𝒜𝓂𝒷𝒶𝓇ℯ𝓈𝒽 ☀️   (│█║▌║▌║ AS ║▌║▌║█│)
1.6k Followers · 1.0k Following

read more
Joined 8 January 2019


read more
Joined 8 January 2019

ಶುಭೋದಯ

ಸಂತೋಷವನ್ನು ಬರಿ ಸಂಪಾದನೆಯಿಂದ
ಪಡೆದುಕೊಳ್ಳಲು ಸಾಧ್ಯವಿಲ್ಲ
ಇರುವುದರಲ್ಲಿ ಸಂತೃಪ್ತಿ ಜೀವನ ನಡೆಸುವ
ಜಾಣರೆ ಸಂತೋಷದಿಂದ ಇರಲು ಸಾಧ್ಯ

-



ಜನುಮ ದಿನದಂದು ಜಗವೇ ನಲಿಯಿತು ಇಂದು
ಜನರ ಮನದಲಿ ಮಿಂದು ನಗುತಲಿರು
ಎಂದೆಂದೂ ನಿಲ್ಲದಿರಲಿ ಈ ಆನಂದ
ಮನದಲಿ ಹೊಮ್ಮಲಿ ಸುಗಂಧ ಇರಲಿ
ಸದಾ ಕಾಲ ಪ್ರೀತಿ ಅನುಭಂದ
ಸ್ನೇಹಿತನೆ ಇದ್ಯಾವ ಜನ್ಮದ ಸಂಭಂದ?
ಪ್ರತಿಯೊಂದಕ್ಕೂ ಇದೆ ಋಣಾನುಭಂದ...

ಜನ್ಮ ದಿನದ ಶುಭಾಶಯಗಳು

ಇಂತಿ ನಿನ್ನ ಪ್ರೀತಿಯ ಗೆಳೆಯ,
ಎಸ್. ಅಂಬರೇಶ್ವರ್...







-



ಗುರು ಎಂದರೆ

ಗು–ಗು ಎಂದರೆ ಗುರುತಿಸುವ
ರು–ರು ಎಂದರೆ ರೂಪಿಸುವ

ಶಿಷ್ಯರ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಆಯಾ ಮಾರ್ಗದಲ್ಲಿ ಸಂಚರಿಸುವ ಸುಲಭ ಉಪಾಯಗಳನ್ನು ಜ್ಞಾನವೆಂಬ ಅಸ್ತ್ರದ ಮೂಲಕ
ತಿಳಿಸಿ ಅವರ ಬದುಕನ್ನು ಅವರೇ ರೂಪಿಸುವ ಮಾರ್ಗ ತೋರಿಸುವವನೆ ನಿಜವಾದ ಗುರು

ಅಂತಹ ಎಷ್ಟೋ ಗುರುಗಳು ನನಗೆ ಮಾರ್ಗದರ್ಶನ ಮಾಡಿದ್ದಾರೆ ಅವರಿಗೆಲ್ಲ ಗುರು ಪೂರ್ಣಮೆಯಂದು ನನ್ನ ಶತಕೋಟಿ ನಮನಗಳು 🙏🙏🙏

-



*** ಹುಟ್ಟು ಹಬ್ಬದ ಶುಭಾಶಯಗಳು ಪುಟ್ಟ ***

ಆರ್–ಆರಾಧನೆಯೆ
+
ಆದ್ಯ–ಮೊದಲು

ನಿನ್ನ ನಾಮದಲ್ಲಿದೆ ಆರಾಧನೆ
ಆರಾಧನೆಯಿಂದ ಮೂಡುತಿರಲಿ
ಹೊಸ ಹೊಸ ಆಲೋಚನೆ
ಎಲ್ಲೆಲ್ಲೂ ಕೇಳುವಂತಾಗಲಿ ನಿನ್ನ ಸಾಧನೆ
ಇರಲಿ ಕಲಿಸಿದ ಗುರುಗಳ ಪ್ರೇರಣೆ
ಬೆಳಗುತಿರಲಿ ಸುಖ ಶಾಂತಿ
ಸಂತೋಷದ ಚಿಲುಮೆನಿನ್ನ ಮೇಲಿರಲಿ
ಶ್ರೀ ಗುರು ಕುಮಾರ ಪಂಚಾಕ್ಷರ
ಪುಟ್ಟರಾಜರ ಒಲುಮೆ






-



ಜಗವೆಂಬ ಕೋರ್ಟಿನ ನಿಷ್ಠೆಯ ನ್ಯಾಯಾಧೀಶ

ಸತ್ಕರ್ಮಕ್ಕೆ ಸನ್ಮಾನ ನೀಡುವ
ದುಷ್ಕರ್ಮಕ್ಕೆ ಅವಮಾನ ನೀಡುವ
ಕಷ್ಟಪಡುವವರ ಕಣ್ಣೀರು ಒರೆಸುವ
ತನ್ನನ್ನು ಇಷ್ಟಪಡುವರರಿಗಿಂತ
ನಿಷ್ಟೆಗನುಸಾರವಾಗಿ ನಡೆದವರಿಗೆ
ಸ್ಪಷ್ಟವಾದ ಫಲ ನೀಡುವ
ಶಿಕ್ಷಕರು ಇವರೆ ಜಗ ರಕ್ಷಕರು ಇವರೆ
ನಿಜವಾದ ಅರ್ಥದಲ್ಲಿ ಜಗತ್ತೆಂಬ
ನ್ಯಾಯಾಲಯದ ನ್ಯಾಯಾಧೀಶ
ಹರಿಹರ ಬ್ರಹ್ಮಾದಿ ಮುಕ್ಕೋಟಿ
ದೇವತೆಗಳನ್ನು ಬಿಡದೆ
ಕಾಡಿದ ಸತ್ಯಾನಿಷ್ಟ ಆಂಜನೇಯ
ಸ್ವಾಮಿ ಹೊರತು ಪಡಿಸಿ ಉಳಿದೆಲ್ಲಾ
ಸಕಲ ಚರಾ ಚರ ಜೀವಿಗಳಿಗೆ
ಕರ್ಮಾನುಸಾರ ಫಲ ನೀಡುವ
ಕರ್ಮಾಧಿಪತಿ ಶ್ರೀ ಶ್ರೀ ಶ್ರೀ ಶನಿಮಹಾತ್ಮರ
ಜಯಂತಿಯ ಹಾರ್ದಿಕ ಶುಭಾಶಯಗಳು

-




ಪರೋಪಕಾರ ವಿಲ್ಲದಗುಣ
ನಾಯಿಯ ಹಾಲಿನಂತೆ
ಬರೀ ಸ್ವಾರ್ಥವೇ ತುಂಬಿದ
ಬದುಕು ವ್ಯರ್ಥವಾದಂತೆ
ಧನ್ಯರಾಗದೆ ಧನವು ಲಭಿಸದು
ದಾನ ವಿಲ್ಲದೆ ಧಾನ್ಯ ಸಿಗದು
ದನವಾಗಿ ಹುಟ್ಟಿದರು ಸರಿಯೆ
ದಾನವನಾಗಬೇಡ ಎಂದ ನಮ್ಮ
ಗುರು ಕುಮಾರ ಪಂಚಾಕ್ಷರೇಶ್ವರ

-



ಒಂದು ಅದ್ಭುತವಾದ ಕಥೆ ಪ್ರಸ್ತುತ ನಮ್ಮ ರಾಜಕೀಯ ವ್ಯವಸ್ಥೆ ಪರಿಸರ ನಾಶ ಜನರಲ್ಲಿ ಒಕ್ಕಟ್ಟಿನ ಕೊರತೆ ಜಾತಿವಾದ ಬಡತನ ಅಂದರೆ ಬಡವರು ಬಡವರೇ ಶ್ರೀಮಂತರು ಶ್ರೀಮಂತರೇ ಅಸಮಾನತೆ ಗೂಂಡಾಗಿರಿ ಒಡೆದು ಆಳುವ ನೀತಿ ಜನರ ಮೂರ್ಖ ಮುಗ್ಧತೆ ಮೂಢನಂಬಿಕೆ ಕೆಟ್ಟವರೆ ಒಳ್ಳೆಯವರು ಒಳ್ಳೆಯವರು ಸತ್ತರು ಹಾಗೂ ನಮಗ್ಯಾಕೆ ಬೇಕು ಅನ್ನುವ ಮನಸ್ಥಿತಿ ಸ್ವಾರ್ಥ ಪ್ರಸ್ತುತ ಮಾಧ್ಯಮಗಳ ಹಣೆಬರಹ ಇದಕ್ಕೆಲ್ಲ ಪ್ರಜಾಕೀಯ ಒಳ್ಳೆಯದು ಎಂಬ ಬಗ್ಗೆ ಸ್ಪಷ್ಟ ಸಂದೇಶ ರವಾನೆ ಸೋಷಿಯಲ್ ಮೀಡಿಯಾ ನೋಡ್ತಾ ಕಮೆಂಟ್ ಹಾಕ್ತಾ ಕುಳಿತರೆ ಸಮಸ್ಯೆ ಬಗೆ ಹರಿಯುವುದಿಲ್ಲ ಹೋರಾಡುವುದು ಅವಶ್ಯಕತೆ ಇದೆ ಮತ ಚಲಾಯಿಸುವಾಗ
ಹೊಸಬರಿಗೆ ಹೊಸ ಹೊಸ ಪಕ್ಷಗಳಿಗೆ ಅವಕಾಶ ಕೊಡಿ ಸಾವಿರಾರು ಪಕ್ಷಗಳು ಸೃಷ್ಟಿಯಾಗಬೇಕು ವರ್ಷ ವರ್ಷ ಬೇರೆ ಬೇರೆ ಪಕ್ಷಗಳನ್ನು ಆರಿಸಿ ಅದರಲ್ಲಿ ನಿಮ್ಮ ಮಾತು ಕೆಳುವವರನ್ನು ಮಾತ್ರ ಎಲ್ಲದಕ್ಕಿಂತ ಮೊದಲು ಅಂತವರಿಂದ ಮೊದಲು ಏನೇನು ಅಭಿವೃದ್ದಿ ಮಾಡಲು ಸಾಧ್ಯ ಅದನ್ನೆಲ್ಲ ಕಾನೂನಾತ್ಮಕ ಅಗ್ರಿಮೆಂಟ್ ಬಾಂಡ್ ಬರೆಸಿಕೊಂಡು ನಂತರ ಮತ ಚಲಾಯಿಸಿ ಅಂದಾಗ ಮಾತ್ರ ನೀವು ಜಾಣರು ತಿಳಿದುಕೊಳ್ಳಿ ದಡ್ಡರಾಗಬೇಡಿ...

-




ಬರೆದರು ರಾಮಾಯಣ
ಓದಿದರು ಹನುಮದ್ ರಾಮಾಯಣ
ಹೇಳಿದರು ಆಂಜನೇಯ ಸ್ವಾಮಿಗೆ
ನಿಮ್ಮ ಹನುಮದ್ ರಾಮಾಯಣವೇ ಚೆನ್ನ
ಜನ ನನ್ನ ರಾಮಾಯಣ ಓದುವರೆ ರಘೋತ್ತಮ
ಹೇಳಿದರು ಸ್ವಾಮಿ ಆಂಜನೇಯ
ಗುರುವೇ ಸರ್ವ ಶ್ರೇಷ್ಠಮಯ
ಅಳಿಸುವೆ ನನ್ನ ರಾಮಾಯಣ
ಜನ ಮಾಡಲಿ ನಿಮ್ಮ ರಾಮ ಪಾರಾಯಣ
ಎಂದು ಆಂಜನೇಯ ಸ್ವಾಮಿ
ಆಶೀರ್ವದಿಸಿದ ಆ ಕ್ಷಣ
ಮತ್ತೆ ಕಲಿಯುಗದಲ್ಲಿ ತುಳಸಿದಾಸರಾಗಿ
ಹುಟ್ಟಿ ಹನುಮಾನ್ ಚಲಿಸಾ ಬರೆದು
ತೀರಿಸಿದರು ಆಂಜನೇಯ ಸ್ವಾಮಿ ಋಣ
ಇವರ ರಾಮಾಯಣ ಓದುವದೆ ಪುಣ್ಯ
ಇದುವೇ ಗುರು ಕಾರುಣ್ಯ...
ಸರ್ವರಿಗೂ ಸದ್ಗುರು
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು

–ಅಮರವಾಣಿ.



-





D–Dappa iddavara

M–Maiyagin rakta

L–Lekka bittu

T–Tokkolor day😂😂🤣🤣

Happy Medical Lab Technician Day

-



ಜಗಕೆ ಮೂಲ ಭೂಮಿತಾಯಿ
ಜನ್ಮಕೆ ಮೂಲ ಹೆತ್ತ ತಾಯಿ
ಅನ್ನಕೆ ಮೂಲ ಧಾನ್ಯ ಲಕ್ಷ್ಮಿ ತಾಯಿ
ವಿದ್ಯೆ ಕಲಿಯಲು ಬೇಕು ಸರಸ್ವತಿ ತಾಯಿ
ದಾಹ ನೀಗಲು ಗಂಗಾ ಮಾತೆ ತಾಯಿ
ರೋಗ ನಿವಾರಿಸಲು ಧನ್ವಂತರಿ ತಾಯಿ
ಸಹೋದರಿ ಸತಿಯಾಗಿ ಬದುಕಲು ಜೊತೆಯಾಗಿ
ಸತ್ತಮೇಲೂ ಮಡಿಲಲ್ಲಿ ಮಲಗಿಸಿ ಕೊಳ್ಳುವಳು ಭೂ ತಾಯಿ... ಹೀಗೆ ಹುಟ್ಟಿನಿಂದ ಸಾಯುವವರೆಗೂ ಮಹತ್ವದ ಹೆಜ್ಜೆಯನ್ನು ಇಡುವ ಸ್ತ್ರೀ ಕುಲಕೋಟಿಗೆ ನನ್ನ ಅನಂತ ಕೋಟಿ ಪ್ರಣಾಮಗಳು 🙏🙏🙏

-


Fetching 𝒜𝓂𝒷𝒶𝓇ℯ𝓈𝒽 ☀️ Quotes