ಆಗೋದೆಲ್ಲಾ ಒಳ್ಳೆಯದಕ್ಕೆ ಎಂದ ಮೇಲೆ
ಆಗುವುದರ ಬಗ್ಗೆ ಚಿಂತೆ ಯಾಕೆ,,??
ಶುಭರಾತ್ರಿ.-
ಒಂದೊಂದೆ ಹೆಜ್ಜೆ,ನಡುವೆ ಅಡವಿ,ಕಾಲಿಗೆ ಸಿಕ್ಕ ಬಳ್ಳಿಗಳು,ದೂರದಿ ಹೊಳೆವ ಮಿಣಕು ಹುಳ,
ಸಣ್ಣ ಕೂಗು,ಹಸಿ ಭಿತ್ತಿ,ಒಲವ ಜೌಗು ನೆಲ,ಚಿಗುರದ ಲತೆ,ನಡುವೆ ಮೌನ,ಮತ್ತೆ ಕಾರ್ಮುಗಿಲು,
ಮಳೆ ನಿಂತ ಹನಿ,ಹಳೆಯ ಹಂಚಿನ ತುದಿ,ಪಾಚಿ ಕಟ್ಟಿದ ಓದಗೆ, ಮೂಲೆಯಲ್ಲಿ ಹುಟ್ಟಿದ ಸಣ್ಣ ಹಸಿರು ಗಿಡ,
ಮನದೊಳಗೆ ಹುಟ್ಟಿದ ಮೇಘ, ತಾಕದ ತಂಗಾಳಿ
ನಡುವೆ ನಿಟ್ಟುಸಿರು,ನಾಳೆಗಾಗಿ ಏಳುವ ಮುಂಜಾವು.
-
ಹುಟ್ಟಿ ಬಿಡುತ್ತೇನೆ
ಬಿಟ್ಟರೆ ಬೆಳೆದು ಬಿಡುತ್ತೇನೆ,
ಕಾಂಕ್ರೀಟ್ ಕಟ್ಟೆ ಆದರೇನು
ಕಲ್ಲಿನ ಹಾಸು ಆದರೇನು,
ನನ್ನನು ಬೆಳಸಬೇಕು ಎಂದೇನೂ ಇಲ್ಲಾ
ಬದುಕಲು ಬಿಟ್ಟರೆ ಸಾಕು
-
ಜನರ ಮೆಚ್ಚಿಸುವ ಕೆಲಸಕ್ಕಿಂತ ;ಆತ್ಮತೃಪ್ತಿ ಕೊಡುವ ಕೆಲಸಗಳು,ನೆಮ್ಮದಿ ಕೂಡ ನೀಡುತ್ತವೆ.
-
ಮಕ್ಕಳ ನಾಳೆಯ ಊಟಕ್ಕೆ
ಇಂದು ಹಸಿದು ಮಲಗುವ ತಾಳ್ಮೆಯಿದ್ದರೆ
ಅದು ಬಡ ಅಮ್ಮನಿಗೆ ಮಾತ್ರ.-
ಜಾಹೀರಾತಿನಿಂದ ಆಯಾ ಕಂಪನಿ ಉದ್ದಾರ ಆಗಿರಬಹುದು; ಆದರೆ ಕುಟುಂಬದ ಹೊಣೆ ಹೊತ್ತ ಜೀವಗಳು ದಿವಾಳಿ ಆಗಿದ್ದು ಮಾತ್ರ ಸತ್ಯ.
ಶುಭೋದಯ,-
ಗಿಡವನ್ನೇನು ನಡಬೇಡ
ಇರುವ ಗಿಡವನ್ನುಳಿಸು
ಗಿಡ ಹುಟ್ಟಿತ್ತು.
ಪತ್ರಿಕೆಗಾಗಿ ಗಿಡ ನಡಬೇಡ
ಪ್ರಚಾರಕ್ಕಾಗಿ ಗಿಡ ಇಡಬೇಡ
ನೆಟ್ಟ ಗಿಡಕ್ಕೆ ನೀರುಣಿಸು.
ಗಿಡವೊಂದೆ ಪರಿಸರವಲ್ಲ
ಇರುವೆಯು ಹೌದು
ಸಕ್ಕರೆಯನ್ನು ಸುರಿಯಬೇಕಿಲ್ಲ
ವಿಷ ಹಾಕದಿರು ಸಾಕು.
ನಾಶ ಮಾಡಿದ್ದು ಬಹುಪಾಲು
ಉಳಿದಿದ್ದು ಇಲಿ ಪಾಲು
ಹಕ್ಕು ಇದ್ದಲ್ಲಿ ಕರ್ತವ್ಯವೂ
ಇರಲಿ, ಕಾಡಿನಲ್ಲಿ ಮಾತ್ರ ಅಲ್ಲ
ಮನದಲ್ಲಿ ಹರುಷ ತುಂಬಿತು.
ವಿಶ್ವ ಪರಿಸರ ದಿನದ ಶುಭಾಶಯಗಳು.-
ಶಾಲೆಗಳು ಶುರು ಆಗಿದೆ, ಮಕ್ಕಳ ಕಲರವ ಶುರು ಆಗಬೇಕು.ನಮ್ಮೂರಲ್ಲಿ ಅಳಿವಿನಂಚಿನಲ್ಲಿ ಇರುವ ನಾವೆಲ್ಲರೂ ಕಲಿತ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸೋಣ. ಸರ್ಕಾರಿ ಶಾಲೆಗಳ ಉಳಿಸೋಣ.ಮುಂದಿನ ದಿನಗಳ ಅಗತ್ಯತೆ ಕೂಡ .ಒಮ್ಮೆ ಕಳೆದು ಕೊಂಡರೆ ಮುಂದೆ ಪಶ್ಚಾತಾಪ ಪಡಬೇಕಾದೀತು.
-