Nag Samskruth  
80 Followers · 76 Following

Joined 16 January 2018


Joined 16 January 2018
YESTERDAY AT 12:22

Land for sale ಬೋರ್ಡ್ ಹಾಕುತ್ತ ಹೋದೆವೇ ವಿನಃ
Land for save ಬೋರ್ಡ್ ನೆಡಲೇ ಇಲ್ಲ
ಇನ್ನೆಲ್ಲಿ ಪರಿಸರ ಕಾಳಜಿ ನಮಗೆ
ಪರಿಸರ ಜಾಗೃತಿ ನಮಗೆ ಈಗ ಒಂದು ದಿನದ status fashion ಅಷ್ಟೇ..

- ಕೆ.ನಾಗರಾಜ ಉಲವತ್ತಿ

-


YESTERDAY AT 11:57

ವ್ಯಸನ ಮುಕ್ತ ಸಮಾಜ ಕಲ್ಪನೆಯಲ್ಲೇ ಕಳೆದೋಯ್ತಾ..?
ಯುವ ಸಮೂಹಕ್ಕೆ ಪ್ರತಿಷ್ಠೆಯ ವ್ಯಸನ
ಖಾದಿ ಮಂದಿಗೆ ಪ್ರಚಲಿತ ವ್ಯಸನ
ಪುರ ಜನಕ್ಕೆ ಊರ ಜನಕ್ಕೆ ತಿಳಿಯದ ವ್ಯಸನ
ಮುಕ್ತ ಕಾಣದೆ ನಿರ್ಮಲವಾದಿತೆ..?
ಶಹರ ಸಹಬಾಳ್ವೆ ಶಾಸನ..!!

- ಕೆ.ನಾಗರಾಜ ಉಲವತ್ತಿ

-


5 SEP AT 9:33

ಎಲ್ಲಾ ಧರ್ಮಗಳನ್ನು ಹೊತ್ತಿರೋದು ಪ್ರಕೃತಿ ಧರ್ಮ
ಎಲ್ಲಾ ಧರ್ಮಗಳ ಧರ್ಮ ಶೇಷ್ಠತೆ
ಕೊನೆಗೆ ಮಣ್ಣಿನೊಂದಿಗೆ ಬೆಸಿದುಕೊಳ್ಳುತ್ತದೆ
ಮಣ್ಣನ್ನು ಬಿಟ್ಟು ಮಾನವರಾಗಲು ಸಾಧ್ಯವಿಲ್ಲ
ಇದೇ ಮನುಜ ಧರ್ಮ ಸಾರ..

- ಕೆ.ನಾಗರಾಜ ಉಲವತ್ತಿ

-


30 AUG AT 13:41

ಮನುಷ್ಯನ ಆಯಸ್ಸು ಕುಸಿಯುತ್ತಿದೆ
ಸಂತೋಷಗಳು ಕುಂದುತ್ತಿವೆ
ಹೊಂದಾಣಿಕೆ ಕ್ಷೀಣಿಸುತ್ತದೆ
ಆಹಾರದಲ್ಲಿ ಯಥೇಚ್ಛವಾಗಿ ಕಲಬೆರಕೆ ಸೇರುತ್ತದೆ
ನಮಗೆ ಇದರ ಚಿಂತೆ ಇಲ್ಲ
ನಮಗೆ ಚಿಂತೆ ಚಿಂತನೆ ಇರುವುದು
ನಾವು ಸತ್ತಾರೂ ಸರಿ ನಾನೇ ಶೇಷ್ಠ
ನಮ್ಮದೇ ಶ್ರೇಷ್ಠ ಎಂಬ ಬೆಳಕು ಕಾಣದ ಭಾವನೆ ಮಾತ್ರ

- ಕೆ.ನಾಗರಾಜ ಉಲವತ್ತಿ

-


18 AUG AT 11:26


ತಿಮ್ಮನ ತರ್ಲೆ

ಬೇನಾಮಿ ಆಸ್ತಿಗಳಿಗೆ ನಿರುದ್ಯೋಗಿಗಳೇ ಆಸರೆ..!
ಇಲ್ಲವಾದರೆ ಒಬ್ಬ ಸಾಮಾನ್ಯ ಮೆಂಬರ್ ದುಬಾರಿ ಕೂಲಿಂಗ್ ಕನ್ನಡಕ ಬಹು ಬೆಲೆಯ ವಾಹನದಲ್ಲಿ ಈ ದುಬಾರಿ ದುನಿಯಾದಲ್ಲಿ ಓಡಾಡಲು ಸಾಧ್ಯವೇ..?

- ಕೆ.ನಾಗರಾಜ ಉಲವತ್ತಿ

-


18 AUG AT 11:13

ತಿಮ್ಮನ ತರ್ಲೆ

ತಿಂದು ತೇಗುವರ ಮಧ್ಯೆ
ತಂಬುಳಿ ಊಟಕ್ಕೂ
ಪರದಾಡುವವನೇ ಪ್ರಾಮಾಣಿಕ

- ಕೆ.ನಾಗರಾಜ ಉಲವತ್ತಿ

-


12 AUG AT 10:01

ತಾಯಿಗಿಂತ ದೇವರು ದೊಡ್ಡವನ..?
ಒಂದತ್ತು ಸತ್ಯ..!
ತಾಯಿ ಇಲ್ಲದೇ ಯಾವ ದೇವರು ಹುಟ್ಟಲು ಸಾಧ್ಯವಿಲ್ಲ
ಪ್ರಕೃತಿ ಕಡಲು ಒಡಲು ಎಲ್ಲವೂ ತಾಯಿಯ ನಿಸ್ವಾರ್ಥತೆ ಜೀವ ಸಂಕುಲಗಳು
ತಾಯಿಯನ್ನು ಮೀರಿ ದೇವರಿದ್ದಾನೆ ಎನ್ನುವುದನ್ನು ಸ್ವಂತ ದೇವರೇ ಒಪ್ಪಲಾರನು..!!
ದೇವರು ಸಹ ಮೊದಲು ತಾಯಿ ಗರ್ಭದ ಕೂಸು..

- ಕೆ.ನಾಗರಾಜ ಉಲವತ್ತಿ

-


10 AUG AT 9:40

ಧರ್ಮ ಎಂಬುದು ಹೃದಯಕ್ಕೆ ಸಂಬಂಧಿಸಿದ್ದು ಹೊರತು
ಜಾತಿಗೆ ಸಂಬಂಧಿಸಿದ್ದು ಅಲ್ಲ

- ಕೆ.ನಾಗರಾಜ ಉಲವತ್ತಿ

-


1 AUG AT 19:08

ಪ್ರೀತಿ... 1974 - 2015
"ಒಲವೇ ಜೀವನ ಲೆಕ್ಕಚಾರ"
ಪ್ರೀತಿ... 2015 - 2025
"ಹಣವೇ ಜೀವನ ಪ್ರೀತಿ ಪ್ಯಾರ"

- ಕೆ.ನಾಗರಾಜ ಉಲವತ್ತಿ

-


23 JUL AT 11:56

ಮನುಷ್ಯನ ಪ್ರತಿಷ್ಠೆಗಾಗಿ ಕಟ್ಟಿದ ಗೂಡಲ್ಲ ಪ್ರಕೃತಿ
ಅಸಖ್ಯಾತ ಜೀವ ಸರಪಳಿಯ ಸಂಗಮದ ಆಕೃತಿ
ಎಲ್ಲಾ ಪ್ರಬೇಧಗಳ ಉಗಮದ ಸ್ವೀಕೃತಿ
ಧರ್ಮ ಜಾತಿಗೂ ನಿಲುಕದ ವಿಶ್ವವಿದ್ಯಾಲಯ ಕೃತಿ

- ಕೆ.ನಾಗರಾಜ ಉಲವತ್ತಿ

-


Fetching Nag Samskruth Quotes