Pramara   (ಪ್ರಮರ)
24 Followers · 9 Following

ಹಿಂಬಾಲಿಸಬೇಡಿ, ನಾವು ಅತಿಥಿ ಕಲಾವಿದರು...
Joined 27 September 2018


ಹಿಂಬಾಲಿಸಬೇಡಿ, ನಾವು ಅತಿಥಿ ಕಲಾವಿದರು...
Joined 27 September 2018
3 AUG 2022 AT 15:55

ಜಾತ್ರೆಯೇ ಮುಗಿದಿದೆ
ಇನ್ನೇಲ್ಲಿಯ ತೇರು
ಗುಡಿ ತಲುಪಿಸಿ ಹೊರಟಿಹರು
ತಿರುಗಿ ನೋಡಿಲ್ಲ ಯಾರು
ಜಗಮಗಿಸುವ ಬೆಳಕಿನ ಅಲಂಕಾರ
ಜನಜಂಗುಳಿಯಲಿ ಸಾಗಿದೆ ಜೈಕಾರ.........

ಹೊತ್ತು ಮೆರೆಸಿದರು ನಿನ್ನ
ಉತ್ಸವ ಮೂರ್ತಿ ನೀನು
ಹೂತು ಮರೆತಿಹರು ಎಲ್ಲ
ಇನ್ನು ಉಳಿದಿಲ್ಲ ನಿನ್ನದೇನು...

ಎಲ್ಲೋ ಕೇಳಿತಲ್ಲೋ ಎಂದೊ ಗೈದುಪಕಾರ
ಜೊತೆ ಮಣ್ಣಾಯಿತಲ್ಲೋ ನಿನ್ನ್ ಹಣ ಅಧಿಕಾರ.
ಜಗಮಗಿಸುವ ಬೆಳಕಿನ ಅಲಂಕಾರ
ಜನಜಂಗುಳಿಯಲಿ ಸಾಗಿದೆ ಜೈಕಾರ....

ಜಾತ್ರೆಯೇ ಮುಗಿದಿದೆ ಇನ್ನೇಲ್ಲಿಯ ತೇರು

-


9 JUL 2022 AT 18:52

ತಪ್ಪು ತೋರಿದವರ
ತಪ್ಪು ತಿಳಿಯದೇ
ತಪ್ಪೊಪ್ಪಿ ತಿದ್ದಿ ನಡೆ.
ತಪ್ಪೊಪ್ಪದೇ
ತಪ್ಪನ್ನೆ ತಬ್ಬಿದರೇ
ನಿನ್ನ ತಬ್ಬಿತೆನೋ ತಿಥಿ ವಡೆ.

ತಪ್ಪನ್ನೆ  ಹುಡುಕಿ
ಕೆದಕಿ ಕೆದಕಿ
ಕೆಣಕುವವರ ಕಡೆ
ಕಡೆಗಣ್ಣು ಹಾಯಿಸದೇ
ಕಾಯಕದೀ ಕಾಯಚಿತ್ತನಿಟ್ಟು
ಕನಸಿನತ್ತ ನಡೆ.
ಕರುಣೆ ತೋರಿಯಾನು
ಕರುಣಾಮಯಿ ನಿನ್ನೆಡೆ.

-


6 SEP 2020 AT 8:03

ನಮ್ಮವರ
ನಗುವಿಗೊಸ್ಕರ
ಒಮ್ಮೆ ನಗೋಣ.

-


9 JAN 2022 AT 15:01

ಬನ್ನಿರೆಲ್ಲ ಹಿಂಡು ಹಿಂಡಾಗಿ
ಪಾದಯಾತ್ರೆ ಮಾಡುವ ಎಲ್ಲ ಕೂಡಿ
ಮಿಕ್ಕವರೆಲ್ಲ ಮನೆಯಲ್ಲಿದ್ದು
ಕರೋನ ವಿರುದ್ಧ ಹೋರಾಡಿ.

-


22 AUG 2021 AT 10:21

ಹ್ಯಾಪಿ ರಕ್ಷಾ ಬಂಧನ

-


1 AUG 2021 AT 14:12

ಸ್ವಚ್ಛ ಮನಸ್ಸಿರದ
ತುಚ್ಚ ಜನರ ನಡುವೆ
ಹುಚ್ಚನಾದವನೇ ಜಾಣ.

-


26 MAR 2021 AT 11:16

ಮನಸ್ಸು
ಅವಳೆಡೆಗೆ
ವಾಲಿರುವುದೇ
ಒಲವು.

-


24 MAR 2021 AT 9:36

ಯಾವ ನದಿಯಲಿ ಮಿಂದರೇನು,
ಮನವು ಮುಳುಗದೇ ಗಂಗೆಯಲಿ ?

-


1 MAR 2021 AT 19:36

ನಿನ್ನದೀರಲಿ ನಿನಗೆ,
ಏತಕದು ಪರರಿಗೆ
ಪೋಷಿಸು ಇಲ್ಲ ದೂಷಿಸು,
ಘೋಷಿಸಿ ಫಲವೇನು ಸಂತೆಯಲಿ ?

-


1 MAR 2021 AT 12:17

ನಾವು
ನಮ್ಮವರಲ್ಲಿ
ಕುರುಡರಾಗುತ್ತೆವು.

-


Fetching Pramara Quotes