*ಹೈಕು*
ಗುಬ್ಬಚ್ಚಿಗಳ
ಚಿಲಿಪಿಲಿ ನಿನಾದ
ಶುರುವಾಗಿದೆ.-
ಬಾಲ್ಯದಲ್ಲಿ ಅಚ್ಚರಿ
ಮೂಡಿಸುವಂತ
ಅದರ ಚಿಂವ್ ಚಿಂವ್
ಧ್ವನಿ ಕೇಳುತ್ತಾ
ಅಷ್ಟು ಚಿಕ್ಕದಾದರೂ
ಬಾನೆತ್ತರಕ್ಕೆ ಹಾರುವಂತ
ನನ್ನ ಪ್ರೀತಿಯ ಗುಬ್ಬಚ್ಚಿ
& ನಾನು ನಲಿಯತ್ತಾ
ಇರುವ ದಿನಗಳೂ ಇಲ್ಲ
ಗುಬ್ಬಚ್ಚಿನೂ ಇಲ್ಲ
ಇಂದು ವಿಶ್ವದ
ಗುಬ್ಬಿಗಳ ಸಂರಕ್ಷಣ ದಿನ
ಸಾಧ್ಯವಾದಷ್ಟೂ ಸಂರಕ್ಷಿಸೋಣ.-
ನನ್ನ ತಂದೆಗೆ ನಾನಿನ್ನು ಪುಟ್ಟ ಗುಬ್ಬಚ್ಚಿಯಂತೆ..
ಈ ಗುಬ್ಬಚ್ಚಿಯನ್ನು ಸುಂದರವಾದ ಗೂಡಿನಲ್ಲಿಟ್ಟು ಕಾಯುತ್ತಿರುವ ಅರಸನಿಗೆ ನಾನೆಂದಿಗೂ ಋಣಿಯಾಗಿರುವೆ....-
ಬಾನಂಗಳದಲ್ಲಿ ಹಕ್ಕಿ ಗುಬ್ಬಿಗಳು ಹಾರಾಡಬೇಕೆಂದರೆ
Ban ಆಗಬೇಕು mobile ತರಂಗಾಂತರಗಳು
ಮನದಂಗಳದಲ್ಲಿ ಚಿಲಿಪಿಲಿ ನಾದ ಕೇಳಬಯಸಿದರೆ
ಮನೆಯಂಗಳದಲ್ಲಿ ಇಡಬೇಕು ನೀರು ಕಾಳು
ಕಂಡಕಂಡಲ್ಲಿ mobile ಗೋಪುರಗಳನ್ನ ಸೃಷ್ಟಿಸಿದರೆ
ಹಾಳಾಗುವುದು ಯಾರಿಗೂ ತೊಂದರೆ ಕೊಡದವರ ಬಾಳು
ಗಂಟೆಗಟ್ಟಲೆ call ಮಾಡಿ ಮಾತಾಡಿದರೆ
ಕೇಳುವವರಾರು ಗುಬ್ಬಚ್ಚಿಗಳ ಗೋಳು-
ಯಾಕೋ ಚಳಿ ಏನೋ ಬಾ
ನನ್ ಪಕ್ಕ ಮಲ್ಕೋ ಒಳ್ಳೆ
ಹೊದಿಕೆ ಕೊಡ್ತೀನಿ, ಹೊಟ್ಟೆ
ತುಂಬಾ ಊಟ ಹಾಕ್ತಿನಿ
ಆದ್ರೆ ಒಂದ್ condition
ಏನು ಅಂದ್ರೆ ನಿನ್ ಜೊತೆ
ನನ್ನು ಹಾರಕ್ಕೆ ಕರ್ಕೊಂಡ್ ಹೋಗು
ನನ್ನು ಫ್ರೆಂಡ್ ಮಾಡ್ಕೋ 😅😅-
ನಿನ್ನ
ಅಂಗೈಯಷ್ಟು
ಪ್ರೀತಿಯಲಿ
ಗುಬ್ಬಚ್ಚಿ
ನಾನು
ಇನ್ನೂ ,
ನಿನ್ನ
ಕಿರು
ಬೆರಳು
ತಾಕಲು
ನನ್ನ
ಉಸಿರೆ
ಏರು
ಪೇರು
ಗಮನಿಸುವೆಯಾ
ಮತ್ತೊಮ್ಮೆ
ನೀನು-
ತಂಪಾದ ಗಾಳಿಯ
ಲಾಲಿಹಾಡಿಗೆ ಮನದಲಿ
ಈ ದಿನದ ಅನುಭವ ಸವಿಯುತ
ನಾಳೆಯ ಚಿಂತೆಯಿಲ್ಲದೆ
ಗುಬ್ಬಚ್ಚಿಯು ನೆಮ್ಮದಿಯಾಗಿ
ನಿದಿರೆಯ ಲೋಕದಲಿ ಸಂಚರಿಸುತ್ತಿದೆ ,,,
-