ಕನಸೆಲ್ಲವೂ ಸಾಕಾರವಾಗುವ ಕಾಲ,
ಅವಕಾಶಗಳೇ ತುಂಬಿಹ ಗುಚ್ಛ.
ಭವಿಷ್ಯವನು ರೂಪಿಸುವ ಪಾಠ ಕಲಿಸಿದ ಕಾಲ,
ನೋವು ನಲಿವುಗಳ ಮಿಶ್ರಣ.-
ಗಂಡು ಮಕ್ಕಳ shop ಮುಂದೆ ಹೆಣ್ಮಕ್ಕಳು ಕ್ಯೂ ನಿಂತಾಗಲೇ ಸಮಾನತೆ ಬಂತು... ಅಂತಾನೂ ತಿಳಿಸಿಕೊಟ್ಟು ಬಿಡ್ತು....🙄
-
ನನ್ನ ಪ್ರಕಾರ ನಂಬಿಕೆ ಮತ್ತು ಪ್ರೇಮ,
ಕಾಲ ಹೇಗೇ ಓಡಲಿ,
ಕಾಲ ಎಂತದ್ದೆ ಇರಲಿ,
ನಂಬಿಕೆ ಮತ್ತು ಪ್ರೇಮ ಸ್ಥಿರವಾಗಿದ್ದರೆ,
ಎಲ್ಲವನ್ನೂ ಜಯಿಸಬಹುದು.-
ತಂಕಾ...
ಬದುಕು 'ಬೇಡ'
ಎನಿಸಿದ ಕೊನೆಯ
ಗಳಿಗೆಯಲ್ಲಿ
'ಬೇಕು' ಎನಿಸುತ್ತದೆ,
'ಕಾಲ' ಮಿಂಚಿರುತ್ತದೆ.-
ಕಾಲಕ್ಕೂ ಸ್ವಲ್ಪ ಕಾಲಾವಕಾಶ ಕೊಡ್ಬೇಕು.
ಯಾಕಂದ್ರೆ ಕಾಲ ಬಂದಾಗ ಕಾಲನೇ ಬದಲಾಗಬಹುದು,
ಅಥವಾ
ಕಾಲ ಬಂದಾಗ ಕಾಲವನ್ನೇ ಬದಲಾಗಿಸಬಹುದು..!-
ಈ IPL ಅಂದ್ರೇನೇ ಏನು ಅಂತ ಗೊತ್ತಿರಲಿಲ್ಲ.
ಇವಾಗ ದುಡ್ ಮಾಡ್ಬೇಕು ಅಂತ ಬೆಟ್ಟಿಂಗ್ ಮಾಡೋಕ್ ಹೋದ್ರೆ,
ಬಡ್ಡಿ ಮಗಂದ್ ಸಾಲ ಮಾಡಿ ಆದ್ರೂ ಬೆಟ್ಟಿಂಗ್ ಮಾಡ್ಬೇಕು ಅನ್ಸತ್ತೆ,
ದೇವ್ರಾಣೆಗೂ ಹೇಳ್ತೀನಿ ಹೆಂಡಾನ ಬೇಕಾದ್ರು ಬಿಡಬಹುದು,
ಆದ್ರೆ ಈ ಬೆಟ್ಟಿಂಗ್ ಸಹವಾಸ ಮಾತ್ರ ಬಿಡೋಕಾಗಲ್ಲ ಮಾರಾಯ್ರೆ,
-
ಗಾಯವ ಇನ್ನೂ ಕೆದಕಿದಷ್ಟು
ಹುಣ್ಣುಗಳು, ಕೀವು ತುಂಬಿ
ಕಣ್ಣಿಗೆ ಕಣ್ಣಾಗಿ ಹೂತಿಹುದು!
ಕೆದಕಬಾರದು, ನೆನೆಯಬಾರದು
ಮುಲಾಮಿಗೆ ತಡಕಾಡದೆ, ಕಾಲಕ್ಕೆ
ಬಿಟ್ಟುಬಿಡು ಮರೆವಿನ ಕಣವಿಹುದು!-
ಯಾರನ್ನು ಕಡೆಗಣಿಸಿಬೇಡಿ
ಏಕೆಂದರೆ ಕಾಲ ಮತ್ತು ಜನರು
ಯಾವಾಗ , ಹೇಗೆ ಬದಲಾಗುತ್ತಾರೆ
ಎಂದು ಹೇಳುವುದಕ್ಕೆ ಆಗುವುದಿಲ್ಲ..!!-