ಗುರು ನಮನ
ಸಾವಿರ ನೋವುಗಳ್ ಒಡಲೊಳ್ ಕುದಿಯುತಿರ್ಪುದು
ನಗು ಮೊಗದ ಹೂವರಳ್ಸಿ ಪ್ರೀತಿಯ ಹಂಚುತಿರ್ಪರು
ಕಾಳಜಿಯ ಚಿಲುಮೆಯೇ ಮನದೊಳ್ ಮನೆಮಾಡಿರ್ಪುದು
ಮಮತೆಯಿಂದ್ ಶಿಕ್ಷಿಸಿ ತಿದ್ದಿ ಬುದ್ಧಿ ಹೇಳುತಿರ್ಪರು
ಹೆತ್ತಿಲ್ಲ ಹೊತ್ತಿಲ್ಲ ತನ್ನವೇನ್ಕುಡಿಗಳಲ್ಲ ತನ್ನ ಮಕ್ಕಳ್
ಎನಿತೇ ಬೀರುತಿರ್ಪರು ಜಯವಕಂಡ್ ಬೀಗುತಿರ್ಪರು
ಇನಿತೆಲ್ಲಾ ಗುಣಗಳ್ ಅಧಿಪತಿ ಜ್ಞಾನಗಳ್ ನಿಧಿ ಗುರು
ದೈವೀ ಸಾಕ್ಷಾತ್ಕಾರ ಅರ್ಪಿಸುವೆನವರ್ಗೆ ನಮಸ್ಕಾರ
-
ಒಬ್ರ ಲೈಫ್
ಹಾಳ್ ಆಗ್ಯಾದ
ಅಂದ್ರ ಅದಕ್ಕ
ಹಲವಾರು ವ್ಯಕ್ತಿಗಳು
ಕಾರಣ ಇರಬಹುದು.
ಆದ್ರ ಒಬ್ರ ಜೀವನ
ಉತ್ತಮವಾಗಿ ರೂಪುಗೊಂಡಾದ
ಅಂದ್ರ ಅದಕ್ಕ ಮುಖ್ಯ
ಕಾರಣ ಗುರುಗಳಾಗಿರ್ತಾರ...
ಎಲ್ಲರಿಗೂ
ಗುರು ಪೂರ್ಣಿಮೆಯ
ಶುಭಾಶಯಗಳು...
🙏🥰🙏-
ಅಜ್ಞಾನದ ಕಳೆಯ ಕಿತ್ತು,
ಸುಜ್ಞಾನದ ಬೀಜ ಬಿತ್ತಿ,
ಸದ್ಗುಣಗಳ ಗೊಬ್ಬರ ಹಾಕಿ,
ನವ ಚೇತನದ ಫಲವ ಮೂಡಿಸಿ,
ದೇಶಕ್ಕೆ ಒಳಿತೆಂಬ ಗಾಳಿಯು ಅಳಿಯದೆ ಉಳಿಸಿ
ಸಿಗುವಂತೆ ಮಾಡುವವರೇ
ನಮ್ಮೆಲ್ಲರ ಗುರುಗಳು.
" ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆಸುವ ಗುರುಗಳೆಲ್ಲರಿಗೂ ಕೋಟಿ ನಮಸ್ಕಾರಗಳು. "-
ಬಾಳೆಂಬ ಬಂಡಿಯಲಿ
ಬರವಣಿಗೆಯೆಂಬ
ಬಾಂಧವ್ಯದಿ
ಬೆಸೆಯುತಿರುವೆ
ಬಂಧ ಅನುಬಂಧದಲೆಗಳಂತೆ
ಬದುಕಿನ ಮಜಲುಗಳಲಿ
ಬಾನಾಡಿಗಳ ಸ್ವಚ್ಛತೆಯ ಮನದಂತೆ
ಬಂಗಾರದಂತಹ ಸಾರ್ಥಕತೆ ಪಡೆದು
ಬಂದುದ್ದಲವು ಬರಲಿ
ಬರುವುದೆಲ್ಲವೂ ಪಂಚಾಮೃತದಂತೆ
ಬಂದದ್ದನ್ನ ಸ್ವೀಕರಿಸುತಾ
ಬರಹವೆಂಬ ಬೃಂದಾವನದಿ
ಬರೆಯುತಿರುವ ಕಿರು
ಬರಹಗಾರ್ತಿಯೂ-
ನಿಸ್ತುಲನಿರ್ಮಲ, ನಿಷ್ಕರ್ಮ ಗುರುವೆ
ಅಪಾರ, ಅನಂತ ಕರುಣಾಮಯಿ ಸರ್ವದಾ
ಅನವರತ ಸರಿದಾರಿಯ ತೊರೆನ್ನ ಪ್ರಭುವೆ!-
ಗುರು ಎಂದರೆ ಅದ್ಬುತ ಶಕ್ತಿ
ಗುರು ಎಂದರೆ ಜ್ಞಾನದ ಬೆಳಕು
ಗುರು ಎಂದರೆ ಅರಿವಿನ ಆಗರ
ಅಜ್ಞಾನದ ಅಂಧಕಾರವ ತೋಲಗಿಸಿ
ಸುಜ್ಞಾನದ ದೀಪವ ಬೆಳಗಿಸಿದ
ಸಮಸ್ತ ಗುರುವೃಂದಕ್ಕೆ
ಗುರುಪೂರ್ಣಿಮೆಯ
ಹಾರ್ದಿಕ ಶುಭಾಶಯಗಳು-
ನದಿ,ಸಮುದ್ರ ವನ್ನು ದಾಟುವಾಗ ಅಂಬಿಗನನ್ನು ನಂಬಿದಂತೆ, ಹುಟ್ಟು ಸಾವಿನ ನಡುವಿನ ಭವಸಾಗರವ ದಾಟಲು ಅರಿವೆಂಬಗುರುವನ್ನು ನಂಬಲೇಬೇಕು!
-
ಎತ್ತಲೋ ಸಾಗುತ್ತಿದ್ದ ಈ ಜೀವನದ ಹಾದಿಯಲಿ
ಸರಿ ದಾರಿಯ ತೋರಿ ಜ್ಞಾನ ದೀವಿಗೆಯ ಬೆಳಗಿದ ಗುರು ನೀವು
ತಪ್ಪು ಮಾಡಿದಾಗ ಮಾತಲ್ಲೆ ಶಿಕ್ಷಿಸಿ ಕ್ಷಮಿಸಿ
ತಿದ್ದಿ ನಡೆದಾಗ ಮನದಲ್ಲೇ ಆನಂದಿಸಿದ ಶಿಕ್ಷಕ ನೀವು
ಅಕ್ಕರೆಯಿಂದ ಅಕ್ಷರ ಕಲಿಸಿ ಜಗದ ಶ್ರೇಷ್ಠರ ವಿಚಾರ ತಿಳಿಸಿ
ನಾವು ಅವರಂತಾಗಬೇಕೇಂದು ಪ್ರೇರೇಪಿಸಿದವರು ನೀವು
ನುಡಿಯೊಂದಿಗೆ ಉತ್ತಮ ಮೌಲ್ಯಗಳನ್ನು ಪರಿಚಯಿಸಿ
ಬೋಧನೆಯ ಮೂಲಕ ಸಾಧನೆಯ ದಾರಿ ತೋರಿದವರು ನೀವು
ಪೋಷಕರಂತೆ ಪ್ರೀತಿ ತೋರಿ ಸ್ನೇಹಿತರಂತೆ ಜೊತೆಗೂಡಿ
ಪ್ರತಿ ಸೋಲು ಗೆಲುವಿನಲಿ ಧೈರ್ಯ ತುಂಬಿದವರು ನೀವು
ನಿಮಗುಂಟು ಎಣಿಕೆಗೆ ಸಿಗದ ಶಿಷ್ಯವೃಂದ
ಅದರಲ್ಲಿ ನಾನೊಂದು ಚುಕ್ಕಿ ಎಂಬುದು ಪರಮಾನಂದ
"*ಶಿಕ್ಷಕರ ದಿನಾಚರಣೆಯ ಶುಭಾಶಯಗಳು* "
-
ಮಮತೆಯ ಸಾರಥಿ
ಪ್ರೀತಿಯ ಮೂರುತಿ
ತಾಳ್ಮೆಯ ಒಡತಿ
ಅಕ್ಷರ ಕಲಿಸಿದ ಸರಸ್ವತಿ
ಮೊದಲ ಗುರು ತಾಯಿಗೆ
ನನ್ನ ಪ್ರಥಮ ಆರತಿ....
ಜವಾಬ್ದಾರಿಗೆ ಒಡೆಯ
ನನ್ನ ಮೊದಲ ಗಳೆಯ
ಜೀವನದ ಪಾಠ ಹೇಳುವ
ಬದುಕಿನ ಮಾರ್ಗದರ್ಶಿ
ಎರಡನೇ ಗುರು ತಂದೆಗೆ
ನನ್ನ ದ್ವಿತೀಯ ನಮಸ್ಕಾರ....
ನೀತಿ ಪಾಠಗಳ ಕಲಿಸಿ
ಜೀವನ ಮೌಲ್ಯಗಳ ತಿಳಿಸಿ
ಕನಸುಗಳಿಗೆ ರೆಕ್ಕೆಯ ಕಟ್ಟಿ
ಮನಸಿಗೆ ಸ್ಫೂರ್ತಿಯ ತುಂಬಿ
ತಪ್ಪಿದ್ದಲ್ಲಿ ತಿದ್ದಿ ಸರಿ ಇದ್ದಲ್ಲಿ ಒಪ್ಪಿ
ಗುರಿಯ ತೋರಿದ ಗುರುಗಳಿಗೆ
ಸುಜ್ಞಾನದೆಡೆಗೆ ನಡೆಸಿದ ಗುರುವರ್ಯರಿಗೆ
ನನ್ನ ತೃತೀಯ ನಮನ
ತೀರಿಸಲಾಗದು ಈ ನಿಮ್ಮ ಋಣ
ಮುಂದಿನ ನೂರು ಜನುಮ....☺️-