ಸ್ನೇಹದಿಂದ ಕರೆಯುವ ಮನ ನಮ್ಮದು
ಪ್ರೀತಿಯಿಂದ ಬರುವ ಹೊಣೆ ನಿಮ್ಮದು
ಬಂದು ಸೇರಿದಾಗ ಆಗುವ ಮಹದಾನಂದ
ನಮ್ಮ ನಿಮ್ಮೆಲ್ಲರದು .....! # #
*ನೆನಪು*
ಆಕಾಶ್ ದೀಪು ❤❤-
ಸ್ವಲ್ಪ ದಿನ ನಾವು ಆನ್ ಲೈನ್ ಬಂದಿಲ್ಲ, ಯಾರ ಜೊತೆನು ಮಾತಾಡಿಲ್ಲ ಅಂದ್ರೆ... ನಾವು ಬದುಕೇ ಇಲ್ಲಾ ಇನ್ನೂ ಯಾವತ್ತು ನಾವು ಬರೋದೇ ಇಲ್ಲಾ, ಅನ್ಕೊಂಡು, ನಮ್ಮೇಲ್ಲಾ ನೆನಪುಗಳಿಗೆ ಭಾವ ಪೂರ್ಣ ಶ್ರದ್ದಾಂಜಲಿ ಅರ್ಪಿಸ್ಬಿಡ್ತಾರೆ,
ಮತ್ತೆ,,,, ಅವರ ನೆನೆಪುಗಳು ನಮ್ಮ ಮನಸಲ್ಲಿ ಯಾವಾಗಲೂ ಜೀವಂತವಾಗಿರುತ್ತೆ ಅನ್ನೋದು ಮರೆತು ಬಿಡ್ತಾರೆ...-
ಅವನೆಂದರೆ.... ❤
ಮನದ ಗೋಡೆಯ ಮೇಲೆ ಸ್ನೇಹವಾಗಿ ಅರಳಿದ ಒಲವಿನ ಮುತ್ತು. ಬೇಕೆಂದರೂ ಅಳಿಸಲಾಗುತ್ತಿಲ್ಲ ಈ ಹೃದಯದಲ್ಲಿ ಅವನಿಟ್ಟ ಹೆಜ್ಜೆಯ ಗುರುತು. ಬರೆಯಲು ಪದಗಳೇ ಸಿಗುತ್ತಿಲ್ಲ ಅವನನ್ನು ಕುರಿತು. ಮೌನವೇ ಮಾತನಾಡಿದಂತೆ ಅವನನ್ನು ಸಂಪೂರ್ಣವಾಗಿ ಅರಿತು.-
ನೆನೆಯುತಿರುವೆ ನಿನ್ನೆ ಬಿಡುವಿಲ್ಲದೆ
ಸಮಯ ಸಾಗಿಸಲು ಕಠಿಣ ನೀನಿಲ್ಲದೆ
ಜಾರುತಿದೆ ಕಣ್ಣಹನಿ ನಿನ್ನ ನೋಡಲಾಗದೆ
ಜೀವಿಸುತಿರುವೆ ಈ ಕವಿತೆಗಳಲಿ ನೀ ಇಲ್ಲಿಲ್ಲದೆ
-
ಸತ್ತ ಬದುಕ ಗೋರಿ ಮೇಲೆ
ಒಣಗಿಯೂ ಕದಲದ ಹೂವ ಮಾಲೆ
ನಾನಿಲ್ಲದಿದ್ದರೂ ಪರಿಣಾಮ ಬೀರಬಲ್ಲೆ
ನೀ ಬರೆವ ಕವಿತೆ ಮೇಲೆ-
ಈಗೀಗ ಬರೆಯುವ ಕವಿತೆಗಳೆಲ್ಲಾ
ನಿನ್ನ ನೆನಪಿನ ಗೋರಿಯ ಮೇಲೆ ಇಡುವ ಹೂವುಗಳಷ್ಟೇ !-
ಸಂಭ್ರಮಿಸಲು ಮನಸ್ಸಿಗೇಕೋ ಹಿಂಜರಿಕೆ
ಹಿಂದೆ ಸಂಭ್ರಮಿಸಿದ ದಿನಗಳು ನೋವಾಗಿ ಕಾಡುತ್ತಿರುವುದರಿಂದ...-
ನಿನ್ನ ನೆನಪು ಈ ಮನದೊಳಗೇ ದೀಪಾವಾಗಿದೆ ನಾ ದೀಪದ ಬೆಳಕು ನೆರಳಿನ ಆಟ ಆಡುವ ಪತಂಗವಾಗಿರುವೆ.
-
ಮೌನದೂರಿನ ಪಯಣದಲಿ
ನೆನಪುಗಳೇ ನೇಪಥ್ಯ ವಹಿಸಿದೆ....
ಮುಗಿಯದ ಅಕ್ಷಯ ಪಾತ್ರೆಯೊಳಗೆ
ಬಗ್ಗಿ ನೋಡಿದಾಗ ಕಂಡಿದ್ದು
ನನ್ನ ಆಂತರ್ಯ ಅರಿಯುವ ಮನವನ್ನು
ಮೌನದ ಹಿಂದಿನ ಮಾತನ್ನು,
ಖುಷಿಯ ಹಿಂದಿನ ನೋವನ್ನು
ಅರಿಯುವ ತನುವನ್ನು.....
ತಿಳಿಸಂಜೆಯಲಿ ಬಣ್ಣದೋಕುಳಿಯಲಿ
ಮಿಂದೆದ್ದ ಸೂರ್ಯನು ಸಪ್ತ ಸಾಗರದ
ನೀರಿನಲಿ ಪ್ರತಿಫಲನವಾದಂತೆ
ನನ್ನದೇ ಪ್ರತಿಬಿಂಬವೇನೋ ಎಂದು ತಿಳಿದೆ.
ನಂತರ ತಿಳಿಯಿತು ಅಲ್ಲಿರುವುದು ನಾನಲ್ಲ
ನನ್ನ ಮನ ಅರಿತ 'ನನ್ನವರು' ಎಂದು......-