ಮಾಲ ಸ್ವಾಮಿ   (ಮಾಲಾ)
391 Followers · 75 Following

ಯಾರನ್ನೂ ಮೆಚ್ಚಿಸುವ ಯತ್ನವಲ್ಲ, ನನ್ನ ಅರಿತುಕೊಳ್ಳುವ ಯತ್ನವಷ್ಟೇ..!

"ಸರ್ವಂ ಪ್ರೇಮ ಮಯಂ"❤🙏
Joined 16 March 2019


ಯಾರನ್ನೂ ಮೆಚ್ಚಿಸುವ ಯತ್ನವಲ್ಲ, ನನ್ನ ಅರಿತುಕೊಳ್ಳುವ ಯತ್ನವಷ್ಟೇ..!

"ಸರ್ವಂ ಪ್ರೇಮ ಮಯಂ"❤🙏
Joined 16 March 2019
2 FEB 2022 AT 8:38

ಸದಾ ಅವನನ್ನೇ
ನೆನೆವ ಹೃದಯವೂ
ಮೊಳಕೆಯೊಡೆದಂತಿದೆ,

ಒಳ್ಳೆಯದೇ ಆಯಿತು,
ಅವನನ್ನು ಪ್ರೀತಿಸಲು
ಈ ಒಂದೇ ಹೃದಯ
ಸಾಲುತ್ತಿಲ್ಲ ಎಂಬ ಕೊರಗಿತ್ತು ನನಗೆ ...!😍
~ಮಹಾಲಕ್ಷ್ಮಿ


-


2 FEB 2022 AT 8:08

ಸಮಯಕ್ಕೂ ಗರ್ವ ಬಂತು,
ಅವನಿಗಾಗಿ ಕಾಯುವುದೇ
ಬದುಕೆಂದ ಮೇಲೆ..!
ಬದುಕಿಗೂ ಅರ್ಥ ಬಂತು,
ಈ ಬದುಕೇ
ಅವನಾದ ಮೇಲೆ..!❤
~ಮಹಾಲಕ್ಷ್ಮಿ

-


2 FEB 2022 AT 8:05

ನಿನ್ನ ಮನದೊಳಿಟ್ಟು ಎನ್ನ
ನೀ ನೆನೆಯದಿದ್ದರೂ
ಚಿಂತೆ ಇಲ್ಲ,
ಈ ಉಸಿರಾಗಿ
ಬೆರೆತು ಹೋದವನನ್ನ
ಪ್ರೇಮಿಸುತ್ತಲೇ ಇರುವ
ಹಂಬಲಕ್ಕಾದರೂ ಜೊತೆಗಿರು..!
~ಮಹಾಲಕ್ಷ್ಮೀ

-


1 FEB 2022 AT 16:27

ಎದೆ ಮಡಿಲು ಸೇರಿದ
ಪ್ರೇಮ ಗ್ರಂಥವೇ,
ನಿನ್ನ ಓದಿ ಮುಗಿಸುವ ಆಸೆಯಿಲ್ಲ
ಓದುತ್ತಾ ಮುಗಿಯುವ ಹುಚ್ಚಿದೆ..!
~ಮಹಾಲಕ್ಷ್ಮಿ



-


1 FEB 2022 AT 15:28

ಚೂರಾದ ಕನಸುಗಳ
ಒಂದೊಂದೇ ಆರಿಸುತ್ತಿದ್ದೆ,
ಮೃತದೇಹವ ಬದುಕಿಸಲಾಗದು,
ಮುಂದಿನ ಕಾರ್ಯ ನಡೆಸಿಬಿಡೆಂದವು..!
~ಮಹಾಲಕ್ಷ್ಮಿ

-


25 JAN 2022 AT 13:59

ನಾನು ಉಳಿದದ್ದು,
ನನ್ನನ್ನೇ ಗೆದ್ದ
ಈ ನಿನ್ನ ಕಂಗಳೂಳಗೆ..!
ಬದುಕನ್ನೇ ಅವರಿಸಿದ
ನಿನ್ನಾ ಹೆಸರಿನೊಳಗೆ...!
ಈ ಉಸಿರನ್ನೂ ಆಲಿಸುವ
ಆ ನಿನ್ನ ಏಕಾಗ್ರತೆಯೊಳಗೇ..!
ನಾನೇ ಆಗಿರುವ
ಆ ನಿನ್ನಾ ಪ್ರೇಮದೊಳಗೆ...!
ಇಂತಿ ನಿನ್ರಾಧಾ
~ಮಹಾಲಕ್ಷ್ಮೀ

-


25 JAN 2022 AT 11:02


"ಖಾಲಿ ಕವಿತೆ"

ಅವನು ಬಾಳಲ್ಲಿ
ಬರದೇ ಇದ್ದಿದ್ದರೆ ಚೆಂದವಿತ್ತೇನೋ,
ಅವ ಕಟ್ಟಿದ
ಭಗ್ನ ಪ್ರೇಮಿಯ ಪಟ್ಟ ಬಲು ಭಾರ..!!
ಅವ ಉಣಿಸಿದ
ಈ ವಿರಹದ ರುಚಿ ಬಲು ಖಾರ..!!
~ಮಹಾಲಕ್ಷ್ಮೀ

-


21 JAN 2022 AT 19:36

ಕಹಿ ಸತ್ಯ (ಅರ್ಗಿಸ್ಕೊ)
ಅವರ ತಪ್ಪುಗಳು
ಅವರಿಗೇ ಅರಿವಾಗಲಿ ಬಿಡು..!
ಅವರ ಸುಳ್ಳುಗಳು
ಅವರನ್ನೇ ಸುಡಲಿ ಬಿಡು.!
ನಿನ್ನದೇನಿದೆಯೋ
ಅಷ್ಟೇ ನಿನ್ನ ಪಾಲು.!!
ಒಳ್ಳೆಯದಷ್ಟೇ ಯೋಚಿಸಿ
ಹಸನಾಗಿಸಿಕೋ ಈ ಬಾಳು..!!
~ಮಹಾಲಕ್ಷ್ಮೀ

-


7 SEP 2020 AT 14:46

ಮಾಧವ,
ನಿನ್ನ ನೆನಪೇ "ಧ್ಯಾನ"😊
ಆ ನಿನ್ನ ಹೆಸರೇ "ಓಂಕಾರ"♥️
ನಾ ನಿನ್ನೆದೆಯ "ಮಠವಾಸಿನಿ"😊
ನಮ್ಮ ಅನಂತ ಪ್ರೇಮವೇ "ಆಧ್ಯಾತ್ಮ"♥️
-✍ಮಾಲಾಮಾಧವ

-


2 SEP 2020 AT 18:24

ನೀ ಮುಡಿಸಿದ
ಮಲ್ಲಿಗೆಯ
ಕಂಪಿಗೂ
ಚಿರಾಯಸ್ಸು ಮಾಧವ..!
ಈ ಬರಿದಲೆಯೂ
ಕೂಡ
ಘಮ ತುಂಬಿ,
ಎಲ್ಲೆಡೆಯೂ
ಹರಡುತ್ತಿದೆ..!!
-✍ಮಾಲಾಮಾಧವ

-


Fetching ಮಾಲ ಸ್ವಾಮಿ Quotes