ಪರಕೀಯ ಭಾಷೆಯ ಬಳಕೆ ತಪ್ಪಲ್ಲ,
ಪರಕೀಯ ವೇಷ ಭೂಷಣ ಅಳವಡಿಕೆಯೂ ಅಪರಾಧವಲ್ಲ,
ನಮ್ಮ ತನವನ್ನು ತುಳಿದು ದಾಸರಾಗುವುದು ಬೇಡ,
ನಮ್ಮ ಸಂಸ್ಕೃತಿಗೆ ಸಂಚಕಾರವಾಗುವ ಸೇವೆ ಬೇಡ,
ದೇಶದ ವಿಭಿನ್ನ ಭಾಷೆಗಳಿಗೆ ಗೌರವ ಸಲ್ಲಬೇಕು,
ನಮ್ಮ ಮಾತೃಭಾಷೆಯ ಬಗ್ಗೆ ಮೊದಲು ನಮಗೆ ಪ್ರೇಮ ಮತ್ತು ಗೌರವವಿದ್ದರೆ ಸಾಕು,
ದಬ್ಬಾಳಿಕೆಯಿಂದ ಧ್ವಜ ಹಾರಿಸುವ ಅವಶ್ಯಕತೆಯಿಲ್ಲ,
ನಮ್ಮ ಕನ್ನಡ ಧರ್ಮದ ಬೇರು ನಮ್ಮಲ್ಲಿ ಗಟ್ಟಿಯಾದ್ದರೆ ಸಾಕಲ್ಲ,
ಬೇರೆಯವರಿಗೆ ಕೈತೋರುವ ಮುನ್ನ
ನಾವು ನಮ್ಮತನವನ್ನ ಎಷ್ಟು ಮೆರೆಸುತ್ತಿದ್ದೇವೆಂಬ ಅರಿವು ಇರಬೇಕು,
ಮೊದಲು ನಾವು ಬದುಕುವ ಮತ್ತು ಬಳಸುವ ರೀತಿ ಯೋಚನೆಯಲ್ಲಿರಬೇಕು.
"ಕನ್ನಡ ನವೆಂಬರ ೧ ಕ್ಕೆ ಮಾತ್ರ ಬಳಕೆಯಾಗಬಾರದು"
" ಅವಶ್ಯಕತೆಯಿದ್ದಾಗ ಮಾತ್ರ ಬಳಸಲು ಕನ್ನಡ ವಸ್ತುವಂತೂ ಅಲ್ಲ ಇದು ನೆನಪಿನಲ್ಲಿರಲಿ ".-
ಜಯ ಭಾರತ ಜನನಿಯ ತನುಜಾತೆ,
ಜೀವನಕ್ಕೆ ಆಧಾರ ಕನ್ನಡ ಮಾತೇ,
ಕೇಳಲು ಬಲು ಚೆಂದ ನಮ್ಮ ನಾಡ ಗೀತೆ,
ಎಷ್ಟೇ ಮರುಜನ್ಮವಾದರೂ ಹುಟ್ಟುವೆ ಕನ್ನಡ ಮಣ್ಣಿನಲ್ಲೇ ಮತ್ತೆ,
ಅಷ್ಟೊಂದು ಆಳವಾಗಿ ಹೊಂದಿಕೊಂಡಿದೆ ಈ ನಮ್ಮ ಸಂಸ್ಕೃತಿ ನಮ್ಮ ಜೊತೆ,
ಕೃಷ್ಣ,ತುಂಗಭದ್ರಾ, ಕಾವೇರಿ,ಗೋದಾವರಿ
ಹಲವಾರು ನದಿಗಳ ಹರಿವು ನೀಡಿದೆ ನಮಗೊಂದು ಪವಿತ್ರತೆ,
ಕನ್ನಡ ಭಾಷೆಯಿಂದ ಹುಟ್ಟುವುದು ಪರಿವರ್ತನೆ ಎನ್ನುವಂತೆ,
ನಾವು ಕನ್ನಡಿಗರು ಬೆಳಸಿಕೊಂಡು ಹೋಗೋಣಾ
ನಮ್ಮ ಕನ್ನಡತನವನ್ನು ಧಕ್ಕೆ ಉಂಟಾಗದಂತೆ.
"ನಿನ್ನ ಋಣದ ಭಾರ ಸದಾ ಹೀಗೇ ಇರಲಿ, ಈ ಸ್ಮರಣೆಯಿಂದ ಮತ್ತೆ ಮತ್ತೆ ಹುಟ್ಟಿಬರುವಂತಾಗಲಿ ನಿನ್ನ ಮಡಿಲಲ್ಲೇ"
"ಕನ್ನಡ ಕಣ ಕಣದಲ್ಲೂ ಅಮರವಾಗಿರಲಿ".-
ಕನ್ನಡ ಭಾಷೆಯೇ ಬಲು ಚೆಂದ,
ಇಲ್ಲಿಯ ಜನರ ಮನಸ್ಸೇ ಶ್ರೀ ಗಂಧ
ಕನ್ನಡ ನಾಡಿನ ಪ್ರಕೃತಿಯೇ ಆನಂದ
ಈ ನಾಡಿನಲ್ಲಿ ಜನಿಸಿದ ನಾನೇ ನಿಮ್ಮಯ ದಯಾನಂದ.,-
ಕನ್ನಡ ಭಾಷೆಯದೊ ಬಲು
ಅಂದ
ಮನಸೋಲಿಸುವುದು ಚಂದನದ
ಸುಗಂಧ
ಮಲೆನಾಡ ನೋಡಿದರಂತು ಆನಂದವೋ
ಆನಂದ
ಇಲ್ಲಿನ ಸಿರಿ ವೈಭೋಗ ನೋಡಲು ಆ ಚಂದ್ರನೇ
ಬಂದ
ನಮ್ಮ ನಾಡಿದು ವಿವಿಧ ರೀತಿಯ ಸಂಸ್ಕೃತಿಗಳ
ಪ್ರತಿಬಿಂಬ
ಇಲ್ಲಿ ಹುಟ್ಟಲು ಇರಬೇಕು ಅದೆಷ್ಟೋ ಜನ್ಮಗಳ
ಋಣಾನುಬಂಧ-
ಕನ್ನಡ ನುಡಿಯೇ ಬಲು ಚಂದ
ನಾಡಿನೊಳಗೆ ನಾಡು
ಚೆಲುವು ಕನ್ನಡನಾಡು
ಭೂಮಿತಾಯಿ ಮುಡಿದು
ನಿಂತಾಳೆ ಬಾಸಿಂಗ್ ಜೋಡು
ನಮ್ಮ ತಾಯಿ ಕನ್ನಡ
ನಮ್ಮ ರಕ್ತ ಕನ್ನಡ
ನಮ್ಮ ಪ್ರಾಣ ಕನ್ನಡ
ನಮ್ಮ ಶಿಕ್ಷಣ ಕನ್ನಡ
ನಮ್ಮ ಉಸಿರು ಕನ್ನಡ
ನಮ್ಮನಾಡು ಕನ್ನಡ ಎಲ್ಲವೂ
ಎಷ್ಟೊಂದು ಅಂದ-ಚೆಂದವೋ
ಕರುನಾಡೆ ಒಂದು ವಿಸ್ಮಯ ಜಗತ್ತು.-
ಕನ್ನಡ ಭಾಷೆ ಬಲು ಚಂದ
ಅಂದ ಚಂದಗಳ ಬಾಂಧವ್ಯದ ಬಂದ
ಎಲ್ಲೆಲ್ಲೂ ಸುತ್ತುವರೆದಿದೆ
ಅನ್ಯ ಬಾಷೆಗಳ ದಿಗ್ಬಂಧ.
ಮಮ್ಮಿ ಅನ್ನೊ ಬದಲು ಅವ್ವಾ, ಅಮ್ಮ
ಎಂದಾಗ ಎಂತಹದೋ ಆ ಆನಂದಾ,!
ಜೀವ ಇರುವುದರೊಳಗಾಗಿ
ಒಮ್ಯಾರ ಹೀರು, ಬೇಂದ್ರೆ, ಕಾರಂತ,
ಆನಂದಕಂದರ ಕಾವ್ಯಗಳ ಸವಿಜೇನಿನ
ರಸದ ಸುಗಂಧ. ಆಹಾ ಎಂತಾ ಚಂದ.
-
ಕನ್ನಡ ನುಡಿಯೇ ಬಲುಚಂದ
ಕನ್ನಡ ಬೀಡು ಬಲು ಅಂದ
ಕನ್ನಡಿಗರ ಪ್ರೀತಿ, ಸ್ನೇಹ ಚಂದ
ಕನ್ನಡಿಗರ ಮನಸ್ಸು ಶ್ರೀಗಂಧ
ಕನ್ನಡ ಮಣ್ಣೇ ಒಲವಿನ ಬಂಧ
ಕನ್ನಡ ಭಾಷೆಯೇ ಸವಿ ಮಕರಂದ.
-
ಸೋಲಿನ ಜೊತೆ
ಸಾವು ಬಂದಿತ್ತು
ಸಾವನ್ನೆ ಸೋಲಿಸಿ ಗೆದ್ದಿರುವೆ
ಇನ್ನೇನಿದ್ದರು ಸಾಧನೆಯ
ಗೆಲ್ಲುವುದು ಬಾಕಿ ಇದೆ-
ಕನ್ನಡ ನಾಡನ್ನು ಬಣ್ಣಿಸಲೀಕೆ ಆನಂದವೋ ಆನಂದ..
ದಿನೇದಿನೇ ಉತ್ತುಂಗಕ್ಕೇರುತಿರುವ ಶ್ರೀಗಂಧದ ಬೀಡು ಚಂದವೋ ಚಂದ
ಅನ್ಯ ಭಾಷಿಕರನ್ನು ತನ್ನೆಡೆಗೆ ಮಾಡಿಕೊಳ್ಳುವ ಅನುಬಂಧ
ನಾ ಎಂದೆಂದಿಗೂ ಭುವನೇಶ್ವರಿ ಮಡಿಲಿನ ಕಂದ
-
ಸವಿಗನ್ನಡ ನುಡಿಯು ಇನ್ನೂ ಚಂದ
ಕನ್ನಡಿಗರ ಸ್ನೇಹ ಸವಿಜೇನ ಮಕರಂದ
ಕನ್ನಡದ ಹೆಣ್ಣು ಕಸ್ತೂರಿ ಕಂಪು ಶ್ರೀಗಂಧ
ಕನ್ನಡ ನಾಡಲ್ಲಿ ಹುಟ್ಟೋದೇ ಮಹಾದಾನಂದ
-