Smooth Vijay G   (Vijay Kumar G)
199 Followers · 88 Following

read more
Joined 11 February 2021


read more
Joined 11 February 2021
18 SEP 2022 AT 10:47

ಕಳೆದು ಹೋದರು
ಏಳೇಳು ಜನ್ಮ
ಅವಳೇ ನನ್ನವಳೆಂದು
ಬರೆದಾಗಿದೆ ಆ ಬ್ರಹ್ಮ
ಇವಳೇ ನನ್ನ
ಸೊಸೆಯೆಂದು
ಎಂದು ಹೇಳುತ್ತಾಳೋ .?
ನಮ್ ಅಮ್ಮ
ಆ ಕ್ಷಣವೇ ಸಾರ್ಥಕ
ನನ್ನ ಈ ಜನ್ಮ 🤭😁

-


10 AUG 2022 AT 19:10

ಮುಂಜಾನೆಯಾ ಬೆಚ್ಚನೆಯಾ
ಬಿಸಿಲಿನ ಸ್ಪರ್ಶ ಪಡೆದು
ಅರಳುತ್ತಿರುವ ಹೂ ನೀನೂ
ನಿನ್ನೊಲವಿನ ಮಧುವನು
ಹೀರಲೆಂದೇ ನಿನ್ನ ಬಳಿಗೆ
ಹಾರಿ ಬಂದಿರುವ ದುಂಬಿ ನಾನು

-


31 MAY 2022 AT 22:41

ನೀ , ನನ್ನ ಬದುಕಿಗೆ ಆಗಮನವಾದ ದಿನವೇ ,, ಹೃದಯದಲ್ಲಿ ಹಬ್ಬದ ವಾತಾವರಣ ...
ನೀನೇ ನನ್ನವೆಲೆಂದು ತಿಳಿದ ಮೇಲೆ ,,
ನಾ ,, ಮನದ ಬಾಗಿಲಿನಲ್ಲಿ , ಕಟ್ಟಿರುವೆ
ಪ್ರೀತಿಯಾ ತೋರಣ ..... ❣️❣️❣️

-


18 MAR 2022 AT 22:59

ಅವಳ ಮೃದುವಾದ ಅಂಗಾಳಿಗೆ
ಮುತ್ತಿಡುವ ಬಯಕೆ ಮಣ್ಣಿಗೆ ..!
ಅವಳ ಪಾದಗಳನ್ನು ಅಂಗೈಯಲ್ಲಿ ಹಿಡಿದು
ಬೆಳ್ಳಿ ಉಂಗುರ ಹಾಕುವ ಬಯಕೆ ನನಗೆ ..!
ಬೆಳದಿಂಗಳ ರಾತ್ರಿಯಲ್ಲಿ ಅವಳು ನೆಡೆದು
ಹೋಗುತ್ತಿದ್ದರೆ ,, ಸಿಕ್ಕಾಪಟ್ಟೆ ಖುಷಿಯಂತೆ
ಅವಳನ್ನೇ ನೋಡುವ ಬೆಳದಿಂಗಳ ಕಣ್ಣಿಗೆ ..!

-


18 MAR 2022 AT 11:12

ವಿದ್ಯಾದೇಗುಲದಲ್ಲಿ ಪ್ರತ್ಯಕ್ಷವಾದ
ಕನಸಿನ ದೇವತೆ ನೀ
ಶಾರದಾಂಬೆಯೇ ಬೆಸೆದಿರುವ
ಅನುಬಂಧದ
" ರಮ್ಯಾ " ನುರಾಗವೇ ನೀ

ಬ್ರಹ್ಮನ ಹೆಂಡತಿಯೇ
ಬೆಸೆದಿರುವ ಈ ಅನುಬಂಧವ
ದೂರ ಮಾಡಲು
ಬಯಸುತ್ತಾನಾ ..? ಆ ಬ್ರಹ್ಮ ..!
ನೀನೇ ನನ್ನವಳು
ಕಳೆದು ಹೋದರು ಏಳು ಜನ್ಮ ..!

-


12 FEB 2022 AT 22:30

ಬಂದರೆ ನೀ ಸನಿಹಕೆ
ಹೃದಯಕ್ಕೂ ಹೆದರಿಕೆ
ತಿಳಿಸಲಾಗದೆ ಮನದ ಬಯಕೆ
ಮಾತುಗಳು ಜಾರಿವೇ ಮೌನಕೆ— % &

-


11 FEB 2022 AT 20:48

ಅವಳು ಮುದ್ದು ಮುದ್ದಾಗಿ ಮಾತನಾಡುತ್ತಿದ್ದರೆ ,
ಅರಗಿಣಿಯೊಂದು ಕನ್ನಡ ಭಾಷೆಯ ಕಲಿತು
ನನ್ನೆದೆಯಲ್ಲಿ ಬಂದು ಮಾತಿಗೆ ಕುಳಿತಂತೆ ..

ಹೆಜ್ಜೆಗಳನ್ನಿಟ್ಟು ಬರುತ್ತಿದ್ದರೆ , ಅವಳ ವೈಯಾರದ ನಡೆಯ ನೋಡುವ ನಯನಗಳಿಗೆ , ಗರಿ ಬಿಚ್ಚಿ ನರ್ತಿಸುವ ನವಿಲಿನ ನಾಟ್ಯ ನರ್ತನದಂತೆ ..— % &

-


2 FEB 2022 AT 7:52

ಕವನ , ಕವಿತೆಗಳ ಒಲವಿಲ್ಲದಿದ್ದಂತಹ ನನ್ನ ಮನಸ್ಸೀಗ ರಮ್ಯಾ ಬರಹಗಳ ಬಂಧನದಲ್ಲಿದ್ದು . ಹೃದಯ ರಮ್ಯಾಕ್ಷರಗಳಿಂದ ಕೂಡಿದ ಪ್ರೇಮಪುಸ್ತಕಗಳ "ಪ್ರೀತಿಯ" ಗ್ರಂಥಾಲಯವಾಗಿದೆ . ಕವಿಮನವಲ್ಲದ ಮನಸ್ಸೊಂದು ಕವಿತೆಗಳ ಬರೆದಿರುವಾಗ , ಮನದ ಭಾವನೆಗಳಿಗೂ ಈಗ ಕವನ ಕವಿತೆಗಳು ಪರಿಚಯವಂತೆ .. V R2

-


3 JAN 2022 AT 19:15

ನೀ ಮಾತನಾಡುವಾಗ ಆ ಘಳಿಗೆ
ನಾ , ಮೌನಿಯಾಗಿದ್ದೆ ಅರೆಘಳಿಗೆ
ಆಗಲೇ ತಿಳಿದಿತ್ತು ನನ್ನ ಮನಸ್ಸಿಗೆ
ನೀ ಬರುವೆಯೆಂದು ನನ್ನ ಕನಸಿಗೆ

ಆ ದಿನವೇ ,,
ಹೃದಯ ಸಿಲುಕಿರುವಾಗ ಪ್ರೀತಿಯ ಬಲೆಗೆ
ಈ ದಿನ ,,
ಲೇಖನಿ ಬರೆಯುತ್ತಿದೆ ರಮ್ಯಾ ಬರವಣಿಗೆ ..

-


28 DEC 2021 AT 9:29

ಅವಳ ಪಾದಗಳ ಸ್ಪರ್ಶ ಪಡೆದ ಮಣ್ಣುಗಳು ಹೂವುಗಳಾಗಿ ಪರಿವರ್ತನೆಯಾಗುತ್ತಿದ್ದರೆ , ಹೂವಿನ ತೋಟಗಳಲ್ಲಿ ಸುತ್ತಾಡುತ್ತಿದ್ದ ಚಿಟ್ಟೆಗಳ ಗಮನ ಅವಳ ಕಡೆಗಿತ್ತು .

ಚಿಟ್ಟೆಗಳು ಸಹ ರಮ್ಯಾಕ್ಷರಗಳಲ್ಲಿ ರಮ್ಯಾನುರಾಗದ ಕವನಗಳನ್ನು ಬರೆಯಬೇಕೆಂದು ಲೇಖನಿಯ ರೂಪ ತಾಳಿದವು ... ಆ ಚಿಟ್ಟೆಗಳು ರಮ್ಯಾ ಕವನಗಳನ್ನು ಬರೆದರೇನೂ ಪ್ರಯೋಜನ ...? ಅವಳೇ ಕನ್ನಡದ
ಒಂದು ಸುಂದರವಾದ ರಮ್ಯಾ ಕವನ ...... 💖

-


Fetching Smooth Vijay G Quotes