🌹🌹ನನ್ನವನಿಗಾಗಿ 🌹🌹
ಬರೆಯುವದೆಲ್ಲ ಬಯಸುವುದೆಲ್ಲ ನನ್ನವನಿಗಾಗಿ
ಕನಸು ಕನವರಿಕೆಯ ಭಾವ ಅವನಿಗಾಗಿ
ಮಿಡಿತದ ಉಸಿರು ಭಾವವು ನನ್ನವನಿಗಾಗಿ
ನಾನು ನನ್ನೊಳಗಿನ ಪ್ರೀತಿ ಅವನಿಗಾಗಿ !!
👇👇ಅಡಿ ಬರಹದತ್ತ
ಹೋಗಿ ಬರಲಿ ನಿಮ್ಮ ಚಿತ್ತ 👇👇-
ಮನಸ್ಸಿಟ್ಟು ಹರಸಿ, ಹಾರೈಸಿ...
ನಮ್ಮೂರು ಕರುನಾಡಿನ ಕುಂದಾನಗರಿಯ ತವರೂರು ಬಯ... read more
*ನ್ಯಾನೋ ಕಥೆ*
*ಸಾಧಕ*
"ಕನ್ನಡೀಲಿ ನಿನ್ನ ಮುಖ ನೋಡ್ಕೋ ಹೋಗು.. ಸಾಧನೆ ಮಾಡ್ತಾನಂತೆ ಸಾಧನೆ !!.." ಎಂಬ ಮಾತಿಗೆ ಆ ಹುಡುಗ ಬೇಸರಗೊಂಡು ಕನ್ನಡಿ ನೋಡಿದ. ಮುಖ ತುಂಬಾ ವಿರೂಪವಾಗಿ ತೋರಿತು. "ಸಾಧನೆ ಮಾಡುವವನಿಗೆ ತಾನೊಬ್ಬ ಸಾಧಕ ಎಂಬ ಭಾವ ಇದ್ರೆ ಸಾಕು.." ಎಂದು ಮೇಸ್ಟ್ರು ಹೇಳಿದ್ದು ನೆನಪಾಗಿ ಆತ ಉತ್ಸಾಹದಿಂದ ಮತ್ತೊಮ್ಮೆ ಕನ್ನಡಿ ನೋಡಿದ.. ಆಗ ಅವನ ಮುಖ ಸಾಧಕನಂತೆ ಪ್ರಜ್ವಲಿಸತೊಡಗಿತ್ತು...!!-
ಪದಗಳಿಗೆ ಆಯಸ್ಸು ಜಾಸ್ತಿ
ಆ ಪದಗಳೇ ನನ್ನೊಡಲ ಆಸ್ತಿ.....!
ಕಾಯುವ ಜೀವಕೆ ನೆನಪೇ ಚಿರಾಸ್ತಿ
ನೆನೆವ ಜೀವಕೆ ಉಸಿರ ಅಸ್ಥಿ.....!
-
ಉಪಮಾನ ಉಪಮೇಯಗಳೇ ಬೇಕಿಲ್ಲ
ನನ್ನವನ ವರ್ಣಿಸಲು
ಉತ್ಸವದಲ್ಲಿನ ಅಪರೂಪದ ಮೂರ್ತಿ
ನಾ ಮೆಚ್ಚಿದ ನನ್ನವನು
ಉರಿಬಿಸಿಲಲ್ಲೂ ತಂಪರೆವ ತಂಗಾಳಿ
ನನ್ಮನವ ಗೆದ್ದವನು
ಉಸಿರಲ್ಲಿ ಬೆರೆತು ಬಾಳೆಲ್ಲ ಹಸಿರಾಗಿಸಿ
ಕಣ್ಗಾವಲಾದವನು
ಉತ್ತರಗಳೇ ಸಿಗದ ಪ್ರಶ್ನೆಗಳನ್ನೆಲ್ಲ
ಮಾಯಮಾಡಿದವನು
ಉಸಿರಿನ ಪಿಸುಮಾತಲಿ ಪಿಸುಗುಡುವ
ದನಿಯಾದವನು
ನನ್ನವನು....ನನಗಾಗಿ.....!!
-
* ಗೆಳೆತನ *
ಬರೆದರೂ ಮುಗಿಯದ ಲೇಖನ
ಸ್ನೇಹ ಎಂಬೆರಡಕ್ಷರದ ಗೆಳೆತನ ....!!
ಹಾಲು ಜೇನಿನಂತೆ ಸ್ನೇಹ
ಕಡಲು ಮುಗಿಲಿನಂತೆ ಮೋಹ....!!
ಸ್ನೇಹ ಎಂಬ ಸಣ್ಣ ಕವನ
ಸಾವಿರಾರು ಭಾವನೆಗಳ ಮಿಲನ ....!!
ಬದುಕಿನ ಜಂಜಾಟಕ್ಕೆ ಬೇಸತ್ತ ಮನಗಳಿಗೆ
ತಂಪರೆವ ಮುಸುಕು ಮಳೆ ಈ ಗೆಳೆತನ....!!
ಸ್ನೇಹದಲ್ಲಿ ಬರದಿರಲಿ ಮನಸ್ತಾಪ
ಕಡೆಗಣಿಸಿ ನಡೆಯಿರಿ ಕೋಪ ತಾಪ....!!
ಮುಗ್ಧ ಮನಗಳೊಳಗೆ ಸ್ನೇಹದ ಸಂಚಲನ
ಜೀವನದ ಕೊನೆಯವರೆಗೂ ನಡೆಯಲಿ ಗೆಳೆತನ....!!
ಪದಗಳಲ್ಲಿ ನಾನಿಂದು ಮುಗಿಸಿದರೂ ಮುಗಿಯದ ಸ್ಪಂದನ
ನೂರಾರು ಕಾಲ ಚಿರವಾಗಿರಲಿ ನಮ್ಮೆಲ್ಲರ ಈ ಬಂಧನ....!!-
ಅವನೊಂತರ ತರತರ
ಹೀಗೆ ಹೇಗೋ ಹಾಗೆ
ಕೋಪ- ತಾಪ
ಪ್ರೀತಿ- ಪ್ರೇಮ
ನಗು- ಅಳು
ದಿಟ್ಟ ಹಠ
ಎಲ್ಲ ಬೆರೆತ ಭಾವಜೀವಿ
ಬರೆಯಲು ಪದಗಳಲಿಲ್ಲ
ಓದಿದರೂ ಅರ್ಥವಾಗಲ್ಲ
ಜೀವನದ ಪಾಠಕ್ಕೆ
ಮುನ್ನುಡಿಯ ಬರೆದವನು
ಕೊನೆಯ ಪುಟದವರೆಗೂ ಜೊತೆಯಾದವನು
ಆದರೂ ಬಾಳ ಪುಸ್ತಕಕ್ಕೆ .........
ಶೀರ್ಷಿಕೆ ನೀಡದೇ ಉಳಿದವನು
ನನ್ನವನು......ಒಂಥರಾ ಹಾಗೇ.....!!-
ಜೀವನದ ದಾರಿ ಹಳಿ ತಪ್ಪಿದಂತಾಗಿದೆ
ನಿನ್ನೊಲವಿಂದ ದೂರ ಸರಿದಂತಾಗಿದೆ
ಹಸಿರು ಕೂಡ ಬಯಲಾದಂತಾಗಿದೆ
ನೆನಪುಗಳೇ ಮರುಕಳಿಸಿ ಕಾಲನಿಂತಂತಾಗಿದೆ
ಭಗವಂತನ ಕೃಪೆಯೊಂದೇ ಕೈಹಿಡಿದು
ಮುನ್ನಡೆಸುವದು.....
ತಾಳ್ಮೆಯ ಪರೀಕ್ಷೆಗೊಂದು ಅನಿರೀಕ್ಷಿತ
ತಿರುವು ದೊರಕಬೇಕಿದೆ....
-
ಬಂಗಾರದ ತೀರದೊಳಗೆ
ಮಿಂಚಾಗುತಿಹ ಅಲೆಗಳು
ಬದುಕು ಭಾರದ ಹಾರ
ಸಂಚು ಮಾಡುತಿರೋ ಕೈಗಳು.....!!
ಮುಸ್ಸಂಜೆಗೂ ಮುಂಜಾವಿಗೂ
ಬೆಸೆಯುತಿರೋ ಭಾವಬಂಧ
ಕನಸಿಗೂ ನನಸಿಗೂ
ಸದಾ ಒಲವಿನನುಬಂಧ....!!
ನನಗಾಗಿ ಬದುಕುವುದು
ನಾನಾಗಿ ಬದುಕುವುದು
ತೀರದ ಅಳೆಗಳ ಬದುಕು
ತೀರದ ಬಯಕೆಗಳ ಮುಸುಕು....!!
ಸ್ವಚ್ಛಂದದ ಅಲೆಗಳಲಿ
ನವ ಬದುಕಿನ ನಿರೀಕ್ಷೆ
ತೆರೆಗಳ ತಾಳದ ಹಿಡಿತದಲಿ
ತನ್ಮನವ ತರದಿಡುವ ತವಕದಲಿ....!!
-
** ಅಗಲಿಕೆ **
ವಿಪರ್ಯಾಸವೇ ಇದು,
ಸಹ್ಯವೇ ಇದು ಇಂದು..
ಸರಳವಾಗದು ಎಂದೆಂದು....!!
ನೋವುಂಡ ಜೀವಕೆ
ನಗುವುದ ಕಲಿಸಿ
ಮರುಕದಲಿ ಬೆಂದ ಭಾವಕೆ
ಭಾವನೆಗಳ ಪೋಣಿಸಿ
ತಮದಿಂದ ಹೊರತೆಗೆದು
ತಾಯ್ತನವ ಊಣಿಸಿ......!!
ಈ ದೇಹದಿಂದಾಗಬಹುದು ಈಗ
ಪರವಶದಿ ಬಿಡಿಸಿಕೊಂಡಾಗ
ಆತ್ಮದಿಂದಾಗದು ಕೊನೆಗೂ
ಅಗಲಿಕೆಯ ಮಗ್ಗಲು ಬದಲಿಸಲು....!!
-