ಸೋಲುಗಳ ಹೊಡೆತ,
ಅಪಮಾನ ನಿಂದನೆಗಳ ಹೊಡೆತ,
ದೇಹದ ಹೊಡೆತಕ್ಕಿಂತ ಮನಸಿಗೆ ಹೊಡೆತ,
ಇದರ ಜೊತೆಗೆ,
ಬಡತನ, ಸಾಲದ ಹೊಡೆತ ಬಿದ್ದಾಗಲೇ
ಮನುಷ್ಯ ಪರಿಪೂರ್ಣವಾಗುವುದು.-
ಶ್ರೀವಿನಾಯಕ ನನ್ನ ಸ್ವಾಮಿ
ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆ
ಹೊಸಕೋಟೆ ತಾಲ್ಲೂಕಿನ ... read more
ಪ್ರಪಂಚದ ಸಾವಿರಾರು ಭಾಷೆಗಳಲ್ಲಿ 29ನೇ ಸ್ಥಾನ ಪಡೆದ ನಮ್ಮ ಕನ್ನಡ ಭಾಷೆಯ ಘಮಲು ಅಮಲು
-
ಧಗ ಧಗ ಉರಿಯುವ ಬೆಂಕಿಯೇ
ಹೆಚ್ಚು ಹೊತ್ತು ಇರುವುದಿಲ್ಲ
ಅಂದ ಮೇಲೆ
ನಿಮ್ಮನ್ನು ನೋಡಿ ಉರಿದುಕೊಳ್ಳುವವರು
ಎಷ್ಟು ಮಾತ್ರ ಹೇಳಿ
ಮುಂದಿಟ್ಟ ಹೆಜ್ಜೆ ಹಿಂದಿಡಬೇಡಿ
ಆ ಹೆಜ್ಜೆ ಇತಿಹಾಸನೇ ತಿರುವಿ ಹಾಕಬಹುದು
-
ಕಳೆದು ಹೋದವರನ್ನು
ಹೇಗೋ? ಒಮ್ಮೆ ಹುಡುಕಿ ಬಿಡಬಹುದು.
ಆದರೆ,
ಬದಲಾದವರನ್ನು
ಸನಿಹವಿದ್ದರೂ ಹುಡುಕುವುದು
ತುಂಬಾ ತುಂಬಾ ಕಷ್ಟ-
ನಾವು ಆಡುವ ಮಾತು
ಮಾಡುವ ಕೆಲಸ
ನೋಡುವ ನೋಟ
ನಡೆಯುವ ನಡೆ
ನಮ್ಮ ಅಂತರಂಗ ಒಪ್ಪಿದರೆ ಸಾಕು,
ಬೇರೆಯವರು ಕೊಡುವ "ಪ್ರಮಾಣಪತ್ರ" ವಲ್ಲ-
ಸಾವು ಸಹ ಸೋಲುವ ಸುದೈವಿ ವ್ಯಕ್ತಿತ್ವವುಳ್ಳವರು, ಇನ್ನೇನು ಸೋತರು ಎಂದಾಗ ಗೆದ್ದು ಬಂದವರು, ಹೆಚ್ಚಾಗಿ ಭಗವಂತನ ಕೃಪೆ ಇರುವವರು
-
ಬೆಳೆಯುವವರ ನೋಡಿ
ಖುಷಿಯ ಪಡಬೇಕು
ಅವರ ಕೂಡಿ ನಲಿಯಬೇಕು
ನೋಡಿ ಹೃದಯದಿ ಹರಸಬೇಕು
ಅಸೂಯೆ ಎಂಬ ರೋಗವ ಬದಿಗಿಟ್ಟು
ಮಾಡುವ ಕೆಲಸದಲಿ, ನಿಷ್ಠೆ, ಪ್ರಾಮಾಣಿಕತೆಯ ಇಟ್ಟು
ನಡೆದಾಗಲೇ
ನಮ್ಮ ಬದುಕಲ್ಲು ಕಾಣೋದು ಹೊಸ ಬೆಳಕು-
ಮರೆತು ಬಿಡು
ನಿನ್ನ ಬಳಸಿಕೊಂಡವರ
ಮರೆಯದಿರೆಂದಿಗೂ
ನಿನ್ನ ಬೆಳೆಸಿದವರ
ಆಗಲೇ ಬದುಕು ಸಾರ್ಥಕ
ಇಲ್ಲವೇ ಪ್ರಶ್ನಾರ್ಥಕ-
ಈ ಪ್ರಪಂಚದಲ್ಲಿ
ಸೋಲು ಕಾಣದೇ ಗೆದ್ದವರಿಲ್ಲ,
ಸೋತು ಗೆದ್ದವರೇ ಇಲ್ಲಿ
ಅತಿರಥ ಮಹಾಸಾಧಕರೆಲ್ಲಾ
ಅಪಮಾನ, ಟೀಕೆಗಳು ಬರಲಿ
ನಿಂದನೆ ಅಪನಿಂದನೆಗಳು ಇರಲಿ
ನಡೆಮುಂದೆ ಯಶಸ್ಸು ಸಿಗುವ ತನಕ
ಅಪಮಾನ, ನಿಂದನೆ, ಟೀಕೆಗಳು
ಮಾಡಿದವರೆಲ್ಲಾ ನಿನ್ನ ಕಂಡು
ಚಪ್ಪಾಳೆ ಹೊಡೆಯುವ ತನಕ-
ತನುವಾಗಲಿ, ಮನವಾಗಲಿ ಯಾವುದಾದರೂ ದುರ್ಘಟನೆಯಿಂದ ಪೆಟ್ಟಾದಾಗ ಅನುಭವಿಸುವ ವಿಷಮಸ್ಥಿತಿ
-