QUOTES ON #ಕರ್ತವ್ಯ

#ಕರ್ತವ್ಯ quotes

Trending | Latest

ಸಾಹಿತ್ಯ....
ಪದಗಳ ಆಡಂಬರವಲ್ಲ
ಹರಟೆಯ ಜಗಲಿ ಕಟ್ಟೆಯಲ್ಲ
ಹೊತ್ತು ಕಳೆಯುವ ಸಾಧನವಲ್ಲ
ಯಾರನ್ನೋ ಮೆಚ್ಚಿಸುವ ವಸ್ತುವಲ್ಲ
ಇನ್ನ್ಯಾರನ್ನೋ ತಿವಿಯುವ ಈಟಿಯಲ್ಲ
ಮನಸ್ಸನ್ನು ಬೆಸೆಯುವ, ಉಲ್ಲಾಸಗೊಳಿಸುವ
ಪಾದರಸವದು...!!

-


8 NOV 2021 AT 15:48

ನಾವು ಮಾಡುವ ಕರ್ತವ್ಯವು ನಮ್ಮ
ಆಸಕ್ತಿಗಿಂತಲೂ ಮಿಗಿಲಾದಾಗ
ಬದುಕು ಸಾರ್ಥಕತೆಯತ್ತ ಹೊರಳುತ್ತದೆ.

-


16 JAN 2020 AT 15:57

ಕಸಾಯಿಖಾನೆಯ ಎದುರು
ನಿಂತ ತಾಯಿಯು ತನ್ನ ಭವಿಷ್ಯವ
ನೆನೆಯುತ್ತಲೇ ವರ್ತಮಾನದ ಕರ್ತವ್ಯವ
ಚಾಚೂ ತಪ್ಪದೇ ಪಾಲಿಸಿತು!!

-


11 MAY 2020 AT 14:02

💐💐ಮಾತಪಿತೃ💐💐
ನಾ ಕಂಡಂತ ಅನುಭವದ ಸಾಲುಗಳು
👇

-



ಪ್ರೀತಿಸುವವರ ನಿರಾಕರಣೆಯ
ಮಾಡದಿರು ಯಾದಿಯಲ್ಲಿ
ನನ್ನ ಹೆಸರೇ ಮೊದಲನೆಯದಿದೆ..

-


30 APR 2020 AT 22:32

ಕರ್ತವ್ಯ ಮುಗಿದ
ಮೇಲೆ ಸಂಬಳ
ಕೊಡಬೇಕು

ಸಂಬಳ‌ ಕೊಡದೆ
ಕರ್ತವ್ಯದ ಬಗ್ಗೆ
ಮಾತನಾಡುವರಿಗೆ
ಏನು ಎನ್ನಬೇಕು?

ಹಂಗ ದುಡಿತಿನಿ
ಅಂದರ ನಗತಾನ
ಸಂಬಳ ಕೊಡು
ಅಂದರ ಅಳತಾನ

-


1 MAY 2020 AT 19:26

ಪ್ರತಿಯೊಬ್ಬರು ತಮ್ಮ
ಕರ್ಮಗಳಿಗನುಸರಿಸಿ
ಸಾಗುವರು..

ಜೀವನ ನಾಟಕಕೆ
ತೆರೆ ಎಳೆದು
ಹೋಗುವರು...
ನಾಕಕೋ..ನರಕಕೋ..!

-


12 JUL 2021 AT 7:58

ಗಾಡಿ ಮೇಲೆ ಡ್ಯಾಡ್ ಗಿಪ್ಟ್ ಅಂತ ಹಾಕ್ಸ್ಕೊಂಡು
ಓಡಾಡೋರು ತುಂಬ ಜನ ಸಿಗ್ತಾರೆ
ಡ್ಯಾಡ್ಗೆ ಗಾಡಿನ ಗಿಫ್ಟ್ ಮಾಡಿ ಓಡಾಡಿಸೋರು
ಕೆಲವರ ಮನಸಲ್ಲಿ ಉಳಿತಾರೆ

-


22 MAR 2020 AT 7:23

ದಿನದ ಅಂದಕ್ಕೊಂದು ಚಂದದ ಮಾತು !

22.03.2020

ಏನಾದರೂ ಆದರೆಂಬ ಭಯವೂ ಬೇಡ, ಏನೂ ಆಗದೆಂಬ ಉಡಾಫೆಯೂ ಬೇಡ !
ಕೇವಲ ನಮ್ಮ ಮನೆಯಲ್ಲಿ ಇರುವ ಮೂಲಕ ನಮ್ಮ,ನಮ್ಮವರ, ಆರೋಗ್ಯವನ್ನು ಕಾಯ್ದುಕೊಳ್ಳಬಹುದಾಗಿದೆ !!
ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಮುಖ್ಯವಾದದ್ದು !! ನಮ್ಮ ಕಾಳಜಿ, ನಮ್ಮ ಕರ್ತವ್ಯ .

-


1 MAY 2021 AT 13:57

ಮನ್ಯಾಗೂ ದುಡುದು ಹೊರಗೂ ದುಡಿದುಕೊಂಡ ಬರೋ ಹೆಣ್ಣು ಮಕ್ಕಳಿಗೆ Happy Labour's Day.😊

-