ಕಣ್ಣೀರು ಬಂದಾಗ ಕಣ್ಣು ಮಸಕಾದರೂ
ಸತ್ಯ ಸ್ಪಷ್ಟವಾಗಿ ತೋರುವುದು.-
ಮಗಳು ಪ್ರೀತಿಸುತ್ತಿದ್ದ ಹುಡುಗನನ್ನ
ದೂರ ಮಾಡಿ ಹಿರಿ ಹಿರಿ ಹಿಗ್ಗಿದ್ದ ತಂದೆ
ಜೇಬಿನ ಮೂಲೆಯಲ್ಲೆಲ್ಲೊ ತನ್ನ ಹಳೆಯ ಗೆಳತಿಯ
ಭಾವಚಿತ್ರವ ಹಿಡಿದು ಕಣ್ಣೀರು ಹಾಕಿದ್ದುಂಟು
-
ಸದಾ ಹರಿಯುತ್ತ
ಕಲ್ಮಷವ ತೊಳೆಯುವಳವಳು
ಗಂಗೆಯ ಹಾಗೆ
ಜರಿಯದಿರಿ ಎಂದೂ
ನಿಷ್ಕಲ್ಮಷ ಮನಸಿನವಳು
ಕಾವೇರಿಯ ಹಾಗೆ
-
ಬಿಕ್ಕಳಿಕೆ
ಬಿಕ್ಕಳಿಕೆಯೂ ಹಿತವಾಗಿದೆ ಇಂದು
ನೀ ನನ್ನನ್ನೆ ನೆನೆಸುತ್ತಿರುವೆ ಎಂದು
ದಿನಕ್ಕೊಮ್ಮೆಯಾದರೂ ಇರಲಿ ಈ ಬಿಕ್ಕಳಿಕೆ
ಆಗುವುದು ನನಗೂ ಮನವರಿಕೆ-
ಹುಟ್ಟು ಮತ್ತು ಸಾವು ಇವೆರಡೂ ಒಂದೆ ಜಾಗದಲ್ಲಾಗೊದನ್ನ ಎಲ್ಲಾದರೂ ನೋಡಿದಿರಾ?!
ಒಂದು ಸಲ ನಿಮ್ಮ ಹೃದಯವನ್ನ ಮುಟ್ಟಿಕೊಂಡು ನೋಡಿ ಎಷ್ಟು ಭಾವನೆಗಳು ಹುಟ್ಟಿ ಚಿಗುರೊಡೆಯುವ ಮುನ್ನವೆ ಕೊಲೆಯಾಗುತ್ತಿವೆ ಎಂದು.-
ನೀ ಕೊಡುವ ಮುತ್ತಿಗಾಗಿ
ಮೂರೊತ್ತೂ ಕಾಯುವ ನನ್ನ ಕಂಡು
ನೀ ಮೂತಿ ತಿರುವಿ
ಮಾತನಾಡದೆ ಹೋದದ್ದು ಸರಿಯೆ-
Things are going wrong around you!
Keep calm
Time heals everything but
Your positivity must immunes it-
Lifeಯಾಕೆ ಇಷ್ಟೊಂದು ಕಷ್ಟ ಇದೆ ಅನ್ಕೊಂಡು
ನಾವೆಲ್ಲಾ ಅಳ್ತಾ ಕೂತಿದ್ವಿ
ಕೊರೊನಾ ಬಂದ ಮೇಲೆ Life ಹೇಳ್ತು
Bro ನಾನಿವಾಗ್ತಾನೆ ಶುರುನೆಹಚ್ಕೊಂಡಿದಿನಿ😂😂-
ಹಣ ಎನ್ನುವುದು ನಾವು ಬದುಕಲಿಕ್ಕಾಗಿ
ಮಾಡಿಕೊಂಡ ವ್ಯವಸ್ಥೆಯೆ ಹೊರತು
ಸಾಯದೆ ಅಜರಾಮರರಾಗಿರುವೆವೆಂಬ ನಂಬಿಕೆಯಲ್ಲ-
ಎಣ್ಣೆ ಕಲಸಿ
ಮಸಾಲೆ ಬೆರೆಸಿ
ಉಪ್ಪುಖಾರ ಹುಳಿ ಹಾಕಿಸಿ
ಅಡುಗೆಯ ರುಚಿಯಾಗಿಸಿ
ತಿನ್ನುವುದಕ್ಕಿಂತ
ಉಪ್ಪಿಲ್ಲದ ಊಟದಲ್ಲಿಯೂ
ತೃಪ್ತಿಪಡುವುದು ಮೈ ಬೆವರಿನ
ದುಡಿತದಲ್ಲಿದೆಯೈ
ಸುಪ್ತಚೇತನ
-