ಬಿಂದು ಭಾನು   (ಭಾನರಸಿ.)
584 Followers · 187 Following

read more
Joined 15 January 2019


read more
Joined 15 January 2019
22 JUN 2023 AT 22:48

ಸುಮ್ಮನೇ ನಿಂತರೆ,
ಸಕ್ಕರೆಯಂತೆ ನಕ್ಕರೆ,
ಸಿಕ್ಕಸಿಕ್ಕಲ್ಲೆಲ್ಲ ಅಕ್ಕರೆಯ
ಹೆಸರಲ್ಲಿ ಪುಕ್ಕಟೆ ಭಾಷಣ......

-


17 APR 2023 AT 10:48

ಇರಬೇಕು ನಿಜ
ನಿಮ್ಮೊಳಗಿನ ಹಠವೂ
ಮೇಲ್ಪಟ್ಟು ಸ್ವಾಭಿಮಾನವೂ,
ಆದರೂ ಪಕ್ಕಕ್ಕಿಡಿ ಒಮ್ಮೆ
ನಿಮ್ಮವರ ವಿಷಯದಲ್ಲಿ,
ಸಂಬಂಧಗಳ ಸವಿಯು
ಎಲ್ಲಕ್ಕಿಂತ ಮಿಗಿಲು,
ಇಂದು ಇರುವವರ ಇರುವು
ನಾಳೆಗೆ ಬರೀ ನೆನಪಾಗಬಹುದು.....

-


26 DEC 2022 AT 22:54

ಆಕರ್ಷಣೆಗೆ ಅಯಸ್ಕಾಂತವೇ ಬೇಕೆಂದಿಲ್ಲ,
ಒಂದೊಳ್ಳೆ ಮನಸ್ಸು ಸಾಕು.
ಅರಿತವರು ಒಂದಾಗುತ್ತಾರೆ;
ಅರಿಯದವರು
ದೂರುತ್ತಾರೆ- ದೂರಾಗುತ್ತಾರೆ:

-


24 AUG 2022 AT 20:53

ನಿನ್ನರಸಿ ಬಂದಿರುವೆ,
ಕತ್ತಲು ಕವಿಯುವ ಮುನ್ನ
ಕರೆದೊಯ್ಯಿ ನನ್ನನು ನಿನ್ನೊಲವಿನೂರಿಗೆ

-


17 AUG 2022 AT 11:27

ಬದಲಾವಣೆಗಳು
ಒಂದಷ್ಟು ದಿನ
ಕಷ್ಟವೇ,
ಆಮೇಲೆ ಮತ್ತಿದೇ
ಮಾಮೂಲಿ....
ಹೊಂದಿಕೊಂಡರಷ್ಟೆ
ಬದುಕು,
ಮರುಭೂಮಿಯ
ಒಂಟೆಯಂತೆ....

-


13 JUL 2022 AT 13:02

ನನ್ನುಸಿರ ಏರಿಳಿತದಲ್ಲಿ ನಿನ್ನದೇ ಧ್ಯಾನ.
ಕೈಬಿಡದಿರು ನನ್ನ ನಿನ್ನೊಳು ಲೀನವಾಗುವ ಮುನ್ನ.

-


3 MAY 2022 AT 16:57

ಸಂಬಂಧ ಯಾವುದೇ ಇರಲಿ, ವರ್ಷಗಳು ಕಳೆದ ನಂತರವೂ ಮಾತಿನಲ್ಲಿ ಮೊದಲಿನಷ್ಟೇ ಖುಷಿ ಮತ್ತು ಅದೇ ಪ್ರೀತಿ ಲವಲವಿಕೆ ಇದ್ದರೆ ಮಾತ್ರ ಅದು ಕೊನೆ ತನಕ ಉಳಿಯೋದು. ಒಮ್ಮೆ ನೆನಪಿಸಿಕೋ ನಿನಗೆ ಮುಖ್ಯವೆನಿಸಿದವರ ಜೊತೆ ನಿನ್ನ ಪ್ರತಿಕ್ರಿಯೆಯನ್ನು!

-


30 APR 2022 AT 14:35

ಬೇಕೆನ್ನುವ ಬಯಕೆಯ ಬಲ್ಲ,
ಬೇಕಾದದ್ದು ಸಿಕ್ಕಮೇಲು
ಸಾಕೆನ್ನುವ ಭಾವ ಬರಲೇ ಇಲ್ಲ!

-


24 APR 2022 AT 16:22

'ಭಾನದನಿ' - 309
ಬಡವ ಬಡವನಾಗಿ ಬಾಳುವುದು,
ತಾ ಬಡವನೆಂದುಕೊಂಡು ಬದುಕುವುದ ಬಿಡುವತನಕವಷ್ಟೆ !

-


24 APR 2022 AT 15:50

ಭಾನದನಿ
ನೆನಪಿನಲ್ಲಿಡಬೇಕಾದ ಮೂರು ಅಂಶಗಳು

1. ಖುಷಿ ಪಡು - ನಿನ್ನ ಕಷ್ಟ ಸುಖಗಳನ್ನು ಆಲಿಸುತ್ತೇನೆ ಎಂದು ನುಡಿವವರು ಸಿಗುವುದಂತು ನಿಜ.
2. ದುಃಖಿಸದಿರು - ಮಾತು ನೀಡಿದವರು ಎಲ್ಲಾ ಸಮಯದಲ್ಲೂ ನಿನಗೆಂದೇ ಬದುಕಲು ಸಾಧ್ಯವಿಲ್ಲ.
3. ಸಮಾಧಾನದಿಂದಿರು - ನಿನ್ನಂತೆಯೇ ಅವರು, ಅವರಿಷ್ಟದ ಬದುಕು ಅವರಿಗೆ ಹೆಚ್ಚು.

-


Fetching ಬಿಂದು ಭಾನು Quotes