ಬೆಳ್ಳಿ ಚುಕ್ಕಿಯೊಂದು
ಹೃದಯದ ಕಡಲಿಗೆ ಜಾರಿದಂತೆ
ಮನಸ್ಸಿನ ಪ್ರಶಾಂತತೆಯಲಿ
ಸವಿಯಾದ ಜ್ವಾಲಾಮುಖಿಯೆದ್ದಂತೆ
ಅಂತರಾಳದ ಕೊಳದಲ್ಲಿ
ಮತ್ಸಕನ್ಯೆ ರೂಪು ತಳೆದಂತೆ
ಇಳೆಯ ಸೊಬಗೆಚ್ಚಿಸುವ
ಹಚ್ಚ ಹಸಿರಿನಂತೆ
ಅವಳಾಗಮನವಾಗಿದೆ
ಅಮಾಯಕ ಮನದಲ್ಲಿ
ದಿವ್ಯ ಚಮತ್ಕಾರವನು
ಸೃಷ್ಟಿಸಲು-
ಪ್ರೀತಿ ಅರಿಯದೆ ದೂರ ತಳ್ಳಿದರು
ದೂರದೆ ದೂರವೇ ನಿಂತ,
ಹೊಡೆದ ಹೃದಯದ ಪ್ರತಿ ಚೂರಿನಲ್ಲೂ
ಪ್ರೀತಿಯ ತೇದು ಮೌನದಲ್ಲೇ ಆ ಪ್ರೀತಿಯ
ಎರಕಹೊಯ್ದ,
ಮಗು ಮನದ ಒರಟು ಗಡ್ಡದ ಗಂಡವನು
ಯಾರೆದುರು ಅಳದವನು ಅವಳ ನೆನಪಿನೆದುರು
ಬಿಕ್ಕಿ ನಗುವನು,
ಒಂಟಿ ಕೋಣೆಯ ಒಂಟಿ ಸಾವುಕಾರ ಪುಟ
ಮುಗಿದರು ಮುಗಿಯದಸ್ಟು ಕವನಗಳು ಅವನವು,
ಹುಚ್ಚು ಪ್ರೀತಿಯ ರೂವಾರಿಯವನು.
#ಅವಳ ಪ್ರೀತಿಯ ಹುಚ್ಚನವನು🖤-
ನನ್ನ ಕಣ್ಣುಗಳು👀ನಿನ್ನನ್ನು ಹುಡುಕುತ್ತಿವೆ
ನನ್ನ ಭಾವನೆಗಳು ನಿನ್ನನ್ನು ಪ್ರೀತಿಸುತ್ತಿವೆ💏
ನನ್ನ ಕೈಗಳು👫ನಿನಗಾಗಿ ಕಾಯುತ್ತಿವೆ
ನನ್ನ ಮನಸ್ಸು ನಿನಗೆ ಕರೆ ಮಾಡುತ್ತಿದೆ📞
ನನ್ನ❤ಹೃದಯವಿರೋದು ನಿನಗಾಗಿ ಮಾತ್ರ
ನೀನು ಇಲ್ಲದೆ😰ನಾನು ಸಾಯುತ್ತೇನೆ
ಏಕೆಂದರೆ ನಾನು ನಿನ್ನನ್ನು 💞ಪ್ರೀತಿಸುತಿದ್ದೇನೆ..-
ಒಂದು ದಿಂಬನ್ನು ಹಿಡಕ್ಕೊಂಡು
ಅಲ್ಲಿ ಇಲ್ಲಿ ಇಟ್ಕೊಂಡು ರಾತ್ರಿ ಇಡಿ
ಆಕಡೆ ಈಕಡೆ ಒದ್ದಾಡುವ ನಿನಗೆ ಇಷ್ಟು
ಗಾಂಚಲಿ ಇರ್ಬೇಕಾದರೆ
ರಾತ್ರಿ ತಲೆಹತ್ತಿರ ಇಡೋ ದಿಂಬ್ ಬೆಳಗ್ಗೆನು ಅಲ್ಲೆ ಇರುವಾಗೆ ಶಿಸ್ತಾಗಿ ಮಲಗುವ ನಂಗೆಷ್ಟು ಇರ್ಬಾರದು
ಹೇಳೆಲೇ.....ಹೊಗೇಲೇ..... 😒😒😒
-
ಅವಳ ಹೃದಯವೊಂದು
ಅಂಚೆ ಪಟ್ಟಿಗೆ..!
ಎಷ್ಟೆ ಬರೆದು ಹಾಕಿದರು
ಓದಲಾರಳು ಒಲವಿನ
ಸಂದೇಶ ಪತ್ರಿಕೆ..!!-
ಕೂಡಿಟ್ಟ ಕೆಲವು ಸತ್ಯಗಳು ಸೊರಗಿ ಕರಗಿಹೋಗುವಾಗ,
ಬಚ್ಚಿಟ್ಟ ಹಲವು ಅಸತ್ಯಗಳು ಬೇಲಿಯ ಸಂರಕ್ಷಣೆಯಲ್ಲಿ ಮಿಂದೇಳುತಿವೆ!!!...
-
ಹಾಗೇ -ಹೀಗೆ
ಪೋಲಿ ಮಾತಿನಲ್ಲಿ
ನಲ್ಲ ಅಲ್ಲಲ್ಲಿ ಕಚ್ಚಿ ಮೀಸೆಯಲ್ಲಿ
ಚುಚ್ಚಿ ಹಸಿರ ಹಚ್ಚೆ ಕುತ್ತಿಗೆಯಲ್ಲೆ ಹಾಕಿದವ ಅಂದು ಹಾಗೇ..
ಇಂದೇಕೋ....ಗೋಣಿಯ ಮೇಲೆ ನಾಯಿ ಮೂಲೆಯಲ್ಲಿ ಮಲಗಿದಂತಿರುವನು
ಏಕೇ ಅವ ಹೀಗೆ...?-
"ಅವನ ಜೊತೆಗಿದ್ದಾಗ"
ಪ್ರೀತಿಯಮತ್ತಲ್ಲಿ ತೇಲಿದರೂ
ಸ್ನೇಹದ ಕೈಹಿಡಿದಿದ್ದೆ..!!-