ಎಲ್ಲಿ ಕಾಣೆಯಾಗಿರುವೆ ಮುದ್ದು ತಂಗಿ
ಕೊಡಿಸುವೆ ಬಾರೆ ಬಣ್ಣಬಣ್ಣದ ಅಂಗಿ
ನೀನಿರದೆ ಪದಪುಂಜಗಳು ಕಂಬನಿ
ಕೋಡಿ ಹರಿಸಿವೆ ಕಮಂಗಿ
ಬರಬಾರದೇ ತಿಳಿಸಂಜೆಯಲಿ ಅಲೆಯಾಗಿ
ಕೊಡಿಸುವೆ ನಿನಗೆ ಚಾಕಿ
ತುಂಬಲೆ ಬೇಕು ನೀ ಇಲ್ಲಿವರೆಗೆ ಪದಗಳ ಬಾಕಿ
ಎಲ್ಲಿರುವೆ ಅಂದಚಂದದ ಕವಿತೆಗಳ ಬರಹಗಾರ್ತಿ
ನಿನ್ನ ಭವ್ಯ ಸ್ವಾಗತಕ್ಕೆ ಮುತ್ತೈದೆಯರು ತಂದಿಹಿಯರು ಆರುತಿ
ತದೇಕಚಿತ್ತದಿಂದ ಕಂಗಳು ಹುಡುಕುತ್ತಿವೆ
ಕವಿ ಹೃದಯಗಳ ಬಳಗ ಕಾಯುತ್ತಿವೆ
ಆತ್ಮೀಯ ಸ್ನೇಹಿ ಮನಸುಗಳು ಮಿಡಿಯುತ್ತಿವೆ
ನಿನ್ನ ದರ್ಶನಕ್ಕೆ ಎದುರು ನೋಡುತ್ತಿರುವೆ
ಮಾಮರದ ಕೋಗಿಲೆ ಎಲ್ಲಿ ಮರೆಯಾಗಿರುವೆ
ವಿಳಾಸ ತಿಳಿಸು ಮುದ್ದು ತಂಗಿ ಓಲೆ ಕಳಿಸುವೆ
ನೀ ಹಿಡಿದ ಲೇಖನಿ ಉಸಿರು ಬಿಗಿಹಿಡಿದು ಕಾದಿದೆ
ಹೊತ್ತಿಗೆ ನಿನ್ನ ವಿರಾಮಕ್ಕೆ ಮೌನ ಮುರಿದಿದೆ..☛✍ಸಿದ್ದರಾಜಗುರು ಎಸ್ ವಡ್ನವರ ಹೆಸ್ಕಾಂ ಗದಗ☛✍-
ಸಹೋದರತ್ವದ ಪ್ರತೀಕ
ಶ್ರೀರಕ್ಷಾ ಕರ್ತವ್ಯದ ದ್ಯೋತಕ
ಅಣ್ಣ ತಂಗಿಯರ ಅನುಬಂಧ
ರಕ್ಷಾಬಂಧನದಿ ಬಧ್ರ ಸಂಬಂಧ-
ಎಂದೂ ನಿರೀಕ್ಷಿಸಿರಲಿಲ್ಲ ನಾ
ನಿನ್ನೊಲವಿನ ಕಾಳಜಿ ತುಂಬಿದ ಪ್ರೀತಿಯ;
ಎಂದೂ ಬಯಸಲಿಲ್ಲ ನೀ
ನನ್ನೆಲ್ಲಾ ಹುಸಿ ಕೋಪ-ತಾಪವ!
ಆದರೂ ನಿರೀಕ್ಷೆ ಬಯಕೆಗಳನ್ನೆಲ್ಲಾ ಮೀರಿ
ನಿನ್ನ ಪ್ರೀತಿಯ ದೂರ ಸರಿಸಿ ಒಳಗೊಳಗೇ
ದುಃಖಿಸುತ್ತಿರುವ ಹುಚ್ಚಿಯು ನಾ;
ಬಯಸದಿದ್ದರೂ ನನ್ನೆಲ್ಲಾ ಕೋಪವೇ ನಮ್ಮೀ
ಅನುಬಂಧಕೆ ಮುಳುವಾಯಿತೆಂದು ಅದನ್ನು
ನೆನೆದು ಮರುಗುತ್ತಿರುವ ಮುಗ್ಧನು ನೀ..!!-
ಅಣ್ಣ ತಮ್ಮಂದಿರೊಂದಿಗಾಚೆ ಹೋದರು ಅನುಮಾನಿಸಿ ನೋಡುವ ಜಗವಿದು. ತೀರಾ ಮರ್ಯಾದಸ್ಥರಾಗಿ ಬಾಳಲು ಹೋದರೆ, ಬಾವಿಯೊಳಗಿನ ಕಪ್ಪೆಯಾಗಬೇಕಾದೀತು ಎಚ್ಚರ.
-
ಅಭಿನಂದನೆಗಳು ಸಂತೋಷ ಅಣ್ಣ.
1877ರ ಬರಹಗಳ ಗಡಿದಾಟಿದ ಸಂಭ್ರಮಕ್ಕೊಂದು ಅಕ್ಕರೆಯ ಅಭಿನಂದನೆಗಳು ಸಂತು ಅಣ್ಣ.
ನಿಮ್ಮ ಬರಹದಲ್ಲಿ ಚಿನ್ನಮ್ಮಾ ಎಂಬ ಶೀರ್ಷಿಕೆ ವಾಸ್ತವವಾಗಿ ಹುಡುಗನು ಹುಡುಗಿಗೆ ಹೇಳುವ ಮಾತು,ಅದರ ಸಂಭಾಷಣೆ,ತಾತ್ಪರ್ಯ,ಎಲ್ಲವೂ ಸುಂದರ ಅಣ್ಣ. ನೀವು ಬರೆಯುವ ಬರಹಗಳು ಮತ್ತಷ್ಟು ಮೊಗದಷ್ಟು ಬರಹಗಳು ಸಾಹಿತ್ಯ ಲೋಕದಲ್ಲಿ ರಾರಾಜಿಸಲಿ....✍️♥️
ನೀವು ಇನ್ನೂ ಹೆಚ್ಚಿನ ಬರಹದ ಒಡೆಯ ನೀವಾಗಲೆಂದು ಹಾರೈಸುತ್ತೇನೆ ಶುಭವಾಗಲಿ ಸಂತು ಅಣ್ಣ......😍💞😍-
❤️ಹುಟ್ಟು ಹಬ್ಬದ ಶುಭಾಶಯಗಳು ಅಗ್ರಜ ❤
°~•~•~•~•~•~•~•~•~•~•~•~•~•~•~•~•~•~•°
ಇಡುವ ಪ್ರತಿ ಹೆಜ್ಜೆಯಲ್ಲೂ ನೋವೆಂಬ ಮುಳ್ಳೆಲ್ಲ
ಪಾದದಡಿ ನಲುಗಿ ಹೂವಾಗಲಿ, ಸಂತಸದ ಕ್ಷಣಗಳೇ ಹೆಜ್ಜೆ
ಗುರುತುಗಳ ಮೈಲಿಗಲ್ಲಾಗಲಿ💕
ಕಷ್ಟ-ಸುಖದ ಹಾದಿಯಲ್ಲಿ ಕೈಹಿಡಿದು ಜೊತೆ ಸಾಗುವ
ಜೀವವೊಂದು ಸಂಪೂರ್ಣ ನಿಮ್ಮ ಸ್ವತ್ತಾಗಿ ಬದುಕು
ಬಂಗಾರಾವಾಗಲಿ ಅಣ್ಣ.❣️
ಗೆಲುವಿನ ಹಾದಿಯ ಖಾಯಂ ಪಯಣಿಗರು ನೀವಾಗಿ ,
ನಗುವೆಂಬ ಬೆಳಕೊಂದು ತುಟಿಯಂಚಲ್ಲಿ ಸದಾ
ಮಿನುಗುತ್ತಿರಲಿ ಮುದ್ದು ಅಣ್ಣ💜
ಹೆಸರಲ್ಲೇ ಶಿವನಿದ್ದಾನೆ ಅಹ್ ಮುದ್ದು ಶಿವನ ಕೃಪೆ
ಆಶೀರ್ವಾದ ಸದಾ ನಿಮ್ಮೊಟ್ಟಿಗಿರಲಿ 💕
Sry fr the late wish 🤐stay kush, stay safe🙌
keep writing, keep inspiring 💙 ಶಿಕು ಅಣ್ಣ 💕-
ವಾತ್ಸಲ್ಯದಲ್ಲಿ ಅಮ್ಮನಂತವನು,
ಗದರುವಿಕೆಯಲ್ಲಿ ಅಪ್ಪನಂತವನು,
ಅಕ್ಕರೆ ಉಣಬಡಿಸುವಲ್ಲಿ ಅಕ್ಕನಂತವನು,
ಸಿಹಿ ತಿನಿಸುವಲ್ಲಿ ತಮ್ಮನವನು,
ತರಲೆ ಮಾಡುವುದರಲ್ಲಿ ಪುಟ್ಟ ಕಂದನವನು,
ಸಲುಗೆ ತೋರುವಲ್ಲಿ ಉತ್ತಮ ಸ್ನೇಹಿತನವನು,
ಮನಸ್ಸು ಅರಿಯುವುದರಲ್ಲಿ ನಿಷ್ಕಲ್ಮಶ ಪ್ರೇಮಿ ಅವನು,
ತಪ್ಪು ತಿದ್ದುವ ಗುರು ಅವನು,
ನೋವಿನಲ್ಲೂ ನನ್ನಲ್ಲಿ ನಗು ಮೂಡಿಸುವ ಜೋಕರ್ ಅವನು,
ನೇರಳಂತೆ ಜೊತೆ ನಡೆಯುವ ನನ್ನ ಪಾಲಿನ ರಕ್ಷಕನವನು,
ಪ್ರತಿ ಕ್ಷಣದಲ್ಲೂ ಜೊತೆಯಾಗಿರುವ ಉಸಿರವನು,
ನಾ ದೇಹವಾದರೆ ನನ್ನ ಆತ್ಮವೇ ಅವನು, ನನ್ನ ಅಣ್ಣನವನು, ನನ್ನ ಅಣ್ಣನವನು...
ನನ್ನ ಸಂತಸದ ಚಿಲುಮೆಗೆ ವರ್ಣ ರಂಜಿತ ಋತುವಿನಲ್ಲಿ ಜಿನುಗುವ ಮುತ್ತಿನ ಹನಿಯೊಂದಿಗೆ ಉಲ್ಲಾಸದಿ ತಿಳಿಸುವೆ
ರಕ್ಷಾ ಬಂಧನದ ಪ್ರೀತಿಯ ಶುಭಾಶಯ....
-