ಅತ್ತೆ
ತಾಯಿ
ಆಗದಿದ್ದರೂ
ನೀ
ತಾಯಿಯಂತೆ
ನೋಡು
ಅಮ್ಮ
ಬೈದರೆ
ಕೋಪಿಸಿಕೊಳ್ಳದ
ನೀನು
ಅತ್ತೆ ಬೈದಾಗ
ಅಮ್ಮನೇ
ಬೈದದ್ದು
ಎಂದು
ತಿಳಿ
ಮನೆಯು
ಉಳಿಯುತ್ತೆ
ಮನವು
ಅರಳುತ್ತೆ-
ಹೆಣ್ಮಕ್ಕಳ ಪ್ರಾಬ್ಲಮ್ ಏನು ಅಂತಾನೇ ಅರ್ಥಾ ಆಗೋದಿಲ್ಲ🙆🏻♂️🤦🏻♂️🙆🏻♂️
ಮದುವೆ ಆದ್ಮೇಲೆ ಅತ್ತೆ ಇಷ್ಟ ಆಗಲ್ಲ...
ಮುಂದೆ ಅತ್ತೆ ಆದಾಗ ಸೊಸೆ ಇಷ್ಟ ಆಗಲ್ಲ🤪😝
ಇದೆ ಇಲ್ಲಿ ಒಂದು ಸಮಸ್ಯೆ ಇದೆ🤪-
ನಮ್ಗ್ಯಾಕ ಬೇಕು --೫
ಅತ್ತ ಅಜ್ಜಿ ತನ್ನ ಮೊಮ್ಮಗನಿಗೆ ಕಂಕಳಲ್ಲಿ ಕೂರಿಸಕೊಂಡು ಊರೆಲ್ಲ ತಿರಗಿ , ಹೆಂಗ್ವನೇ ನನ್ನ ಹುಲಿಯ ಅಂತ ಕೇಳೋ ಆಸೆ, ಇತ್ತ ಅವಳ ಸೊಸೆ ಮೊಮ್ಮಗನ್ನ ಮುದಕಿ ಮುಟ್ಟಿದರೆ ಸಾಕು ಕಳೆದಹೋಗ್ತಾನ ಏನೋ ಅವಳ ಕೂಸು ಅನ್ನೋ ಹಂಗ ಆಡ್ತಾಳೆ.
-
ತನ್ನಂಗ ನೋಡಿದರೆ ಭಿನ್ನಿಲ್ಲ ಭೇದವಿಲ್ಲ!
ತನ್ನಂಗ ತನ್ನ ಮಗಳಂಗ !ನೋಡಿದರ!
ಕಣ್ಣ ಮುಂದದ ಕೈಲಾಸ!!
-
ನಮ್ಗ್ಯಾಕ ಬೇಕು --೧೦
ಪಕ್ಕದ ಮನೆ ಅತ್ತೆಗೆ, ಪಕ್ಕದ ಮನೆ ಸೊಸೆಗೆ ಸಿಕ್ಕಾಪಟ್ಟೆ ನಂಟು, ಅವರ ಮನೆ ಅತ್ತೆಗೆ, ಇವರ ಮನೆ ಸೊಸೆಗೆ ಸದಾ ಜಗಳದ ಗಂಟು...-
" ಅಮ್ಮ , ಈ ಸಾರಿಯಂತೂ ತಪ್ಪು ನಿನ್ನ ಸೊಸೆಯದ್ದೇ ,
ಆದರೂ ನನಗೆ ಬುದ್ದಿ ಹೇಳುತ್ತಿದ್ದಿಯಾ " ಕೋಪಿಸಿಕೊಂಡ ಮಗ .
" ಗೊತ್ತು ಕಂದ , ಆದರೆ ಕೂಗಾಡಿದರೆ ತಪ್ಪು ಸರಿ ಹೋಗುತ್ತಾ ... ? ತಿದ್ದಿದರಾಯಿತು . ನೀನು , ನಾನು ಸಹ ತಪ್ಪು ಮಾಡ್ತೀವಿ ಅಲ್ವಾ .. " ಸಮಾಧಾನ ಮಾಡಿದಳು ಮಗನಿಗೆ .
ರೂಮಿನಿಂದ ಹೊರಗಡೆ ಬಂದಾಗ ಈ ಮಾತನ್ನು ಕೇಳಿಸಿಕೊಂಡಿದ್ದ ಬೀಗಿತ್ತಿ ಹೇಳಿದಳು , " ನಿಮಗೆ ಇನ್ನೊಬ್ಬ ಮಗನಿದ್ದಿದ್ದರೆ ನನ್ನ ಎರಡನೇ ಮಗಳಿಗೆ ಮದುವೆ ಮಾಡುತ್ತೀರಾ ಎಂದು ಕೇಳುತ್ತಿದ್ದೆ ..! "-
ಒಂದು ಸಂಸಾರದಲ್ಲಿ ಗಂಡ ಹೆಂಡತಿಗಿಂತ
ಅತ್ತೆ - ಸೊಸೆ ಜೋಡಿ ಚೆನ್ನಾಗಿ ಇರಬೇಕು
ಆಗಲೇ ಗಂಡ ಅನ್ನುವ ಬಡಪಾಯಿ
ಕೊಂಚ ನೆಮ್ಮದಿಯಿಂದ ಬದುಕಲು ಸಾಧ್ಯ
"ಸೊಸೆ ಹೇಗೆ ಇದ್ದರೆ ಎನ್ ಅತ್ತೆ ತಾಯಿಯ
ಸಮಾನ ಅನ್ನುವ ಚಿಕ್ಕ ಗುಣ ಇದ್ದರೆ ಸಾಕು
ಅತ್ತೆ ಹೇಗೆ ಇದ್ದರೆ ಎನ್ ಸೊಸೆ ಮಗಳ
ಸಮಾನ ಅನ್ನುವ ಗುಣ ಇದ್ದರೆ ಸಾಕು..."
ಹೀಗೆ ಸಿಕ್ಕರೆ ನಿಮ್ಮ ಪುಣ್ಯ 💯😂
ಸಿಗದೇ ಹೋದರೆ ದಿನಾ ಕುರುಕ್ಷೇತ್ರ ಯುದ್ಧ
ಪಕ್ಕಾ 💯-
ಅತ್ತೇಗಿರಿ - ಪಾಪ(ಪಿ) ಸೊಸೆ
ಅಳಿಯ ಒಳ್ಳೆಯವನು ಮಗಳ ಕಾಲು ಬೇಕಾದರೂ ಒತ್ತುತ್ತಾನೆ.
ಮಗನೂ ಒಳ್ಳೆಯವನು ಅಮ್ಮನ ಮಾತೇ ವೇದ ವಾಕ್ಯ ಎನ್ನುತ್ತಾನೆ.
ಹಾಗಾದರೆ ಸೊಸೆ ಏನು ಪಾಪ ಮಾಡಿದ್ದಾಳೆ?-
ಅತ್ತೆಗೆ ಶುಗರ್ ಚಿಂತೆ
ಸೊಸೆಗೆ ಫಿಗರ್ ಚಿಂತೆ
ಅತ್ತೆಗೆ ಕೂದಲುದುರುವ ಚಿಂತೆ
ಸೊಸೆಗೆ ಬಿಳಿಕೂದಲ ಚಿಂತೆ
ಅತ್ತೆಗೆ ತಿನ್ನುವ ಚಿಂತೆ
ಸೊಸೆಗೆ ಅಡಿಗೆಯ ಚಿಂತೆ
ಅತ್ತೆಗೆ ಮಾತ್ರೆ ಚಿಂತೆ
ಸೊಸೆಗೆ ಪಾತ್ರೆ ಚಿಂತೆ
ಅತ್ತೆಗೆ ಚೆಕಪ್ ಚಿಂತೆ
ಸೊಸೆಗೆ ಮೇಕಪ್ ಚಿಂತೆ
ಅತ್ತೆಗೆ ಗಂಟಿನ ಚಿಂತೆ
ಸೊಸೆಗೆ ನೆಂಟರ ಚಿಂತೆ
ಅತ್ತೆಗೆ ಜಗಳವಾಡೊ ಚಿಂತೆ
ಸೊಸೆಗೆ ತಿರುಗಾಡೋ ಚಿಂತೆ
ಅತ್ತೆಗೆ ಸೊಸೆ ತಲೆ ನೋವು
ಸೊಸೆಗೆ ಅತ್ತೆ ತಲೆ ನೋವು..!!-
ಬೀದಿ ದೀಪ
ನಡೆಯೋಕೂ ಆಗದೆ ಇದ್ರೂ ಸೊಸೆಯನ್ನ ಸಸಾರ ಮಾಡೋದು ಬಿಡಲ್ಲ ಕೆಲವು ಅತ್ತೇರು.
ಒಂದು ದಿನ ಸೊಸೆ ಮನೆಯಲ್ಲಿ ಇರದಿದ್ದರೂ ಮನೆ ಕೆಲ್ಸ (ಜವಾಬ್ದಾರಿ) ಮಾಡೋಕೆ ಕಷ್ಟ ಪಡೋ ಅತ್ತೇರು.-