QUOTES ON #ಇದು

#ಇದು quotes

Trending | Latest
30 MAY 2020 AT 8:14

!!..Good morning..!!

ಒಂದು ಸಮಯದಲ್ಲಿ ಹೂವಿಗೆ
ಅಹಂಕಾರ ಜಾಸ್ತಿ ಇದ್ದಿತಂತೆ ಮತ್ತು
ಅದು ಯಾವಾಗಲೂ ಬಾಡುತ್ತಿರಲಿಲ್ಲವಂತೆ ಅದಕ್ಕೆ
ಯಾವಾಗಲು ತಾನು ಖುಷಿಯಿಂದ ಇರುವವರ
ಮುಡಿಗೆ ಸೇರಬೇಕು ಮತ್ತು ಒಳ್ಳೆಯ
ಕಾರ್ಯಗಳಿಗೆ ತನ್ನನ್ನ ಉಪಯೋಗಿಸಬೇಕು
ಎಂಬುವುದು ಬಯಕೆಯಾಗಿತ್ತು. ಆದರೆ
ಸಮಯಕಳೆದಂತೆ ಹೂವಿನ ಅಟ್ಟಹಾಸ
ಜಾಸ್ತಿಯಾಗಿತ್ತು ಇದನ್ನು ಅರಿತ ಶಿವನು
ಪ್ರತ್ಯಕ್ಷನಾಗಿ ಹೂವಿಗೆ ಶಾಪವಿಟ್ಟನಂತೆ
ನೀನು ಕೇವಲ ಶುಭಕಾರ್ಯಗಳಿಗಲ್ಲದೆ ಅಶುಭಕ್ಕೂ
ನಿನ್ನ ಬಳಕೆಯಾಗಲೆಂದು ಮತ್ತು ನಿನ್ನ ಚಂದ
ಕೇವಲ ಒಂದು ದಿನಕ್ಕೆ ಸೀಮಿತವಾಗಿರಲೆಂದು.
ಇದರಿಂದ ಹೂವನ್ನು ಸತ್ತಮನೆಯಲ್ಲೂ
ಉಪಯೋಗಿಸಲು ಶುರುಮಾಡಿದರಂತೆ...
ಇದರ ಅರ್ಥ ಅಹಂಕಾರ ಇರುವ
ಯಾವುದೇ ಜೀವಿಗೂ ಉಳಿಗಾಲವಿಲ್ಲ...!!!

-



ಯಜಮಾನರ ಕುಟುಂಬದಲ್ಲಿ ಎಲ್ಲರು ವಿದ್ಯಾವಂತರು
ಕೆಲಸದಲ್ಲಿ ಇರುವವರೇ...
ಆದಾರೆ ಅವರ ಮನೆಕೆಲಸಕ್ಕೆ ಬರುವ
ಲಿಂಗಿಯ ಮಗಳು ಶಾಲೆಗೆ ಹೋಗುತ್ತಾಳೆ ಹರಿದ
ಬಟ್ಟೆಯಲ್ಲಿಯೇ
ಸಂಬಳಕ್ಕಾಗಿ ತಿಂಗಳು ಕಾಯುತ್ತಿದ್ದಾಳೆ...ಮಗಳಿಗೆ
ಬಟ್ಟೆ ಕೊಡಿಸಲು.

-



ಕಣ್ಮರೆಯಾಗಿದ್ದಾನೆ*

ಅದೆಲ್ಲೋ ನಮ್ಮನ್ನು ಆಳುವ ದೊರೆಯಿದ್ದಾನೆ
ದೂರದಿಂದಲೇ ದೀಪವನ್ನು ಬೆಳಗಿಸಿ
ಬಡವರ ದೀಪಗಳನ್ನೆಲ್ಲ ಆರಿಸಿದ್ದಾನೆ
ಭರವಸೆಗಳನಿಟ್ಟು ದೂರದಿಂದಲೇ ಕಣ್ಮರೆಯಾಗಿದ್ದಾನೆ

-



ಪವರ್ ಕಡಿಮೆ ಆಗದೆ ಇರುವ ಪವರ್ ಮ್ಯಾನ್ ಗಳು ನಾವು
ಮಳೆಬರಲಿ ಚಳಿಯಿರಲಿ ಜಗ್ಗದೆ ಕುಗ್ಗದೆ
ಎಲ್ಲವನ್ನು ಬದಿಗಿಟ್ಟು
ಕೆಲಸ ಮಾಡುತ್ತೇವೆ ಮರೆತು ನಮ್ಮ ಮನದಾಳದ ನೋವು

ಅರ್ಧಾಂಗಿನಿ ನಮಗೆ ಕಟಿಂಗ್ ಪ್ಲೇಯರ್
ಮನಸು ಮಾತ್ರ ಯಾವಾಗಲೂ ಫ್ಲವರ್
ಗುಣದಲ್ಲಿ ನಾವು ಟೆಸ್ಟರ್
ಎದುರಿಗೆ ಬಂದರೂ ನೋಡುವುದಿಲ್ಲ ನಾವು ಫಿಗರ್

ಹಾಕೋದು ಹಸಿರು ಖಾಕಿ
ಮಾಡೋದಿಲ್ಲ ನಾವು ಯಾವಾಗಲೂ ಶೊಕಿ
ಆದ್ರೆ ಬಿಡುವುದಿಲ್ಲರೀ ನಾವು ಕಂಪಲ್ಸರಿ ತುಂಬ ಬೇಕ್ರಿ ನಿಮ್ಮ ಮನೆ ಬಾಕಿ
ಹೆಸ್ಕಾಂ ನಿಯಮಗಳಿಗೆ ನಾವು ಯಾವಾಗಲೂ ಬದ್ಧ
ಗ್ರಾಹಕರ ಸಮಸ್ಯೆಗಳಿಗೆ ಯಾವಾಗಲೂ ಸಿದ್ಧ

ಮಾಪಕ ಓದುಗನಿಗೆ ಬೇಕು ಮಾರ್ಕರ್
ಪರೀಕ್ಷೆ ಮಾಡಬೇಡ್ರಿ ನಮ್ಮ ಮೀಟರ್
ನಿಮ್ಮ ಮನೆ ಬಿಲ್ ತುಂಬಿಲ್ಲ ಅಂದ್ರೆ
ಮಾತಡತೈತಿ ನಮ್ಮ ಕಟಿಂಗ್ ಪ್ಲೇಯರ್

ಗ್ರಾಹಕರು ನಮ್ಮುಸಿರು
ಹೆಸ್ಕಾಂ ಕೊಟ್ಟಿದ್ದ ನಮಗೆ ಪವರ್ ಮ್ಯಾನ್ ಎಂದು ಹೆಸರು
ದಿನದ 24 ಗಂಟೆಯೂ ವಿದ್ಯುತ್
ನೀಡಿ ರೈತರ ಮೊಗದಲ್ಲಿ ಮೂಡಿಸುವೆವು ನಗುವಿನ ಹಸಿರು
ಯಾವಾಗಲೂ ಸಿದ್ಧ ಸೇವೆಸಲ್ಲಿಸಲು
ನನ್ನ ಹೃದಯದಲ್ಲಿ ಕೊನೆಗೊಳ್ಳುವವರೆಗೂ ಉಸಿರು
☛✍ಸಿದ್ದರಾಜಗುರು ಎಸ್ ವಡ್ನವರ, ಹೆಸ್ಕಾಂ ಗದಗ ☛✍









-



ರೈಲಿನಲ್ಲಿ ನಮ್ಮ ಕುಟುಂಬ ಸಮೇತ ಮನೆದೇವರ ದರ್ಶನ ಮತ್ತು ಸುತ್ತ ಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಹೋಗುತ್ತಿದ್ದೆವು, ನಮ್ಮ ಹಾಗೆಯೇ ಒಂದು ಕುಟುಂಬ ಜೊತೆಯಲ್ಲಿ ಪ್ರಯಾಣ ಮಾಡುತ್ತಿತ್ತು, ಸ್ವಲ್ಪ ಹೊತ್ತಿಗೆ ಅವರ ಪರಿಚಯವಾಯ್ತು, ನಗೆ, ಹರಟೆ ತಂದಿದ್ದ ತಿಂಡಿ ತಿನಿಸು ವಿನಿಮಯ ಹೀಗೆ ಪ್ರಯಾಣ ಸಾಗಿತ್ತು,ಕಷ್ಟ ಸುಖ ಅಂತ ಆತ್ಮೀಯವಾಗಿ ಮಾತನಾಡುತ್ತಾ ಒಂದೇ ಮನೆಯವರ ಹಾಗೆ ಅನ್ನಿಸಿತ್ತು, ಅವರು ಇಳಿಯುವ ನಿಲ್ದಾಣ ಬಂತು, ಭಾರವಾದ ಮನಸ್ಸಿನಿಂದ ಬೀಳ್ಕೊಟ್ಟೆವು, ಫೋನ್ ನಂಬರ್ ಕೇಳುವ, ಕೊಡುವ ಮನಸ್ಸಿದ್ದರೂ ಪರಸ್ಪರ ಸಂಕೋಚದಿಂದ ಕೇಳದೆ ಸುಮ್ಮನಾಗಿದ್ದೇವು, ಈ ಘಟನೆ ನಡೆದು ಐದಾರು ವರುಷಗಳಾಗಿವೆ, ಆದರೂ ಅವರನ್ನು ಆಗಾಗ ನೆನಪಿಸಿಕೊಂಡು ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಖುಷಿ ಪಡುತ್ತೇವೆ...

-



ದಿನಕ್ಕೆರಡು I AS ಪ್ರಶ್ನೆಗಳು

1)
ಒಂದೇ ದಿನದಲ್ಲಿ 919 ಪುರುಷರೊಂದಿಗೆ ಸೆಕ್ಸ ಮಾಡಿಸಿಕೊಂಡು ಗಿನ್ನಿಸ್
ಬರೆದ ಮಹಿಳೆಯ ಹೆಸರೇನು.....?

2)ಭಾರತದ ಯಾವ ಹಳ್ಳಿಯಲ್ಲಿ
ಹಣಕ್ಕಾಗಿ ತಮ್ಮ ಹೆಂಡತಿಯನ್ನು ಬಾಡಿಗೆಗೆ ಬಿಡುತ್ತಾರೆ..?

-


26 JUL 2019 AT 20:06

ಈ ಪ್ಯಾಟೆ ಮಂದಿ ಗ್ರಾಜುವೇಶನ್ ಅಂತ ಮುಗ್ಸಿ
ಖಾಸಗಿ ಕಂಪ್ನ್ಯಾಗೆ ಚಲೋ ನೌಕ್ರಿ ಹಿಡದ್ರೆ
ಲೈಫ್ ಸೆಟ್ಲು ಆತು ಅಂತಾರೆ😂
ಹೇ ತಗಿರಿ ನಮ್ ಹಳ್ಳಿಕಡೆಗೆ ಹಿಂಗ್ಯಾಲ್ಲ ಇಲ್ರಿ
ಅವ್ನು ಲಗ್ನ ಅದ್ನಾಪ ಅಂದ್ರೆ ಮುಗಿತು ಲೈಫ್ ಸೆಟ್ಲು ಅಂತಾರೆ.

-



ಲಾಕ್ಡೌನ್ ಆದಾಗಿನಿಂದ ಸೋಮ
ಕೆಲಸವಿಲ್ಲದೇ ಹೆಂಡತಿ ಮಾಡಿ
ಹಾಕಿದ್ದನ್ನು ತಿಂದು ತಿಂದು ಒಂದು
ರೌ0ಡ್ ದಪ್ಪಗಾಗಿದ್ದ, ಸತೀಶ 10
ಗಂಟೆಯೊಳಗೆ ತರಕಾರಿ ತರಬೇಕು
ಅನ್ನೋ ಧಾವಂತದಿಂದ ಸೈಕಲ್ ನಲ್ಲಿ
ಹೋಗುತ್ತಿದ್ದ, ಸೋಮ ಅವನನ್ನು
ನೋಡಿ ನಾನೂ ಬರುವೆ ಅಂದ,
ಅದಕ್ಕೆ ಸತೀಶ ಪೋಲೀಸರು ಇರುತ್ತಾರೆ
ಬೇಡ ಅಂದ,ಯಾರು ಇರಲ್ಲ ಇರೋ
ಬರ್ತಿನಿ ಅಂದ, ನೀನು ಈ ನಡುವೆ
ದಪ್ಪಗಾಗಿದ್ದಿಯ ಡಬಲ್ ಹೋಗೋಕೆ
ಆಗಲ್ಲ ಅಂದ, ಏನೋ ಹೀಗಂತಿಯ
ಅಂತ ಹೇಳಿ ನಾನು ಉಲ್ಟಾ ಕುತ್ಕೊತೀನಿ
ಅಂದು ಹೋಗಿ ಕೂತೇ ಬಿಟ್ಟ,
ವಿಧಿಯಿಲ್ಲದೇ ಸತೀಶ ಸೈಕಲ್ ಓಡಿಸಲು
ಶುರು ಮಾಡಿ ಹಾಡು ಹೇಳಲಾರಂಭಿಸಿದ,
ಎಲ್ಲಿದ್ದರೋ ಇಬ್ಬರು ಪೋಲೀಸರು
ಬಂದೆ ಬಿಟ್ಟರು, ಡಬಲ್ ಹೋಗೋಕೆ
ಏನ್ ಜಾಲಿ ರೈಡ್ ಹೋಗುತ್ತಿದ್ದೀರಾ?
ಅಂತ ಲಾಠಿ ಬೀಸಿದರಷ್ಟೇ ಸೈಕಲ್ ಗೇ
ಲಾಠಿ ತಗುಲಿ ಇಬ್ಬರು ಪಕ್ಕದ ಮೋರಿಗೆ
ಸೈಕಲ್ ಸಮೇತ ಉರುಳಿದರು....
ಹಂಗೆ ಆಗಬೇಕು ಅಲ್ವಾ?

-



ಗೆಳತಿ,

"ನನಗೂ ಬರುತ್ತೆ ಬರೆಯಲು ಕವನ
ಬಿಟ್ಟು ಬಾ ಬಿಗುಮಾನ
ನಿನಗೆ ಗೊತ್ತಿಲ್ಲ ನನ್ನ ಸ್ವಾಭಿಮಾನ
ನಿನ್ನ ಮರೆಯುವ ಮುನ್ನ
ಬಂದು ಸೇರು ನನ್ನನ್ನ....

-



ಕೇವಲ ಆನ್ಲೈನೇ ಜೀವನವಲ್ಲ...
ಆನ್ಲೈನ್ ಅಲ್ಲಿ hai,byeಅಂತ ಮೆಸೆಜ್
ಮಾಡೋದೆ love ಅ, ದಯಮಾಡಿ ಆನ್ಲೈನ್
ಜೀವನವನ್ನು ಬಿಟ್ಟುಬಿಡಿ....
ನಿಜವಾದಬದುಕಿನ ಕಡೆ ಗಮನ ಕೊಡಿ.....
ನಾನು ಎಲ್ಲರಿಗು friend ಆಗಿರೋಕೆ ಬಯಸುತ್ತೀನಿ
ಆದರೆ lover ಆಗಿ ಅಲ್ಲ.... ದಯಮಾಡಿ ಆ friendship ಗೆ ಧಕ್ಕೆ ಬರುವ ರೀತಿ ನಡೆದುಕೊಳ್ಳಬೇಡಿ.....
Loveಮಾಡೋ ಬಯಕೆ ನಂಗಿಲ್ಲ
ಆ ವಯಸ್ಸು ನಂದಲ್ಲ...
ಕೇವಲ ಇಟ್ಟ ಗುರಿಯನ್ನು ಸಾಧಿಸುವುದಷ್ಟರ ಮೇಲೆಯೇ ನನ್ನ ಮನಸ್ಸಿದೆ ದಯಮಾಡಿ ಘಾಸಿ ಮಾಡದಿರಿ ನನ್ನ ಮನಸ್ಸಿಗೆ... ವಾಸ್ತವವನ್ನು ಅರಿತು ಬಾಳಿ.......
ಇಂತಿ ನಿಮ್ಮ ಪ್ರೀತಿಯ ಗೆಳತಿ 😊....

-