರು
ನಮ್ಮನ್ನ ಗುರ್ತಿಸಿಕೊಳ್ಳೊದು
ನೆನಪುಗಳಲ್ಲಷ್ಟೇ...

-



ಮಹಾನ್ ವ್ಯಕ್ತಿಗಳ ಹೇಳಿಕೆಗಳು
YQ ನಲ್ಲಿ ರಾರಾಜಿಸುತ್ತಿವೆ..

-



ತಲೆಯು ಬಾಗಿದೆ ಮನಸು ಕೊಳೆತು ನಾರುತಿದೆ
ಗಾಲಿಬ್, ಶಾಂತಿ ಹಿಂಸೆಯ ಪಾಲು ಬೇಡುತಿದೆ

-


23 MAY 2023 AT 13:16

ಕೆಟ್ಟವರಾಗಿ ಬಿಂಬಿತವಾಗಿರುವವರಿಗಿಂತ, ಒಳ್ಳೆಯವರಂತೆ
ನಟಿಸುವರೇ ಹೆಚ್ಚು ಅಪಾಯಕಾರಿ. ಎಕೆಂದರೆ ಇಂತಹವರು ಮಾಡುವ ದ್ರೋಹಗಳು ಅರ್ಥವಾಗುವ ಹೊತ್ತಿಗೆ ಕೆಲವೊಮ್ಮೆ ಸಮಯ ಮಿಂಚಿ ಹೋಗಿರುತ್ತದೆ.

-


22 JUL 2020 AT 7:51

ಪ್ರೀತಿಸುವ ಮನಸನ್ನು
ದ್ರೋಹವೆಸಗಿ ಕಲ್ಲಾಗಿಸಿದೆ,
ನೆನಪುಗಳ ಬುತ್ತಿಕೊಟ್ಟು
ಜೀವ ಹೂವಾಗಿಸಿದೆ ,
ದೂರಾದರು ಮೋಸನೆನೆದು
ಹೃದಯ ಬಾರವಾಗಿದೆ ,
ಸಂತಸದಲ್ಲಿರೆಂದು ಹರಸುತಲಿ
ಮನಸು ಹಗುರಾಗುತಿದೆ.

-