ನೂಲೆಳೆಯಲಿ ನೂರಾರು
ಭಾವಗಳನು ಹೊಸೆದು,
ಅಕ್ಕರೆ, ಮಮತೆಯ ಸೂತ್ರದಲಿ
ರಕ್ಷಣೆಯ ಹೊಣೆನು ಬೆಸೆದು,
ಸೋದರಬಂಧವನು ಮತ್ತಷ್ಟು
ಬಿಗಿಯಾಗಿಸುವ ರಕ್ಷಾಬಂಧನದ
ಶುಭಾಶಯಗಳು ತಮ್ಮಾ....
🥰💓🎉👑💖🥰🥰-
ಬರಿದಾದ ಮಸ್ತಕದಲಿ
ಅರಿವು ತುಂಬಿದವರು ನೀವು ll
ಬದುಕಲು ಸಾವಿರ ಮಾರ್ಗಗಳಿದ್ದರೂ
ಸನ್ಮಾರ್ಗವ ತೋರಿದವರು ನೀವು ll
ನಿಚ್ಚಳದ ಬದುಕಿಗೆ
ನಂದಾದೀಪವಾದವರು ನೀವು ll
ತ್ರಿಮೂರ್ತಿ ಸ್ವರೂಪಿಗಳಾದ
ಅರಿವಿನ ಮೂಲ ನೀವು ll
ಪೂಜನೀಯ ಗುರು-ಗುರುಮಾತೆಯರಿಗೆ ನಿಮ್ಮ ಶಿಷ್ಯೆಯ
ಕಡೆಯಿಂದ ಹೃತ್ಪೂರ್ವಕ ಗುರು ನಮನಗಳು
🌹🙏🙏🙏🙏🙏🙏🙏🙏🌹-
ಬೇಡಿಗೆ ಬಂಧಿಯಾದಳು
ಬಿಡುಗಡೆಯ ನೇಮದಲಿ,
ಅರಮನೆಯ ಬಂಧನದ
ಬಿಗಿತದಲಿ ನುಲುಗಿಹಳು...
ಕನಸುಗಳ ಸಮಾಧಿಯ
ಮೇಲೆ ಕುಳಿತು,
ಮೇಲ್ನೋಟಕ್ಕೆ ನಕ್ಕು
ಒಳಗೊಳಗೇ ಅಳುವಳು...
ಇತರರ ತಾಳಕ್ಕೆ ಸಿಲುಕಿ
ಗೊಂಬೆಯಾದವಳು...
ತಪ್ಪು ಯಾರದ್ದು...?
ಸ್ತ್ರೀಯ ಸಹನಾಗುಣದ್ದೋ..
ದೌರ್ಜನ್ಯದ ಸಮಾಜದ್ದೋ..?!-
ಕಂಬನಿ ಒರೆಸುವ ಕೈಯಾಗಿ
ಬಿದ್ದವರೆಬಿಸುವ ಬೆರಳಾಗಿ
ಸೋತವರಿಗೆ ಹೆಗಲಾಗಿ
-
ಸ್ವಾತಂತ್ರ್ಯ ಯೋಧರ ಕುಟುಂಬದಲ್ಲಿ ಜನಿಸಿ
ದೇಶಭಕ್ತಿಯನು ಉಸಿರಾಗಿಸಿಕೊಂಡು
ಬಡತನದ ಬವಣೆಯಲಿ ಬೆಂದು,
ಜೀವದಗುಳಿಗಾಗಿ ದುಡಿದರೂ,
ಹೃದಯ ಸಿರಿವಂತಿಕೆಯ ಸಾಗರವಾಗಿಹರು.
ನಡೆನುಡಿಯಲಿ ಗುರು ಭಕ್ತಿ ಹೊಂದಿ
ಸಂಸ್ಕೃತಿ ಸಂಸ್ಕಾರಗಳ ಪಾಲಿಸಿದರು.
ಭಾರತೀಯರ ಬಿಡುಗಡೆಯ ಬಯಸಿ
ಬಾಲ್ಯವನು ಬಂಧನದಲಿ ಕಳೆದಿಹರು.
ಕಾಂತಿ ನಯನಗಳಲಿ ಕ್ರೋಧವನುರಿಸಿ,
ಬ್ರಿಟಿಷರ ಪಾಲಿಗೆ ಬೆಂಕಿಯಾದರು.
ವಿದೇಶಗಳಲಿ ದೇಶದ ಕಂಪನು ಸಾರಿ
ಗುರು ವಾಣಿಯನು ಸತ್ಯವಾಗಿಸಿಹರು.
ಗಾಂಧಿ ಗ್ರಾಮೀಣ ಗುರುಕುಲ ನಿರ್ಮಾತೃರಾಗಿ,
ಗ್ರಾಮೀಣ ಪ್ರತಿಭೆಗಳಿಗೆ ದಾರಿದೀಪವಾದರು.
ಪ್ರೌಢ-ಪದವಿಪೂರ್ವ ಕಾಲೇಜು ಕಟ್ಟಿಸಿ,
ಬಡ ಮಕ್ಕಳ ಶಿಕ್ಷಣಕೆ ಗುರುಮಾತೆಯಾದರು.
ಸಮಾಜ ಸೇವೆಯಲಿ ತೊಡಗಿಕೊಂಡು
ಹೊಸರಿತ್ತಿಯ "ಮದರ್ ತೆರೇಸಾ"ರಾಗಿ
ಹಲವಾರು ಗೌರವ, ಪ್ರಶಸ್ತಿ,
ಸಮ್ಮಾನಗಳಿಗೆ ಭಾಜನರಾದರು.
ಅವರೇ ನಮ್ಮ ಏಲಕ್ಕಿ ಕಂಪಿನ ನಾಡೆಂದೇ
ಹೆಸರುವಾಸಿಯಾದ ಹಾವೇರಿ ಜಿಲ್ಲೆಯ ಹೊಸರಿತ್ತಿ
ಗ್ರಾಮದ ಎಲ್ಲರ ಮನೆ ಮಗಳೆಂದೇ ಪ್ರಸಿದ್ಧಿಯಾದ
ವೀರ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರ್ತಿ ........
ಚೆನ್ನಮ್ಮ ಹಳ್ಳಿಕೇರಿಯವರು...🙏🙏🙏🙏
-✍️ವಿಜಯಲಕ್ಷ್ಮಿ ಕುಲಕರ್ಣಿ
-
ನಿತ್ಯ ಹಸಿರಾಗಿರಲಿ ಜೀವನ ಸುಗ್ಗಿ
ಬೆಲ್ಲದಂತಹ ಸಿಹಿ ಮಾತುಗಳೊಂದಿಗೆ,
ಹಬ್ಬಿರಲಿ ಎಲ್ಲಡೆ ಸಂಕ್ರಾಂತಿಯ ಸಿಹಿ ಸೌರಭ...
ಮಕರ ಸಂಕ್ರಾಂತಿಯ ಶುಭಾಶಯಗಳು
🙏🙏🌾🌾🙏🙏-
ಮನದಾಳದಿ ಬೇರೂರಿದ
ನೋವಿನಾಳ ಎಷ್ಟೆಂದು..!
ಬಿಗಿದ ಕೊರಳಿಗಷ್ಟೇ ಗೊತ್ತು,
ನೋವ ಸಹಿಸಿ ಬಂಧಿಸಿಡುವ
ಕಷ್ಟವೇನೆಂದು..?-
ಭಾರತದ ಮೊಟ್ಟ ಮೊದಲ
ಮಹಿಳಾ ಶಿಕ್ಷಕಿ
ಅಕ್ಷರ ಬೀಜ ಬಿತ್ತಿದ
ಸಂಚಾಲಕಿ,
ಸಮಾಜದ ಏಳಿಗೆಗಾಗಿ ಶ್ರಮಿಸಿದ
ಸ್ತ್ರೀ ಕುಲದ ಶಕ್ತಿ,
ಮಹಿಳೆ ಅಬಲೆಯೆಂಬ ಮೌಢ್ಯಕ್ಕೆ
ನೀಡಿದರು ಸಬಲೆಯಾಗಿ ಮುಕ್ತಿ,
ಅಜ್ಞಾನದ ಕೆಸರಿನಲಿ ಜ್ಞಾನದಾವರೆಯನು
ಅರಳಿಸಿದ ಜ್ಯೋತಿ,
ಅಕ್ಷರದವ್ವಳಾಗಿ ಸಮಾಜೋದ್ಧಾರ
ಮಾಡಿದ ಜ್ಞಾನ ಮೂರ್ತಿ
ಸದಾ ಹಸಿರು ಇವರ ಸಾಧನೆ
ಶಿಕ್ಷಣಲೋಕಕೆ ಸ್ಪೂರ್ತಿ..-
ಹಿಂದಿನ ಅನುಭವದೊಂದಿಗೆ
ನವೀನ ಯೋಜನೆಯ ರೂಪಿಸಿ
ಭರವಸೆಯೊಂದಿಗೆ ಬದುಕಿನಲಿ
ಯಶಸ್ಸು ಹೊಂದೋಣ,
ಕಾಲ ನೀಡುವ ಸಿಹಿಕಹಿಗಳ
ಸಮನಾಗಿ ಸ್ವೀಕರಿಸಿ,
ನವ ಆಶಾಕಿರಣದೊಂದಿಗೆ
ಹೊಸ ವರ್ಷವನ್ನು ಸ್ವಾಗತಿಸೋಣ...
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
💐🙏🙏🙏🙏🙏💐-
1. ಕರೋನದಿಂದ ಗೆದ್ದುಬಂದಿದ್ದು😃
2. ಅಪ್ಪು ಸರ್.....😢
3. ಬಹಳ ದಿನಗಳಿಂದ ಬಯಸಿದ ವರ್ಗಾವಣೆ🤗-