ನಿನ್ನ ಕೊಳಲಿನ ರಮ್ಯ ಮನೋಹರ
ಓಂಕಾರ ಮನದಲಿ ಪುಟಿದೇಳುಸುತಿದೆ
ದಿವ್ಯ ರೂಪದ ಭಾವ
ನಿನ್ನ ಸ್ಮೃತಿಯಲ್ಲಿ ಮುಳುಗಿದ ಜೀವಕೆ
ಆತ್ಮಾನಂದ ಬದುಕಿದು ಪವನ
ರೋಮ ರೋಮದಲ್ಲಿ ನಿನ್ನ ನಾಮ
ಪೋಣಿಸಿ ಭಜಿಪೆನು ಭಕ್ತಿ ಗಾನಸುಧೆ
ಅರಳುವ ಪ್ರತಿ ಪುಷ್ಪವು ನಗುತಿಹುದು
ಸೆರೆಮನೆಯಿಂದ ಧರೆಗಿಳಿದ ಲೋಕೋದ್ದಾರಕನಿಹನು
ಮರಳಿ ಬರುವ ಮತ್ತೆ ನುಡಿಸುವ
ಧರ್ಮದ ಗಾನವನು ಎನ್ನುತ
ಬಿದಿರಿನ ಕೊಳಲ ಮತ್ತೆ ಅಲಂಕರಿಸಿ
ಮುಗ್ದಲೀಲಾಮೋದನಗಳೊಂದಿಗೆ ಮೋಹಕ
ದನಿಯ ರಿಂಗಣಕೆ ಓಗೊಟ್ಟು
ಕರಗಿ ನೀರಾಗಿ ನಿನ್ನ ಪಾದವ
ಸೇರುವಾಸೆ ಎನಗೆ ಕೃಷ್ಣ....
✍Thilaka kulal
-
ನೀ ಕೃಷ್ಣನಾದರೆ ದೂರವಿರುವ
ಜೀವಕ್ಕೆ ಜೀವ ಕೊಡುವ ರಾಧೆ ನಾ ಆಗಲಾರೆ,
ಸದಾ ನಿನ್ನ ಜೊತೆ ಇರುವ
ನಿನ್ನ ಅಧರ ಸ್ಪರ್ಶಕೊಟ್ಟು ಉಸಿರು ತುಂಬುವ
ಕೊಳಲು ನಾ ಆಗುವಾಸೆ.
-
ನವಿರೆಳೆಯ ಮೇಲೆ
ನವೋದಿತ ಕಾವ್ಯ
ಈ ಅನಾಥ ಭಾವನೆಗಳೆಗೆ
ನಿವೇದಿಸುತಿದೆ
ನಿನ್ನ ಕೊಳಲ ರಿಂಗಣದ
ಮನೋಜ್ಞ ರಾಗ
ಪುಟಿದೇಳುತಿಹ ಸುಂದರ
ಸುಶ್ಯಾವ್ಯದಲಿ ಮರೆತಿಹ
ಮನದ ದಿವ್ಯಾ
ಭಕ್ತಿಯ ಭಾವ
ನಿನ್ನ ಸ್ಮರಿಸಿಹುದು
ರಾಧೆಯಂತೆ ನಂದನ
ಈ ನಲುಮೆಯ
ಅನಘ್ನ೯ ಸ್ಮೃತಿಯಲಿ
ಮಿಂದಿಹ ಭಾವಕೆ
ಬದುಕು ನೀ ಕೃಷ್ಣ...
✍Thilaka kulal
-
ರಾಧೆಯಂತವಳೆ ಶ್ರೀಕೃಷ್ಣನಿಗೆ ಸಿಗಲಿಲ್ಲ
ಇನ್ನು ಸೀತೆಯಂತೊಳು ಶ್ರೀಕೃಷ್ಣನಿಗೆ ಸಿಗುವಳೆ...-
ಕವಿಗಳಾ ಜಗದಲಿ
ನನ ಕಲ್ಪನೆಯ ಗೀಚುತ್ತಾ ಪದಗಳಲಿ
ನಾ ಕರ ಮುಗಿದು ಕೇಳುತಲಿ
ಕೊನೆತನಕ ನಿನ್ನಾಶೀರ್ವಾದ ಇರಲಿ
ಓ ನನ್ನ ದೇವ ನೀ ಬೇಕು ನನ್ನ ಬಾಳಲಿ
ಹರಸು ಮುರಳೀ...
-
ಕೃಷ್ಣ ಕೃಷ್ಣ ಕೃಷ್ಣ
ಕೃಷ್ಣ ಕೃಷ್ಣ ಕೃಷ್ಣ
ದೇವಕಿಯ ಮುದ್ದುಕಂದನು ನೀನಾದೆ
ನಂತರ ಯಶೋದೆಯ ಮಡಿಲ ಸೇರೋದೆ
ನಿನ್ನ ಮೊಗವು ಆ ನಗುವ ಚಂದಿರನು
ನಿನ್ನ ಕಿಲಕಿಲ ನಗುವಿಗೆ ಯಾವುದು ಸರಿಸಾಟಿಯಿದೆಯೇನು
ನಮ್ಮೆಲ್ಲರ ಮನೆ ದೇವರಾಗಿ ಬೆಳಗಿದವ ನೀನು
ಆಹಾ ನಿನ್ನ ಮುದ್ದಾದ ಮುಡಿಗೆ
ನವಿಲು ಗರಿಯ ಅಲಂಕಾರವೇನು
ಆ ನಿನ್ನ ಹೊಳೆಯುವ
ಕಣ್ಣಲ್ಲೇ ಜಗವನ್ನೇ ಬೆಳಗಿದವ
ನೀನು ಸತ್ಯವನ್ನು ಜಗತ್ತಿಗೆ
ಸಾರಿದವನು ಆ ರಾಧೆಯನ್ನು ಎಷ್ಟೊಂದು ಕಾಡಿದೆ ನೀನು ಮುದ್ದು ಮುದ್ದು ಚಕೋರ ನೀನು
ಸದಾ ನಿನ್ನ ನಂಬಿರುವ ಭಕ್ತರಿಗೆ ಬೆಳಕಾಗಿರು ನೀನು.
ನನ್ನೆಲ್ಲಾ ವೈಕ್ಯೂ ಬಳಗದ ಆತ್ಮೀಯರೆಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಸಿಹಿ ಶುಭಾಶಯಗಳು ಹಾಗೂ ಆ ಶ್ರೀ ಕೃಷ್ಣನು ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಬೇಡುವೆ.❣️💐💐🙏🏻💐💐❣️
-❣️..ಸವಿತಾ(ಸವಿಸತಿ)..❣️
-
ಗೋಪಿಕಾ ಸ್ತ್ರೀಯರಿಗೇನು
ಲಕ್ಷಾಂತರ ಜನ ಸಿಗ್ತಾರೆ....
ಆದ್ರೆ, ಈ ರಾಧೆಯ ಮನಸಲ್ಲಿ
ಇರೋದು ನೀನು ಮಾತ್ರ ಕೃಷ್ಣ,
ನಿನ್ನ ಪ್ರೀತಿ ಸಿಕ್ಕರೂ, ಸಿಗದಿದ್ದರೂ
ಉಸಿರಿರೋವರೆಗೂ.....
ಉಸಿರ ಕೊನೆವರೆಗೂ....-
ಕನಸುಗಳ ಲತಾಕುಂಜದಲಿ
ಬಯಕೆಗಳ ತೋರಣ
ಹೃದಯದ ಭಾವನೆಗಳ
ಶೃಂಗರಿಸಿಹುದು ತನುಮನ
ಮಧುರ ಪ್ರೀತಿಯ ತಟದಲ್ಲಿ
ನಮ್ಮಿಬ್ಬರ ಸಮಾಗಮ
ಹಿಂದಿರುವ ದಾರಿಗೂ
ಮುಂದಿರುವ ಬಾಳಿಗೂ
ನೀನೇ ಎಂದಿಹುದು ನಂದನ
ಬಾಳ ಜೋಕಾಲಿಗೆ
ಜೊತೆಯಾಗಿ ಈ ಕ್ಷಣ
ಹೃದಯದ ಗೋಪುರದಲಿ
ನೆಲೆಸಿರುವ ಗೋಪಾಲನ
ಹೃದ್ಯವಾಗಿ ಆಲಂಗಿಸಿದೆ ಮನ
✍Thilaka kulal
-
ಯಮುನೆಯ ತೀರದಲ್ಲೇ
ನಡೆದಿತ್ತು ಅವರ ವಿವಾಹ..
ಉಸಿರುಸಿರ ಭಾವದಲಿ ,
ಮೌನದ ಭಾಷೆಯಲಿ ,
ಕಂಗಳ ನೋಟದಲಿ ,
ಕೋಪದ ಸಿಡಿಮಿಡಿಯಲೂ
ಒಂದಾಗಿತ್ತು ಮನಸ್ಸು
ಪ್ರೇಮದ ಪರಿಯಲಿ..
ದೂರ ಸರಿದು ಮತ್ತೆಷ್ಟೋ
ವಿವಾಹಗಳು ಮಾಧವನ
ಮನವನ್ನಾವರಿಸಿದ್ದರೂ ಅವನು
ಮಾತ್ರ ಹಾಗೆ ಉಳಿದಿದ್ದ
' ರಾಧಾಕೃಷ್ಣ ' ನಾಗಿ..-