ಸಿರಿಕನ್ನಡತಿ_ ದಕ್ಷಾ✨💗   (✍️ದಾಕ್ಷಾಯಣಿ,ಚ,ದೊಡ್ಡಮನಿ💜)
207 Followers · 54 Following

read more
Joined 16 April 2021


read more
Joined 16 April 2021

ಬರೀ ಕನಸಿದ್ದರೇ ಸಾಲದು,
ಅದಕ್ಕೆ ತಕ್ಕಂತೆ ಪರಿಶ್ರಮ, ತಾಳ್ಮೆ,
ನಂಬಿಕೆಯೂ ಬಹುಮುಖ್ಯ.

-



ಕಣ್ಗಳು ತುಸು ನಾಚಿಕೆಯ ಭಾವವು
ಹೊಂಬನದಲಿ ಮನದಿ ತಬ್ಬಿಬ್ಬಾಗಿ ಒಲವಲಿ
ಕಣ್ಣಂಚಲಿ ನಡೆಯ ಕ್ಷಣದಿ ಜೀವವು
ಹಾದಿಗೆ ಮುನ್ನುಡಿಯು ಸೊಂಪಾಗಿ ಜೊತೆಯಲಿ!!

ತೀರವ ಸೇರುತ ಸಿಹಿಯಪನ್ನೀರು
ಫಸಲು ಬಂದಂತೆ ಮುಂಜಾವಿನಲಿ
ತಾಳಮೇಳವೆ ವಿನಂತಿ ಕೇಳಿ ಹೊಸಚಿಗುರು
ಫಲವ ನೀಡುತಾ ಸಂಪ್ರೀತಿಯಲಿ!!

ಸಹೃದಯವು ಸಂಕೋಚವಾಗಿ
ಹಂಬಲದಿ ನಂಬುಗೆಯಲಿ
ಸಂಕಲನದಲಿ ಸಹಚಾರಿಯಾಗಿ
ಹರುಷದಿ ಸದಾ ಮನದಂಗಳದಲಿ!!

ಕೂಡಿ ಬಾಳ್ವೆಗೆ ಹೆಜ್ಜೆ ಹಾಕುತ ಕಾಲವು
ಭರವಸೆಯ ಬಯಕೆ ಕರಹಿಡಿದು
ಕಂಕಣ ಕಟ್ಟಿ ಮನೆಮಂದಿರಕೆ ಕ್ಷಣವು
ಭವವೇ ಬಾಗಿ ಝೇಂಕಾರದಲಿ ಬೆಳೆದು!!.

✍️ದಾಕ್ಷಾಯಣಿ, ಚ, ದೊಡ್ಡಮನಿ.. ❤

-



ಮನದಲಿ ಅದೇನೋ ಸಂತಸ,
ಮೊದಲ ಸಂದೇಶಕೆ ವರುಷದ ಹರುಷ!!.

-



ಸುಪ್ರಭೆಯಿಂದ ಸಿರಿತನದಿ ಪತಿಗೆ ತಕ್ಕ ಸತಿಯೆಂದು
ಸಂಪ್ರೀತಿಯಲಿ ಮುನ್ನುಡಿಯು ಸಂಬಂಧದಿ ಬೆಸೆದು
ಸೌರಭದಿ ಲಗ್ಗೆಹಾಕುತ ಸಂತಸದ ಬಾಳ್ವೆಗೆ ಹೊಸೆದು
ಸುರಭಿಯಾಗಿ ಕರಹಿಡಿಯುತ ಸಂಭ್ರಮದಿ ಸವಿದು!!.

ಸಂಕೋಚವೂ ನಾಚಿಕೆಯಲಿ ರಂಗಸಜ್ಜಿಕೆಗೆ
ಸುಲಲಿತವಾಗಿ ಮನವಿಂದು ರಂಗಿತರಂಗದ ನಡಿಗೆ
ಸಾಹಿತ್ಯವೇ ಸವಿಸಿ ಸಕ್ಕರೆಯ ಗೊಂಬೆ ನಾನಿಂದು ನಿನಗೆ
ಸಂಪತ್ತಿನಲಿ ಒಲವನ್ನು ಸಂಪಾದಿಸಿ ಧಾರೆ ಎರೆದು ನಿಮಗೆ!!.

ಸಂತಸದಿ ಶರಧಿಯು ಮುತ್ತಿನ ಕ್ಷಣಕಾಲ ಮಾತಂತೆ
ಸಂಚಾರಿಯಾಗಿ ಸಿಹಿಮಾತಿನ ಪರಿಯಂತೆ
ಸೇರುತ ಇಡುಜೋಡಿಯಾಗಿ ಸತಿಪತಿಯಂತೆ
ಸದಾ ನಿಷ್ಕಲ್ಮಶ ಪ್ರೀತಿ ಪಾರುಪತ್ಯ ಬೆರಸಿ!!.

ಸಮೃದ್ಧಿ ನೆಲೆಸಿ ಸುಖವು ಸದಾ ಔತಣದಂತೆ
ಸಲ್ಲಾಪದ ಸಜೆಯು ಸಂಜೆಯಲಿ ಮೂಡಿದಂತೆ
ಸಕಲವೂ ಹಾಲುಜೇನಂತೆ ಸಿಹಿಯಾಗಿ ಕೂಡಿದಂತೆ
ಸದಾ ಹೊಂದಾಣಿಕೆ ಸುಮಧುರದಿ ಬೆರೆಯಿಸಿ ಬಾಳ್ವೆಯಂತೆ!!.

✍️ದಾಕ್ಷಾಯಣಿ, ಚ, ದೊಡ್ಡಮನಿ.. ❤


-



ಇಂದಿನ ಇಳಿಸಂಜೆಗೊಂದು
ಮೆಲ್ಲನೆಯ ಒಲವಿನ ತಾಲೀಮು
ಇವಳೊಂದಿಗೆ ಮೂಡುತ ಕ್ಷಣವಿಂದು
ಮೌನದಿ ಸಂಭಾಷಣೆಯ ಕರಾಮು!!

ಒಂದೊಂದು ಮಾತೊಂದು ಬೆಳೆದು ಈ ಕ್ಷಣವೂ
ಹಬೆ ಬೀರಿ ಆಗಸಕೆ ಸಾಲಾಗಿ ಹರಡುವಾಗ
ಒಬ್ಬಂಟಿಯಾಗಿ ಮಂಜು ತಬ್ಬಿಬ್ಬಾಗಿ ಈ ಭೂಮಿಯು
ಹೂನಗೆಯಲಿ ಮನವಿ ಬರುತ ಈಗ!!

ಪಾಲುದಾರಿಕೆ ಪದಪಲ್ಲವಿಯ ಮೂಲಕ
ಅಕ್ಕರಕೆ ನಿಲುಕದ ನನ್ನೋಳು
ಪದ್ಯಪಾದದಿ ನಾಚಿನೀರಾದಂತೆ ಫಲಕ
ಅನನ್ಯ ಅನುಭವ ವೈಭವದಿ ಮನದೊಳು!!

ಭವ್ಯವಾಗಿದೆ ಬೀಗುವ ಐಸಿರಿಯು
ಜಗವು ಮೆಚ್ಚುವ ದಿನಗಣನೆಗೆ
ಭವಸಾಗರದಿ ಮಿಂದೆದ್ದು ಬಾಳ್ವೆಯು
ಜೀವಕೆ ರಂಗ ತುಂಬಬೇಕೆಂದು ನವಭಾವನೆಗೆ!!.

✍️ದಾಕ್ಷಾಯಣಿ, ಚ, ದೊಡ್ಡಮನಿ..💓





-



ಕಡುಕೆಂಪು ಮೃದುಮನದ ಸಿಹಿಯಹಾಲ್ಗೆನ್ನೆಯು
ತುಸುನಾಚಿಕೆಯ ಮೇಳತುಂಬುತಾ ಮರೆಯಲಿ ಮೊಗಕೆ
ಕಂತು ನೀಡುವಷ್ಟು ಸಹಿಯ ಹಾಕುತ ಸವಿಲಜ್ಜೆಯು
ತಾಳಮೇಳವ ಹೂಡುತ ಮೆಲ್ಲನೆಯ ಮನಕೆ!!.

ಕನಸಿಂದು ನನಸಾಗಿ ಕಲರವದ ಕಾನನದಂತೆ
ಹಚ್ಚಹಸಿರಾಗಿ ಹೂಬನದಲಿ ಪಸರಿಸುತ ಹೂವಾಗಿ
ಕಡಲತುಂಬಿ ಹಂಬಲವು ಮುತ್ತುರತ್ನದ ಮನಸಂತೆ
ಹನಿಯೂ ಒಂದೊಂದು ಕ್ಷಣದಿ ಸಲುಗೆಯಲಿ ತುಂತುರಾಗಿ!!.

ಕರಹಿಡಿದು ಜೊತೆಗೆ ಒಲವಿಂದ ಬಾಳ್ವೆಯು
ಸುಮವಾಗಿ ಸಂಬಂಧದಿ ಮೇಳೈಸಿ ಘಮದಲಿ
ಕೂಡಿ ಹೆಜ್ಜೆಹಾಕಬೇಕೆಂಬ ಕಾಡುತ ಹಾದಿಯು
ಸೌರಭದಲಿ ಸುರಭಿಯಾಗಿ ಜೀವವೂ ಕೂಡುತಲಿ!!.

ಕಾಲಕೂಡಿ ಹಾಡಿದೆ ಸಕಾಲವೂ ಮೇಘಮಳೆಯಂತೆ
ಪದಪದ್ಯದಲಿ ಸಾಲು ಅಕ್ಕರವಾಗಿ ಸಂಯಮದಲಿ
ಕೇಳುಗ ಸಹೃದಯಿಯ ನಿಷ್ಕಲ್ಮಶ ಬಯಕೆಯಂತೆ
ಪಾಲುದಾರಿಕೆ ನಾ ಕೇಳಿದೆ ಗೆಳತನವಿಂದು ಒಡನಾಟದಲಿ!!.

✍️ದಾಕ್ಷಾಯಣಿ, ಚ, ದೊಡ್ಡಮನಿ...❤

-



ಮಳೆಮೋಡ ಇಳಿಸಂಜೆ ಘಳಿಗೆಗೆ ಕಳೆಕಟ್ಟುತಲಿ
ಚಿಗುರಿದ ಎಳೆಯ ಬಲು ಒಲವಧಾರೆಯು
ಮೂಡುತ ಮೋಹದ ಪ್ರೇಮದಿ ಎದೆಯಾಳದಲಿ
ಚರಣ ಹಾಕುತ ಮನದಿ ಸದಾ ಸುಗ್ಗಿಯು!.

ಮಂಪಿನ ತಂಪಿನ ಒಣ ಹವೆಯಲಿ
ಚಿತ್ತವು ಚಿತ್ರವ ಬಿಡಿಸಿ ಕನಸಿನ ಹೊಳೆಯು
ಮುಂಜಾವಿನ ಹೊಂಗನಸು ಕಾಣುತಲಿ
ಚೆಂದದಿ ನೀ ಎನ್ನವ ಎಂಬ ನಂಬುಗೆಯು!.

ಮುಂಜಾವಿನ ಮುತ್ತು ಸದ್ದಿಲ್ಲದೆ ಮೊಗದಲಿ
ರಂಗಾಗಿ ಕೆನ್ನೆಯಕಡಲು ನಸುನಾಚಿಕೆಯು
ಮೈಮನ ಕೂಡಿ ಝೇಂಕಾರದಿ ಮಿಯ್ಯುತಲಿ
ರುಜುಹಾಕುತ ನಾ ಒಂದೇ ಎಂಬ ಭಾವನೆಯು!.

ಮುನ್ನುಡಿ ಬರೆಯಬೇಕೆಂದು ಜೊತೆ ಜೊತೆಯಲಿ
ನಿರೀಕ್ಷೆಗಳ ಮೇಳ ಹೊಮ್ಮಿಸುವಿಕೆಗೆ ಬಾಳ್ವೆಯು
ಮನದರಸಿಯಾಗಬೇಕೆಂದಿರುವೆ ಪ್ರತಿಕ್ಷಣದಲಿ
ನೀನ್ನರಸಿಯಾಗಿ ಮನೆಮನ ಬೆಳೆಗುತ ಕೊನೆಯು!.

✍️ದಾಕ್ಷಾಯಣಿ,ಚ,ದೊಡ್ಡಮನಿ...❤



-



ಮನನೆಚ್ಚಿದ ಬಂಧನಕೆ,
ನಾಲ್ಕರ ಮಾಸದ ಸಂಪ್ರೀತಿಯಲಿ!!.

✍️ದಾಕ್ಷಾಯಣಿ, ಚ, ದೊಡ್ಡಮನಿ.... ❤

-



ಮನದ ಹಾದಿಗೆ ಬೆಳ್ಮುಗಿಲು ರಂಗಾಗಿ
ಮೈಮನವು ತಂಪೆಲರದಿ ಸೊಂಪಾಗಿ
ಮೋಹದ ಒಲವು ಬಾಳ್ವೆಗೆ ಚೆಂದಾಗಿ
ಮಿಯುತ ತನುವು ನಂಬುಗೆಯಲಿ ಒಂದಾಗಿ!.

ಮನಸಿನ ತಾಣವು ಹಸಿರೆಲೆಯಾಗಿ
ಮೇಳದ ಹಾದಿಯೂ ಹೂಬನವಾಗಿ
ಮೂಲಸಿಗದ ಪ್ರೇಮವು ಆಗಮವಾಗಿ
ಮಂಗಳಕೆ ತುಂಬುತಾ ಮೈಮನವು ಸಜ್ಜಾಗಿ!.

ಮುಂಗುರುಳು ಕೆನ್ನೆಯ ಸಮೀಪವಾಗಿ
ಮಳೆಮೋಡವು ಮಳೆಬಿಲ್ಲಿನ ರಂಗಸಜ್ಜಿಕೆಯಾಗಿ
ಮುಡಿಯುವ ಮಲ್ಲಿಗೆಯು ನಾಚಿಕೆಯಲಿ ತಾನಾಗಿ
ಮೆಲ್ಲಗೆಯಲಿ ಮನವು ನನ್ನಿ ಆತ್ಮಸಂಗಾತಿಯಾಗಿ!.

✍️ದಾಕ್ಷಾಯಣಿ,ಚ,ದೊಡ್ಡಮನಿ.❤

-



ಅಂಗೀಕರಿಸಿದ ಬಾಂಧವ್ಯವೆಂಬ ಬಂಧನದಲಿ,
ಮಾಸ ಕಳೆದು ಈ ದಿನ ಸಂಭ್ರಮದಲಿ!!.

✍️ದಾಕ್ಷಾಯಣಿ, ಚ, ದೊಡ್ಡಮನಿ...❤




-


Fetching ಸಿರಿಕನ್ನಡತಿ_ ದಕ್ಷಾ✨💗 Quotes