"ಕನ್ನಡದ ಆಧುನಿಕ ಸರ್ವಜ್ಞ" ಎಂದೇ ಪ್ರಸಿದ್ದಿ ಪಡೆದ ಡಿ.ವಿ.ಜಿ ಅವರು ಬರೆದ "ಮಂಕುತಿಮ್ಮನ ಕಗ್ಗವಂತೂ" ಭಗವದ್ಗೀತೆ ಯಂತೆ ಮನೆಮಾತಾಗಿತ್ತು.
ಬದುಕು ಜಟಕಾಬಂಡಿ... ವಿಧಿ ಅದರ ಸಾಹೇಬ..
"ಮರುಳ ಮುನಿಯನ ಕಗ್ಗಗಳು" ಕೂಡ ಹೆಸರುವಾಸಿಯಾಗಿ ಓದುಗರು ಅದರ ಭಾವಾರ್ಥವನ್ನು ಓದಿ ಅನುಸರಿಸುವಂತಾಯಿತು. ಭಾರತೀಯ ಅಂಚೆ ಸೇವೆ ಅವರ ನೆನಪಿಗಾಗಿ 1988 ರಲ್ಲಿ ಅಂಚೆಚೀಟಿಯನ್ನು ಬಿಡುಗಡೆ ಮಾಡಿತ್ತು. ಇಂದು ಅವರ ಪುಣ್ಯಸ್ಮರಣೆ.( ಜನ್ಮದಿನ 17-march-1887)
ನಾವೆಲ್ಲರೂ ಒಮ್ಮೆ ನೆನಪಿಸಿಕೊಳ್ಳೋಣ.-
ಸಗ್ಗವಿ ಭೂಮಿಯು
ಕಗ್ಗದ ಸಾರವನರಿತು ನಡೆಯೆ
ಕುಗ್ಗುವ ಸಂದರ್ಭಗಳ
ಜಗ್ಗದೇ ಎದುರಿಸಲು ದಾರಿದೀಪವಿದು
ಅಗ್ಗದ ಸಾಧನವಿದು
ಹಿಗ್ಗಿನ ಬದುಕ ಸಾಗಿಸಲು
ಮಗ್ಗದಿ ಹಗ್ಗದ ಬೆಸುಗೆ
ಕಗ್ಗದಿ ಮಾನವ ಸಂಬಂಧಗಳ ಬೆಸುಗೆ
ಕಗ್ಗವಿದು ಗುಂಡಪ್ಪನ
ಸಿಗ್ಗಿನ ಕಾಣಿಕೆ ಜಗದ ಮಂಕುತಿಮ್ಮರಿಗೆ-
ಅಕ್ಕಿಯೊಳಗನ್ನವ
ಮೊದಲಾರು ಕಂಡವರು
ಅಕ್ಷರದ ಬರಹಕ್ಕೆ
ಮೊದಲಿಗನಾರು
ಲೆಕ್ಕವಿರಿಸಿಲ್ಲ ಜಗ
ತನ್ನಾದಿ ಬಂಧುಗಳ
ದಕ್ಕುವದೆ ಜಸ
ನಿನಗೆ ಮಂಕುತಿಮ್ಮ
---ಡಿ.ವಿ. ಜಿ-
ಗುರುವಿಲ್ಲವೆನಬೇಡ ಜಗವೇ ಜಗದ್ಗುರುವೊ |
ಅರಿಮಿತ್ರ ವಿಭುಭೃತ್ಯ ಸತಿಪುತ್ರವರ್ಗ ||
ಪರಿಪರಿಯ ಪಾಠಗಳ ಕಲಿಸುತಿರ್ಪರು ನಿನಗೆ |
ಅರಿತುಕೊಳಲನುವಾಗು - ಮರುಳ ಮುನಿಯ ||
ನನಗೆ ಯಾವ ಗುರುವೂ ಇಲ್ಲ ಎಂದೆನ್ನಬೇಡ. ಈ ಪ್ರಪಂಚವೇ ನಿನಗೆ ಎಲ್ಲಾ ಪಾಠಗಳನ್ನು ಕಲಿಸುವ ಜಗದ್ಗುರು. ಶತ್ರು(ಅರಿ), ಸ್ನೇಹಿತ(ಮಿತ್ರ), ಒಡೆಯ(ವಿಭು) ಸೇವಕ (ಭೃತ್ಯ), ಪತ್ನಿ, ಪುತ್ರ ಮತ್ತು ಇತರರು, ವಿಧವಿಧವಾದ ಪಾಠಗಳನ್ನು ನಿನಗೆ ಕಲಿಸುತ್ತಿದ್ದಾರೆ. ಈ ಪಾಠಗಳನ್ನು ಕಲಿತುಕೊಳ್ಳಲು ಸಿದ್ಧನಾಗು (ಅನುವಾಗು).
Say not you have no preceptor, the world itself is the world teacher
Friend, foe, master, servant, wife and children
All these people teach you a variety of lessons
Be ready to learn – Marula Muniya
#UttishtaBharata #DVG
-
ಅಕ್ಷರದಲ್ಲಿ ಮಾಲೆಗಳ ಕಟ್ಟಿ
ಅರ್ಥ ಬರಿತ ಕಗ್ಗಗಳ ಬಿತ್ತಿ
ಜೀವನದ ಸೂಕ್ಮಗಳ ತಿಳಿಸಿ
ಮನದ ಕಡುಗಪ್ಪು ಕತ್ತಲ ಅಳಿಸಿ
ಗೀತಯಂತೆ ಸತ್ಯವ ಸಾರಿ
ವೇದದಂತೆ ನೀತಿಯ ತೋರಿ
ಪ್ರಬುದ್ಧತೆಯ ಬೆಳಕ ಹರಿಸಿ
ಮಂಕನ್ನು ಕಳಚುವ ಮಂಕುತಿಮ್ಮ
ಕಗ್ಗಗಳ ಅಜ್ಜನಿಗೆ ಹುಟ್ಟು ಹಬ್ಬದ ಶುಭಾಶಯ!-
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ |
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ||
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮ ||
ಡಿ.ವಿ.ಜಿ.🙏-
ಸಂಸಾರಿಯಾಗಿಯು
ಋಷಿಯಂತೆ
ಜೀವಿಸುವುದ
ಡಿವಿಜಿ ಯಿಂದಲೇ
ಕಲಿಯಬೇಕು..
ಬಡತನವಿದ್ದರು
ಕೈ ಚಾಚದೆ,
ಹೆಚ್ಚಿನ ಆದಾಯ
ಸಿಕ್ಕರೂ ಸ್ವೀಕರಿಸದೆ,
ದಿವಾನರ ಸ್ನೇಹವಿದ್ದರು
ಸ್ವಾರ್ಥಕ್ಕಿಳಿಯದೆ,
ಕೊರಗದೆ, ಕರುಬದೆ,
ಜೀವನ ಪ್ರೀತಿಯಿಂದ
ಕರ್ಮ ಮಾರ್ಗದಲ್ಲಿ
ಜೀವ ಸವೆಸಿದ
ದಿವ್ಯ ಚೇತನಕ್ಕೆ
ಶರಣು.. ಶರಣು..🌺🙏🏻-
ಹಾಲಿನಂತ ಸ್ವಾಭಾವದ ಮನುಷ್ಯನು
ಮಜ್ಜಿಗೆಯಂತಹ ಜನರ ನಡುವೆ ಇದ್ದು
ಬೆಣ್ಣೆ ತುಪ್ಪ ತಯಾರಿಸುವ ಕಲೆಯನ್ನು
ಕಲಿತು ಅದರ ಪ್ರಯೋಜನ ಪಡೆದುಕೊಳ್ಳಬೇಕು-