ನೀನಿರು ನೀರಿನಂತೆ
ತಗ್ಗಿದ್ದ ಕಡೆ ಹರಿಯುವಂತೆ
ಬರುವುದು ನೂರಾರು ಚಿಂತೆ
ತೇಲಿಸಿ ಬಿಡು ನೀರ ಮೇಲೆ ದೋಣಿಯಂತೆ-
Love to teach
free Lancer
Poet, Photographer
Nature lover and rest is secret... read more
ನೀನಿರು ನೀರಿನಂತೆ
ತಗ್ಗಿದ್ದ ಕಡೆ ಹರಿಯುವಂತೆ
ಬರುವುದು ನೂರಾರು ಚಿಂತೆ
ತೇಲಿಸಿ ಬಿಡು ನೀರ ಮೇಲೆ ದೋಣಿಯಂತೆ-
ನೀನಿರು ನೀರಿನಂತೆ
ತಗ್ಗಿದ್ದ ಕಡೆ ಹರಿಯುವಂತೆ
ಬರುವುದು ನೂರಾರು ಚಿಂತೆ
ತೇಲಿಸಿ ಬಿಡು ನೀರ ಮೇಲೆ ದೋಣಿಯಂತೆ-
ಕಾಲ ಎಂದರೇ ಕಳೆದು ಹೋಗುವುದು. ನಂದು - ನಾನು ನಾನು ಎಂದು ಹಾರಾಡುವ ಎಲ್ಲಾರೂ ಕಾಲದ ಕಾಲಾಳುಗಳು ಅಷ್ಟೇ. ಕಾಲ ಇದ್ದ ಹಾಗೇ ಇರೋದಿಲ್ಲ ಯಾವುದು ಕೂಡ ಅಷ್ಟೇ. ಬದಲಾವಣೆ ಜಗದ ನಿಯಮ.
ಈ ಕಾಲದ ಜೊತೆ ಜೊತೆಗೆ ಪ್ರಕೃತಿ ಕೂಡಾ ಬದಲಾಗಿಬಿಡುತ್ತದೆ. ಅದೇ ಬದುಕಿಗೆ ಬೇಕು ಕೂಡಾ. ಮಳೆ, ಚಳಿ ಬೇಸಿಗೆ ಎಂದೆಲ್ಲ ಪ್ರಕೃತಿ ಬಗೆ ಬಗೆಯಾಗಿ ಬದಲಾಗುತ್ತಿರುತ್ತದೆ. ಈ ಪ್ರತಿ ಕಾಲಕ್ಕೂ ಒಂದೊಂದು ವಿಶೇಷ ಗುಣವಿದೆ ಆ ಮೂಲಕ ಸುಸ್ಥಿರತೆಯನ್ನು ಅದು ಕಾಪಾಡಿಕೊಳ್ಳುತ್ತದೆ. ಹಾಗೂ ಜಗತ್ತು ಜೀವಸಂಕುಲ ಬದುಕಲು ದಾರಿ ಮಾಡಿಕೊಡುತ್ತದೆ. ಅದರಲ್ಲಿ ವಿಶೇಷವಾದದ್ದು ಈ ಮಳೆಗಾಲ ಕೂಡ. ಬೇಸಿಗೆಯಲ್ಲಿ ಒಣಗಿ ಬಳಲಿ ಬೆಂಡಾದ ಪ್ರಕೃತಿಯಲ್ಲಮಳೆ ಬಂದಾಗ ಹೆಗ್ಗುತ್ತದೆ ಉಬ್ಬುತ್ತದೆ. ಮಳೆಯ ರಭಸಕ್ಕೆ ಕೊಳೆಯಲ್ಲ ತೊಳೆದು ಪ್ರಕೃತಿ ಮೈ ತೊಳೆದಂತೆ ಭಾಸವಾಗುತ್ತದೆ. ಹಸಿರು ಗಿಡಗಳು ಧೂಳು ಕೊಡವಿಕೊಂಡು ನಳನಳಿಸುತ್ತವೆ. ಹಳ್ಳಕೊಳ್ಳಗಳು ಕಸಕಡ್ಡಿಗಳನ್ನು ದೂರ ದೂರ ಎಸೆದು ಸ್ವಚ್ಛಗೊಳಿಸುತ್ತವೆ. ಚಿಗುರು ಗಿಡಗಳು ಹುಲ್ಲುಗಳು ಹಸಿರನ್ನು ಹೊಮ್ಮಿಸಿ ಮೇಲೆದ್ದು ಬರುವುದು ಈ ಮಳೆಗಾಲದಲ್ಲಿ,ಮಳೆಗಾಲದ ವಾತಾವರಣ ವೆಂದರೆ ಅದು ಜೀವ ಸಂಗತಿಗಳು ಮೊಳೆಯುವ ಕಾಲ. ಚಿಕ್ಕ ಹುಳು ಅಣಬೆ ಹಿಂದೆ ಹಿಡಿದು ಅದೆಷ್ಟು ದೊಡ್ಡ ದೊಡ್ಡ ಮರಗಿಡಗಳೆಲ್ಲ ಮೊಳಕೆ ಹೊಡೆಯಲು ಈ ಮಳೆಗಾಲ ಕಾರಣವಾಗುತ್ತದೆ. ಹೀಗಾಗಿ ಮಳೆಗಾಲ ಬಂತೆಂದರೆ ಅದೊಂದು ನವೀಕರಣವಾದಂತೆ. ಹಳೆಯ ಕೊಳೆಯಲ್ಲ ತೊಳೆದು ಹೊಸ ನೀರು ಬಂತು ಎಂದು ಎಲ್ಲರೂ ಕೂಡ ಸಮರವು ಪಡುವಂತಹ ಚೈತನ್ಯ ಬರುವುದು ಮಳೆಗಾಲದಿಂದ. ಈ ಮಳೆಗಾಲ ಇಡೀ ಜನ ಜೀವನಕ್ಕೆ ಮೂಲ. ಮಳೆ ಬಂದಷ್ಟೇ ಬೆಳೆ, ಮಳೆ ಬಂದು ಕೆರೆಕಟ್ಟೆಗಳು ತುಂಬಿದಾಗ ಒಂದು ವರ್ಷ ನಿರಾಳವಾಗುತ್ತದೆ ಒಂದು ವರ್ಷದ ಶಕ್ತಿಯಲ್ಲ ನವೀಕರಣವಾದಂತೆ ಲೆಕ್ಕ.-
ಅಪ್ಪನಿಗಾಗಿ ಈ ಕ್ಷಣ...
ಏನೆಂದರೂ, ಬೈದರೂ ಮಾತಾಡದ ಅಪ್ಪ ದೇವರಂತೆ ಹೃದಯಲ್ಲಿ ಅದೇಗೆ-ಅದೇಕೆ ಕುಳಿತನೊ ಮಗನಿಗೇ ಗೊತ್ತಾಗಲಿಲ್ಲ.
ಕೇಳಿದಾಗ ದುಡ್ಡು ಕೊಡುವ ಎಟಿಎಮ್ ಅಲ್ಲ, ಅಪ್ಪ.
ಅಪ್ಪ ಎಂದರೆ, ಯಾರದೋ ನುಂಗಿ, ಬಂಗಲೆ ಅಂಥ ಮನೆ ಕಟ್ಟಬೇಕಿಲ್ಲ.
ತನ್ನ ನೋವ ನುಂಗಿ ನಿಲ್ತಾನಲ್ಲ ಅವನೇ ಅಪ್ಪ.
ಹಣದಿಂದ ಆಸ್ತಿಂದ ಅಪ್ಪನನ್ನು ಅಳೆದರೆ ಅದಕ್ಕಿಂತ ಘೋರ ಅಪಮಾನ ಮತ್ತೆ ಬೇರಿಲ್ಲ. ಅದು ಪಿತೃ ದ್ರೋಹನೇ.
ನಿಮಗೆ ಬುದ್ಧಿ ಬಂದ ಬಳಿಕ ನೀವು ಯಾವಾಗಾದರು ಅಪ್ಪನ ಶೂ, ಚಪ್ಪಲು, ಹಾಕಿದ್ದೀರಾ... ? At least ಅವನ ಶೂ ಚಪ್ಲಿ ಹತ್ತಿರದಿಂದ ಸರಿಯಾಗಿ ನೋಡಿ. ಅಷ್ಟು ಸಾಕು ಅಪ್ಪ ಅರ್ಥ ಆಗೋಕೆ.
ಇವತ್ತಿಗೂ ನಾವು ಅನ್ನೋ ಮಾತು ಏನು ಗೊತ್ತಾ? "ನನ್ ಅಪ್ಪನೇ ಕೈ ಎತ್ತಿ ಹೊಡೆದಿಲ್ಲ. ಬೈದಿಲ್ಲ.
ಇವನ್ಯಾರು.. ನಂಗೆ ಅನ್ನೋದಿಕ್ಕೆ? ಕೈ ತೋರಸಿ ಮಾತಾಡದಿಕ್ಕೆ ? " ಅಂತ.
ಅಪ್ಪ ಸಣ್ಣ ತಪ್ಪಿದ್ದರೂ ಬೈದೇ ಇರೊಲ್ಲ. ಅದು confidence. ಅಪ್ಪ ಬೈದಿಲ್ಲ. ಅಂದಿಲ್ಲ ಅನ್ನೋದು certificate ಇದ್ದಂಗೆ.
ಅಪ್ಪ ಎಂದರೆ ಒಂದು ಭಾವನೆ. ಆತ ಹೂಂ ಎನ್ನುವುದಿಲ್ಲ. Ok,ಆಯಿತು ಎನ್ನೋದಿಲ್ಲ.
ಅಪ್ಪ ಎಂದರೆ ಮೌನದ ಮತ್ತಂದು ರೂಪ.
++++
"ಅಪ್ಪಾ...ನಂಗೆ ಒಂದು ಬೈಕ್ ಬೇಕು..
ಒಂದು ಲಕ್ಷ ಕೊಡು... " ಎಂದಾಗ ಅಪ್ಪ ಮಾತಾಡಲಿಲ್ಲ.
ಆಗ ಮಗನಿಗೆ ಅಪ್ಪನ ಮೇಲೆ ಸಿಟ್ಟು.
"ನನಗೆ ಬೇಕಾಗಿದ್ದು ಕೊಡಿಸದ ಮೇಲೆ ಇವನೆಂಥ ಅಪ್ಪ...? ನನ್ನ ಫ್ರೆಂಡಿನ ಡ್ಯಾಡಿ ಕೇಳದೇ ಇದ್ದರೂ ಸಹ ಲಕ್ಷ ಲಕ್ಷ ಕೊಡುತ್ತಾನೆ " ಎಂದೆಲ್ಲ ಅಪ್ಪನ ಮೇಲೆ ಅಸಮಾಧಾನ.
ಕಾಲ ಕಳೆದಂತೆ ಅಪ್ಪನ ಸ್ಥಾನಮಾನದ ಅರಿವಾಯಿತು. ಕಾಲ, ಅನುಭವ & ಪರಿಸ್ಥಿತಿ ಒಂದೂ ಮಾತಾಡದೇ ಅಪ್ಪ ಏನಂತ ಹೇಳಿತು. ನಂತರ, ಅಪ್ಪ ಮಾಡಿದ ಸಾಲ ತೀರಿಸುದರಲ್ಲಿಯೇ ಸಂತೃಪ್ತಿ ಇರುತ್ತೆ.-
ಬೇರೊಬ್ಬರ ಬದುಕಿಗೆ ಕಲ್ಲು ಹಾಕುವ ನೀನು ಸತ್ತವರ ಕಂಡು ಮರುಗುವೆಯಲ್ಲ...
ಇದೇನು ವಿಪರ್ಯಾಸ
ಇದೇನು ವಿಪರ್ಯಾಸ-
ಪೋಸ್ಟ್ ಮಾರ್ಟಂ
ಇತಿಹಾಸದ ವೈಮಾನಿಕ ದುರಂತಗಳಲ್ಲೇ ದೊಡ್ಡದು ಇರಬಹುದಾದ ದುರಂತ ಒಂದು ಸದ್ಯ ಸಂಭವಿಸಿದೆ.
ದುರಂತಕ್ಕೀಡಾದ ಜನರ ಕುರಿತು ವಿಷಾದವೆಲ್ಲ ಮಡುಗಟ್ಟಿ ಹೋಗಿದೆ. ವಿಮಾನವೇರಿ ಹಾರಾಡ ಬಯಸಿದ್ದ ಕನಸುಗಳು, ಕರ್ತವ್ಯಗಳು ಎಲ್ಲವೂ ಕೂಡ ಸುಟ್ಟು ಕರಕಲಾಗಿದ್ದನ್ನು ಯಾವ ಕಣ್ಣಿಂದ ನೋಡುವುದು ಹೇಳಿ.? ಅರ್ಧ ಲಕ್ಷ ಲೀಟರ್ ಪೆಟ್ರೋಲ್ ಭಗ್ಗನೆ ಉರಿದು ಎಲ್ಲರೂ ಬೆಂದದ್ದು, ಸಾಮೂಹಿಕ ಶವದಹನ ಎನ್ನಬಹುದಾದಷ್ಟು ವಿದ್ರಾವಕಾರಿ ಆದಂತಹ ಸಂಗತಿ ಇದು. ತುಂಬಾ ಸಂಕಟ ಎನಿಸುತ್ತದೆ.
ಈ ಸಂದರ್ಭದಲ್ಲಿ ವಿಮಾನದ ಪೈಲೆಟ್ ಏನು ಮಾಡುತ್ತಿದ್ದ..? ಹೇಗೆ ತಡೆಯಬಹುದಿತ್ತು...? ಹಾಗೆ ಮಾಡಬಹುದಿತ್ತು.? ಹೀಗೆ ಮಾಡಬಹುದಿತ್ತು.... ಎಂದೆಲ್ಲ ವಿಚಾರಗಳು ವಿಶ್ಲೇಷಣೆಗಳು ಮೂಡುತ್ತವೆ.
ಅದು ನಮ್ಮ ಆ ಕ್ಷಣದ ಪ್ರತಿಕ್ರಿಯೆ ಮಾತ್ರ. ಪ್ರತಿ ಸ್ವಂದನೆ ಮಾತ್ರ. ಪ್ರತಿ ಅನಿರೀಕ್ಷಿತ ಸಾವಿಗೂ ಈ ತರದ ಪ್ರತಿಕ್ರಿಯೆಗಳು ಬರುವುದು ನಿರೀಕ್ಷಿತ. ಅದೇನೇ ಮಾಡಿದರು ಕೂಡ ಅದು ಜೀವಗಳನ್ನ ಮರಳಿ ತರುವುದಿಲ್ಲ ಹಾಗೂ ಆ ಕೆದಕುವಿಕೆ ಮಡಿದವರ ಕುಟುಂಬಗಳಿಗೆ ಯಾವ ಸಾಂತ್ವನವನ್ನು ತಾನೇ ನೀಡುತ್ತದೆ.
ಈ ಎಲ್ಲ ಪ್ರತಿಕ್ರಿಯೆಗಳು ಫೋಸ್ಟ್ ಮಾರ್ಟಂ ಅಷ್ಟೇ.
ಆದರೂ ತೀರಿಕೊಂಡ ಜೀವಿಗಳಿಗೆ ನಮ್ಮದೊಂದು ಅಶ್ಪೂರಕ ಶ್ರದ್ಧಾಂಜಲಿ. ಅದೇನೇ ಇರಲಿ ಬದುಕಿದ್ದವರ ಜೊತೆ ಒಂದಷ್ಟು ಮಾನವೀಯತೆಯಿಂದ ಬದುಕುವುದೇ ನಾವು ಬದುಕಿದವರೆಗೂ ನೀಡುವ ಗೌರವ ಮತ್ತು ಸತ್ತವರಿಗೆ ನೀಡುವ ನಿಜವಾದ ಮರ್ಯಾದಿ ಇಲ್ಲವಾದರೆ ಬದುಕಿದ್ದಕ್ಕೂ ಸತ್ತದ್ದಕ್ಕೂ ಅಳುವುದನ್ನು ಬಿಟ್ಟು ಯಾವ ವ್ಯತ್ಯಾಸ ತಾನೆ ಇರುತ್ತದೆ. ಹಾಗಾಗಿ ಇರುವಷ್ಟು ಕಾಲ ಪ್ರೀತಿಯಿಂದ ಬದುಕಿನ ಏನೇ ಕಷ್ಟವಿದ್ದರೂ ಏನೇ ಆದರೂ ಬದುಕುವರನ್ನು ಬದುಕಲು ಬಿಡಿ ಯಾರಿಗೂ ಬೇಸರ ಮಾಡಬೇಡಿ. ಅವಸರ ಮಾಡಬೇಡಿ.
-
ಸಮಸ್ಯೆನ ಫ್ರೆಂಡ್ಸ್ ಗೂ ಹೇಳದೇ
ಹಗಲು ನಗ್ತಾ ನಗ್ತಾನೇ ಓಡಾಡ್ತೀವಿ...
ಇತ್ತ ಮನೆವರಿಗೂ ನೋವನ್ನ ಹೇಳಲ್ಲ
ಎಲ್ಲಿ ನೊಂದ್ಕೊತಾರೋ ಅಂತ,...
ಇದೇ ಜೀವನ
ಹೀಗೆ ಒಂಟಿಯಾಗಿ ರಾತ್ರಿ ನಿದ್ದೆ ಇಲ್ದೆ ಒದ್ದಾಡ್ತೀವಿ-
ಸಾಲು ಸಾಲಂಗಡಿ ಸಂತೆಯಲ್ಲಿ
ಎಲ್ಲೆಡೆ ಗಿರಾಕಿ.
ವ್ಯಾಪಾರ ಇರದೇ ಒಬ್ಬರೂ ಅತ್ತ
ಸುಳಿಯದ ಅದೊಂದು ಮಳಿಗೆ
ಕಾಯುವ ಕಂಗಳು ಅತ್ತಿತ್ತ ಚಲಿಸುವುದ
ದಿಟ್ಟಿಸಿ ನೋಡಲೂ ಆಗುವುದಿಲ್ಲ-