ಬಾಹ್ಯ ಜಗದೊಳು ಬಿಡು ಚಿಂತೆ
ಅವರಿವರ ಮಾತು ಅವರವರ ಯೋಗ್ಯತೆಗೆ ತಕ್ಕಂತೆ
ಪ್ರಶ್ನೆ ಹಾಕಿಕೊ ನಿನ್ನಲ್ಲಿ ನೀನು
ಉತ್ತರ ಸಿಗುವುದು, ನೀನಿದ್ದ ಉದ್ದೇಶವೇನು.-
ಇಚ್ಚಿಸಬೇಡ,
ನಿನ್ನ ನೀ ಮೆಚ್ಚು ಮೊದಲು
ನಿನ್ನಿಚ್ಚೆಗೆ ತಕ್ಕಂತೆ
ನಡೆ ಇರಲಿ ಯಾವಾಗಲೂ..! read more
ಮೋಜು ಮಸ್ತಿಗೆ
ನೀ ಕರೆದರಷ್ಟೇ
ನಿನ್ನ ಮೇಲೆ
ಎಲ್ಲರಿಗೂ ಒಲುಮೆ
ನೀ ಹೋಗಿ
ನಿನ್ನ ಕಷ್ಟ ನಷ್ಟ
ಹೇಳಿದರೆ ಕೇಳುವ
ಮನಸ್ಸುಗಳು ಕಡಿಮೆ
ಇದೇ ವಾಸ್ತವದ
ಸ್ನೇಹ ಪ್ರೀತಿಗಳ ಮಹಿಮೆ..!
-
ಬಹಳ ಚಂದವಿತ್ತು
ಆ ಬಾಲ್ಯದ ಹೊತ್ತು
ಸಣ್ಣಪುಟ್ಟ ವಿಷಯಗಳು
ಕೊಡ ಸಂತೋಷದ ಮುತ್ತು
ಈ ಯೌವ್ವನದ ಹೊತ್ತು
ಸಣ್ಣಪುಟ್ಟ ವಿಷಯಗಳಿಗೆ
ಮನಸ್ಥಾಪದ ನಶೆ ಏರುವ ಮತ್ತು
ಪ್ರೇಮ ಕಾಮದ ಕುತ್ತು.
-
ಬೇರೆಯವರ
ಮನಸನ್ನರಿಯಲು
ಮನಶ್ಯಾಸ್ತ್ರದ ಅದ್ಯಯನ
ಯಾಕೆ ಬೇಕು ?
ಸ್ವತಃ ಅವರಾಡುವ
ಸೂಕ್ಷ್ಮದೆರಡು ಮಾತಿನ
ಕಡ್ಡಿಯನ್ನು ಅವರೇ
ಲಟ್ಟನೆ ಮುರಿದರೆ ಸಾಕು
ಮನಶ್ಶಾಸ್ತ್ರವನ್ನೋದು
ಬೆಂಕಿಗೆ ಹಾಕು..!
-
ಹಣದಲಿ ಶ್ರೀಮಂತ
ಗುಣದಲಿ ಯಾಕಿಲ್ಲ
ಮನೆಯಲಿ ಶ್ರೀಮಂತ
ಮನದಲಿ ಯಾಕಿಲ್ಲ
ನೋಟಿನಲಿ ಆಸಕ್ತಿ
ಸಮತೆಯ ನೋಟದಲಿ ಯಾಕಿಲ್ಲ
ಸಂಪಾದಿಸುವ ಕಾತುರ
ಸ್ನೇಹ ಪ್ರೀತಿಯಲಿ ಯಾಕಿಲ್ಲ
ಇಲ್ಲ ಇಲ್ಲ ಯಾಕಿಲ್ಲ?
ಸಂತೋಷವನ್ನು ಹಣದಿಂದ
ಹೆಣೆಯಲಾಗುವುದಿಲ್ಲ
ಅಯ್ಯೋ ಮರುಳೇ
ನಿನಗೇಕಿದು ತಿಳಿಯುತಿಲ್ಲ.
-
ಯಾರು ಹೇಗೆ
ಅನ್ನೋದಕ್ಕಿಂತ
ನೀನು ಹೇಗೆ
ಅನ್ನೋದು ಮುಖ್ಯ
ಯೋಚಿಸುವ
ಚಿಂತೆ ಬೇಡ ಅಲ್ಲಿ
ಕೂತು ಇಲ್ಲಿ ಕೂತು
ಚಿಂತಿಸು ನಿನ್ನಲ್ಲಿ ನೀ ಕೂತು
ನೀ ಹೇಗೆ ಎಂದು ತಿಳಿಯಲು
ಅವರಿವರನ್ಯಾಕೆ ಹುಡುಕುವೆ
ಆತ್ಮಕ್ಕೆ ಸಾಕ್ಷಿಯಾದ
ಆತ್ಮೀಯ ಸಖ ಮನಸ್ಸಿಲ್ಲವೇ.!-
ಕಿವಿಗೆ ಓಲೆ ಕತ್ತಿಗೆ
ಕನಕದ ಮಾಲೆ
ಉಡಲಿಕ್ಕೆ ಬಣ್ಣದ ಡ್ರಸ್ಸು
ಖರ್ಚಿಗೆ ಕಾಸು
ತಿರುಗುವುದಕ್ಕೆ ಬೈಕು
ಬರ್ತಡೇಗೆ ಕೇಕು
ಇವಿಷ್ಟಿದ್ದರೆ ಓಕೆ
ಪ್ರೀತಿಗೆ ಇವಿಷ್ಟೇ ಸಾಕೆ ?
ಒಬ್ಬರನ್ನೊಬ್ಬರು
ಅರಿಯಲು ಇವು ಬೇಕೆ ?
ಪ್ರೀತಿಗೇಕೆ ಆಡಂಬರ
ಮನಸ್ಸಿರಲಿ ಸಹಜ ಸುಂದರ
ಮಾಡದಿರು ಕ್ಷಣಿಕ
ಸುಖಕ್ಕಾಗಿ ಮನ ವಿಕಾರ
ಪ್ರೀತಿ ಪವಿತ್ರವಾದುದು
ತಿಳಿದವಗಷ್ಟೆ ತಿಳಿಯುವುದು!-
ಗೊತ್ತು ಬಲು ಜಟಿಲವಿದು
ಏಕಾಂತದ ಒಂಟಿತನ
ಮರೆತರೇಗೆ
ನೀನು ನಿನ್ನ ತನ
ಹಗುರಾಗಿಸು ಜಡವಾದ ಮನ.
ಪ್ರೀತಿ ಪ್ರೇಮ
ಉಸರವಳ್ಳಿಯ ಹಾಗೆ
ಬಣ್ಣ ಬದಲಾಯಿಸುವವು
ಪ್ರತಿ ಕ್ಷಣ ಕ್ಷಣ
ಯಾವುದರಲ್ಲಿದೆಯೋ
ಅಸಲಿ ಬಣ್ಣ.?
ನೀರೆರಚಿದರೆ ತೊಳೆದು
ಹೋಗುವ ಸುಣ್ಣ.-
ನನ್ನವರು ನನ್ನವರು
ಎಂದು ಬೀಗುವೆ ಏಕೆ
ಒಳಿತಲ್ಲ ನನ್ನವರೆಂಬ
ಅತಿ ನಂಬಿಕೆ
ಅವರಿಗೆ ತನ್ನವರು
ಸಿಗುವವರೆಗಷ್ಟೆ ನಿನ್ನವರು
ಸಿಕ್ಕಿದೊಡನೆ ನೀನ್ಯಾರೊ
ಅವನ್ಯಾರೊ
ಇಲ್ಲಿ ಎಲ್ಲರೂ ಗೆದ್ದೆತ್ತಿನ
ಬಾಲ ಹಿಡಿಯುವ ಬಂಟರು
ಹಾಲೆಂದು ನಂಬಿಸಿ
ವಿಷವನುನಿಸೊ ವಿಷಕಂಠರು
ಹಾಲ್ಯಾವುದು ವಿಷಯಾವುದು
ಎಂದು ಚಿಂತಿಸುವಾಗ
ಸಮಯ ಯಾರ ಸ್ವಂತದ್ದು ಚಿಂತಿಸದಿರು
ಮರುಳೇ ಈ ಧರಣಿ ಹೀಗೆ ಇರುವುದು.!
-
ಪ್ಯಾಶನ್
ಭರತ ಖಂಡದ
ಸಂಸ್ಕೃತಿ
ವಿಕೃತಿಯಡೆಗೆ
ಸಾಗಿತು
ಪ್ಯಾಶನ್ ಹೆಸರಲ್ಲಿ
ತುಂಡುಬಟ್ಟೆಯೇ
ಪೀತಾಂಬರ
ವಾಯಿತು
ತೆಲೆಯ ಮೇಲಿನ
ಸೆರಗು ಜಾರಿ
ಮೊಣಕಾಲ
ಮೇಲೆ ಬಂತು
ಮಂಗಳಕರವಾದ
ಅರಿಶಿಣ ಕುಂಕುಮ
ಹಣೆಯ ಮೇಲೆ
ಇಲ್ಲ ವಾಯಿತು...!
-