ಜೂಜನ್ನು
ಆಡುವುದು ಮೋಜಿಗೆ
ಇಲ್ಲವಾದಲ್ಲಿ ಜೀವನ
ಬರುವುದು ಬೀದಿಗೆ
ಅದಕ್ಕೆ ಹೋಗಲೆಬೇಡಿ
ಅದರ ಗೋಜಿಗೆ
ಮರೆತು ಆಡಿದರೆ
ಜೀವನದ ದಾರ
ಸಿಕ್ಕಿಕೊಳ್ಳುವುದು
ವಿಪತ್ತಿನ ಸೂಜಿಗೆ-
ನಿನ್ನ ಸೌಂದರ್ಯಕ್ಕೆ ಮನಸೋತು
ಸಾವಿರಾರು ಹೃದಯಗಳು ಸೋತಿವೆ,
ಯಾರ್ ಹೇಳ್ತಾರೆ 'ಭಾವಚಿತ್ರಗಳು'
ಜೂಜಾಡುವುದಿಲ್ಲವೆಂದು....!!-
ಉನ್ನತಿಯ ಹೊಸ ವ್ಯಾಖ್ಯೆ :
ಚಿಮಣಿ ದೀಪದಲ್ಲಿ ಕಲಿತ ಮಕ್ಕಳು
Online Rummy ಆಡಿ ಹಣ
ಕಳೆದುಕೊಳ್ಳುವುದ ಅಭಿವೃದ್ದಿ
ಎನ್ನಬಹುದೇ...??-
ಪಾಮರರೆಲ್ಲರು ಪೆಗಡೆಯಾಡಲು ಕುಳಿತಾಗ
ಪೆದ್ದನೊಬ್ಬ ನಕ್ಕು ನುಡಿದನಂತೆ,
ಮತ್ತೆ ಮಹಾಭಾರತವಾದಿತು
ಜೂಜಿಗಿಡುವುದಾದರೆ ಮೊದಲು ಸೋಲನ್ನು
ಜೂಜಿಗಿಡಿ ಶಕುನಿ ಹುಟ್ಟುವುದು ತಪ್ಪಿತ್ತು ಎಂದು,,,,-
*ಐಪಿಎಲ್-ಅಫೀಮು*
ಅವ ಐಪಿಎಲ್ ಆಡಿ ಕೋಟಿ ಗೆದ್ಕೊಂಡ
ಇವ ಐಪಿಲ್ ಗೆ ಬಾಜಿ ಕಟ್ಟಿ ಗಡ್ಡ ಬಿಟ್ಕೊಂಡ
ಅಂದು ಜೂಜು ಅಡ್ಡೆ ಗುಡ್ಡದಲ್ಲಿತ್ತು
ಇಂದು ಗಡಿ ಗಂಡಾಂತರ ದಾಟಿ ಕೈ ಬೆರಳ ತುದಿಗೆ ಬಂದು ಕುಳಿತಿದೆ
ಕೈಯಲ್ಲಿ ನಿಲ್ಲದ ಖಾಸು
ಆನ್‌ಲೈನ್ ನಲ್ಲಿ ಎಲ್ಲ ಖಲಾಸು
ಇನ್ನೇನ್ ಉಳಿದಿದೆ ಯುವ ಜನತೆಯ ಬದುಕೇ ವ್ಯಸನದ ಗ್ರೌಂಡ್ ನಲ್ಲಿ ಬೌಂಡರಿ ಕಾಣದೇ ಖಿನ್ನತೆಯಲಿ ಬೋಲ್ಡ್ ಆಗುತ್ತಿದೆ....
- ಕೆ.ನಾಗರಾಜ ಉಲವತ್ತಿ
-
"ಜೂಜಾಡಿ ಯಾಕೋ ಕಳಕೋ ಬಂದೆ, ಬರಿಗೈಲಿ.?"
*ಬದುಕೂ ಒಂದು ಜೂಜೇ.
ಬದುಕಿನ ಕೊನೆಗೆ ನೀನು ಖಾಲಿ ಕೈಲೇ ತಾನೆ ಹೋಗೋದು. ?*-
ಪ್ರಿಯಸಖಿ
ಮದ್ಯ- ಹೊನ್ನು - ಜೂಜು
ಇವೆಲ್ಲವನ್ನೂ ಬಿಟ್ಟು ಬಿಡುವೆ
ಸಂಗಾತಿಯಾಗು ಬಾ
ನನ್ನ ಪಾಲಿಗೆ ಈ ಮೂರೂ
ನೀನೇ ಆಗಿರುವೆ!!-