ಅವರಂತೆ ಇವರಂತೆ ಎಂಬಂತೆ
ಬದುಕು ಅಲ್ಲ.
ನಮ್ಮಂತೆ ನಮ್ಮಿಚ್ಚೆಯಂತೆ
ಬದುಕು ಇರಲಿ-
ನನ್ನೀ ಮನಕೆ
ಅರಿವಿಗೆ ಬಂದ
ಪದಗಳ ಗೀಚುವುದಷ್ಟೇ.... ಬರಹಗಾರ್ತಿ ನಾನಲ್ಲ....
ತಪ್ಪಿದ್ದರೆ ತಿಳಿಸಿ... read more
ನಮ್ಮನ್ನ ನಾವು ಮೆಚ್ಚಿಕೊಳ್ಳಬೇಕು ಏಕೆಂದರೆ,
ಬಗ್ಗಿದಷ್ಟು ಬಡಿಯುವ, ನಮ್ಮ ಹಿಂದೆ
ಕೆಟ್ಟದಾಗಿ ಮಾತಾಡಿ ಮುಂದೆ ನಯವಾಗಿ
ಮಾತಾಡಿ ನಮ್ಮಿಂದ ಅವರ ಬೇಳೆ ಬೇಯಿಸಿಕೊಳ್ಳುವ
ಜನಗಳ ಮಧ್ಯೆ ಬದುಕು
ಸಾಗಿಸೋದು ಕಷ್ಟವೇ ಸರಿ
ಹಾಗಾಗಿ ನಾವು ಸ್ವಲ್ಪ GREAT !!!-
ಇತರರು ನಮ್ಮಂತೆಯೇ
ಎಂಬ ತಿಳುವಳಿಕೆಯಿಲ್ಲದವರು
ಭಾವನೆಗಳ ಅರಿವಿಲ್ಲದವರು
ಪ್ರೀತಿಯ ಮೌಲ್ಯವನ್ನು ಅರ್ಥ ಮಾಡಿಕೊಳ್ಳಲಾರರು-
ಹೌದು
ಅನುಭವವೇ ಬದುಕಿನ ನಿಜವಾದ ಶಿಕ್ಷಕ
ಅವು ನಮ್ಮನ್ನು ತಿದ್ದುತ್ತವೆ
ಉತ್ತಮ ದಾರಿ ತೋರಿಸುತ್ತವೆ .
ಯಾರೊಂದಿಗೆ ಹೇಗಿರಬೇಕೆಂಬ ಪಾಠ ಕಲಿಸುತ್ತವೆ .-
ಏನು ಕಲಿತರೇನು
ಸಾಮಾನ್ಯ ಜ್ಞಾನ ಇಲ್ಲದಿದ್ದರೆ
ಏನು ಕಲಿತರೇನು
ಅಹಂಕಾರ ಬಿಡದಿದ್ದರೆ
ಏನು ಕಲಿತರೇನು
ಹೊಂದಾಣಿಕೆ ಇಲ್ಲದಿದ್ದರೆ
ಏನು ಕಲಿತರೇನು
ನಮ್ಮಂತೆ ಅವರೆಂಬ ತಿಳಿವಳಿಕೆ ಇಲ್ಲದ ಮೇಲೆ-
ಕಾಯತಿದೆ ಮನವು
ನಿಶಬ್ಧದಲಿ ಕೂತು
ನೆನಪುಗಳ ನೆನೆಯುತ
ಸಂತಸದಿ ಕುಣಿಯುತ
ನೆಮ್ಮದಿಯ ಬಯಸುತ.....
ಬದುಕಿನ ನೆಮ್ಮದಿಯ ನಿಲ್ದಾಣ-
ನಾ ಇರುವವರೆಗೂ
ಕೊನೆ ಉಸಿರಿರೊವರೆಗೂ
ಬದುಕಿನ ಕೊನೆ ಪಯಣದವರೆಗೂ
ಎಲ್ಲಾ ಒಂದೇ....ಮಾತು
ನನಗಿನ್ನೂ ನೀನೇ ಎಂದು ....
-
ನಾವು ಜನಕ್ಕೆ ಎಷ್ಟೇ ಒಳ್ಳೆದನ್ನು
ಮಾಡಿದ್ರು ಅವರು ನಮ್ ಬಗ್ಗೆ
ಕೆಟ್ಟದನ್ನ ಮಾತಾಡೋದು ಬಿಡಲ್ಲ....
ಹಾಗಂತ ನಮ್ಮಲ್ಲಿರೋ ಒಳ್ಳೆತನ
ಬಿಟ್ಟು ಅವರಂತೆ ಕೆಟ್ಟದನ್ನು
ಬಯಸೋ ವ್ಯಕ್ತಿತ್ವ ನಮ್ಮದಲ್ಲ.....
ಕೆಟ್ಟವರಿಗೂ ಒಳ್ಳೆಯದನ್ನೇ ಬಯಸೋಣ.-